ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಗ್ರೆನೇಡ್ ದಾಳಿಗೆ ಓರ್ವ ಬಲಿ, ಯೋಧ ಗಾಯ

Spread the love

kashmir

ಶ್ರೀನಗರ, ಮಾ.3- ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ನಾಗರಿಕನೊಬ್ಬ ಮೃತಪಟ್ಟು ಸಿಆರ್‍ಪಿಎಫ್ ಯೋಧ ಗಾಯಗೊಂಡಿದ್ದಾರೆ.  ಶ್ರೀನಗರದಿಂದ 31ಕಿಮೀ ದೂರದಲ್ಲಿರುವ ಮುರ್ರನ್ ಚೌಕ್‍ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿದ್ದ ಭದ್ರತಾ ಪಡೆ ಮೇಲೆ ಉಗ್ರರು ಇಂದು ಗ್ರೆನೇಡ್ ಎಸೆದರು. ಸೋಟದ ಪರಿಣಾಮವಾಗಿ ಮಹಮ್ಮದ್ ಅಯೂಬ್ ವಾನಿ ಎಂಬ ನಾಗರಿಕ ಮೃತ ಪಟ್ಟು, ಸಿಆರ್‍ಪಿಎಫ್ ಯೋಧ ದಲ್ಜೀತ್ ಕಿರಣ್ ಗಾಯಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin