ಜಯಲಲಿತಾ ಉಚ್ಚಾಟಿಸಿದ್ದ ಚಿನ್ನಮ್ಮನ ಸಹೋದರರು ಮತ್ತೆ ಪಕ್ಷಕ್ಕೆ ವಾಪಸ್
ಚೆನ್ನೈ, ಫೆ.15- ಅಕ್ರಮ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗುವುದಕ್ಕೂ ಮುನ್ನ ಎಐಎಡಿಎಂಕೆ ಅಧಿನಾಯಕಿ ವಿ.ಕೆ.ಶಶಿಕಲಾ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪಕ್ಷ ವಿರೋಧೀ ಚಟುವಟಿಕೆ ಆರೋಪಕ್ಕಾಗಿ ಜಯಲಲಿತಾರಿಂದ ಉಚ್ಛಾಟಿಸಲ್ಪಟ್ಟಿದ್ದ ತಮ್ಮ ಸಹೋದರರಾದ ದಿನಕರನ್ ಮತ್ತು ಡಾ.ವೆಂಕಟೇಶ್ ಅವರನ್ನು ಚಿನ್ನಮ್ಮ ಇಂದು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರು. ತಮ್ಮ ಸಹೋದರ ಮತ್ತು ರಾಜ್ಯಸಭೆ ಮಾಜಿ ಸದಸ್ಯ ದಿನಕರನ್ ಅವರನ್ನು ಎಐಎಡಿಎಂಕ್ ಉಪ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಶಶಿಕಲಾ ಅವರಿಗೆ ಸಂಪೂರ್ಣ ಬೆಂಬಲ ನೀಡುವಂತೆ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು.
ಜಯಲಲಿತಾ 2011ರಲ್ಲಿ ದಿನಕರನ್ ಮತ್ತು ವೆಂಕಟೇಶನ್ ಅವರನ್ನು ಉಚ್ಚಾಟಿಸಿದ್ದರು. ಐದು ವರ್ಷಗಳ ಬಳಿಕ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದಾಗಿ ಶಶಿಕಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೈಲು ಪಾಲಾಗುವುದಕ್ಕೆ ಮುನ್ನ ತಮ್ಮ ವ್ಯಾಪ್ತಿಯಲ್ಲಿರುವ ಹಕ್ಕು-ಅಧಿಕಾರಗಳನ್ನು ಬಳಸಿಕೊಂಡಿರುವ ಅವರು ತಮ್ಮ ಕುಟುಂಬದ ಸದಸ್ಯರಿಗೆ ಪಕ್ಷದಲ್ಲಿ ಮಣೆ ಹಾಕಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >