ಜಮ್ಮು-ಕಾಶ್ಮೀರದ ಭಾರೀ ಹಿಮಪಾತದಲ್ಲಿ ಸಿಲುಕಿ ಐವರು ಯೋಧರು ದುರಂತ ಸಾವು

Spread the love

5-Killed

ಶ್ರೀನಗರ, ಜ.25- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‍ನ ಗಂದೇರ್‍ಬಲ್ ಜಿಲ್ಲೆಯ ಸೋನ್‍ಮಾರ್ಗ್‍ನಲ್ಲಿ ಉಂಟಾದ ಭಾರೀ ಹಿಮಪಾತದಲ್ಲಿ ಐವರು ಯೋಧರು ದುರಂತ ಸಾವಿಗೀಡಾಗಿದ್ದಾರೆ. ಹಿಮಪಾತದಡಿ ಸಿಲುಕಿದ್ದ ಇನ್ನೂ ಕೆಲವರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ ಎಂದು ಸೇನಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರರೆ.
ಇದೇ ವೇಳೆ ಇನ್ನೊಂದು ಹಿಮಪಾತ ಪ್ರಕರಣದಲ್ಲಿ ಗುರೆಜ್‍ನ ಬುದ್ಗಾಮ್ ಗ್ರಾಮದಲ್ಲಿ ಮನೆಯೊಂದರ ಮೇಲೆ ಹಿಮಬಂಡೆ ಕುಸಿದು ಮೆಹಾಜ್ ಉದ್ದೀನ್‍ಲೋನ್, ಆತನ ಪತ್ನಿ ಮಗ ಮತ್ತು ಮಗಳು ಮೃತಪಟ್ಟರು. ಮತ್ತೊಬ್ಬ ಪುತ್ರನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇದರಿಂದಾಗಿ ಹಿಮಪಾತದಲ್ಲಿ ಒಟ್ಟು ಇಂದು ಬೆಳಗ್ಗೆ ಮೃತಪಟ್ಟವರ ಸಂಖ್ಯೆ ಒಂಭತ್ತಕ್ಕೇರಿದೆ.

ಇನ್ನೂ ಒಂದು ವಾರ ಕಾಲ ಕಾಶ್ಮೀರ ಕಣಿವೆಯ ವಿವಿಧೆಡೆ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಹಿಮಪಾತದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಕಾಶ್ಮೀರದ ಬಹುತೇಕ ಸ್ಥಳಗಳು ಸಂಪರ್ಕ ಕಡಿದುಕೊಂಡಿವೆ.  ಜಮ್ಮ-ಕಾಶ್ಮೀರದಲ್ಲಿ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin