ಜಯಲಲಿತಾ ನಡೆ ದೇಶಕ್ಕೆ ದೊಡ್ಡ ಕಂಟಕ : ಬಿ.ಎಸ್.ಸುರೇಶ್ ವಾಗ್ದಾಳಿ

jayalalitha

ಬೆಂಗಳೂರು, ಸೆ.8- ಕಾವೇರಿ ನೀರಿನ ವಿಚಾರ ಸಂಬಂಧ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನಡೆ ದೇಶಕ್ಕೆ ದೊಡ್ಡ ಕಂಟಕ, ಆಡಳಿತ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಹಾಗೂ ಆಡಳಿತ ಪಡೆಯಲು ವೋಟ್‌ಬ್ಯಾಂಕ್‌ಗಾಗಿ ಉಚಿತ ಕೊಡುಗೆ ನೀಡಿ ಇಡೀ ದೇಶವನ್ನೇ ಬರಡು ಮಾಡುವ ಮಹಾಮಾರಿ ಎಂದು ಆಡಳಿತ ಸುಧಾರಣಾ ಸಲಹಾ ವೇದಿಕೆಯ ಅಧ್ಯಕ್ಷ ಬಿ.ಎಸ್.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿದ ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿದೆ ಎಂದು ಹೇಳಿದರು.

ವಾಸ್ತವಾಂಶ ಅರಿಯದೆ ಸರ್ವೋಚ್ಛ ನ್ಯಾಯಾಲಯವು ಬರೀ ದಾಖಲೆ ಆಧಾರದಲ್ಲಿ ನೀರು ಬಿಡುವಂತೆ ತೀರ್ಪು ನೀಡಿರುವುದು ದೇಶದ ನ್ಯಾಯಲಯವೇ ಅಥವಾ ಪಾಕಿಸ್ತಾನ ನ್ಯಾಯಾಲಯವೇ ಎಂದು ಪ್ರಶ್ನಿಸಿದ್ದಾರೆ. ಇಂತಹ ವಿಚಾರದಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಶರು ತಜ್ಷರೊಂದಿಗೆ ತೆರಳಿ ಸ್ಥಳ ಪರಿಶೀಲಿಸಿ ವಾಸ್ತವಾಂಶ ತಿಳಿದುಕೊಂಡು ತೀರ್ಪು ನೀಡಬೇಕು ಎಂದು ತಿಳಿಸಿದರು.  1924ರಲ್ಲಿ ಮೈಸೂರು ಮಹಾರಾಜರು ಹಾಗು ಬ್ರಿಟಿಷರು ನಡುವೆ ಕಾವೇರಿ ನೀರಿನ ಒಪ್ಪಂದವಾಗಿತ್ತು. ಈ ಒಪ್ಪಂದಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಅವರು ವಿರೋದ ವ್ಯಕ್ತಪಡಿಸಿದ್ದರು. ಅ ಒಪ್ಪಂದದಂತೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುತ್ತಿದ್ದು, ಕೂಡಲೇ ಒಪ್ಪಂದವನ್ನು ರದ್ದುಮಾಡಿ ಹೊಸ ನಿಯಮ ಜರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

► Follow us on –  Facebook / Twitter  / Google+

Sri Raghav

Admin