ಜರ್ಮನ್ ಕಾನ್ಸುಲೇಟ್ ಕಚೇರಿ ಮೇಲೆ ತಾಲಿಬಾನ್ ದಾಳಿ : ಇಬ್ಬರ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

Spread the love

Germon-02

ಮಜರ್-ಐ-ಷರೀಫ್, ನ.11- ಅಫ್ಘಾನಿಸ್ತಾನದ ಮಜರ್-ಐ-ಷರೀಫ್‍ನಲ್ಲಿರವ ಜರ್ಮನ್ ಕಾನ್ಸುಲೇಟ್ ಕಚೇರಿ ಮೇಲೆ ತಾಲಿಬಾನ್ ಉಗ್ರರು ನಡೆಸಿದ ಪ್ರಬಲ ಟ್ರಕ್ ಬಾಂಬ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಆಕ್ರಮಣದ ಮೂಲಕ ತಾಲಿಬಾನ್ ಉಗ್ರರ ಹತ್ಯಾಕಾಂಡ ಮುಂದುವರೆದಿದೆ.  ಸ್ಫೋಟಕಗಳನ್ನು ತುಂಬಿದ್ದ ಮಿನಿ ಟ್ರಕ್ಕನ್ನು ಆತ್ಯಾಹುತಿ ದಳದ ಆಕ್ರಮಣಕಾರರು ನಗರದ ಕಾನ್ಸುಲೇಟ್ ಕಚೇರಿಯ ಗೋಡೆಗೆ ಅಪ್ಪಳಿಸಿದಾಗ ಭಾರೀ ಸ್ಫೋಟ ಸಂಭವಿಸಿತು. ಇದಾದ ನಂತರ ಈ ಸ್ಥಳದಲ್ಲಿ ಗುಂಡಿನ ನಿರಂತರ ದಾಳಿಯ ಮೊರೆತವೂ ಕೇಳಿಬಂದವು.  ಈ ದಾಳಿಯಲ್ಲಿ ಕಾರ್ಯಾಲಯದ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಬಾಂಬ್ ಸ್ಫೋಟದ ತೀವ್ರತೆಗೆ ಹತ್ತಿರದ ಇತರ ಕಟ್ಟಡಗಳು ಮತ್ತು ಅಂಗಡಿಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸೈಯದ್ ಕಮಲ್ ಸಾದತ್ ತಿಳಿಸಿದ್ದಾರೆ.

ಸಮರ ಸಂತ್ರಸ್ತ ಆಫ್ಘಾನಿಸ್ತಾನದ ಪ್ರಶಾಂತ ನಗರ ಎಂದೇ ಗುರುತಿಸಿಕೊಂಡಿರುವ ಮಜರ್-ಐ-ಷರೀಫ್ ಪಟ್ಟಣದಲ್ಲಿ ತಾಲಿಬಾಲ್ ಉಗ್ರರ ಈ ಅಟ್ಟಹಾಸದಿಂದ ಸಾರ್ವಜನಿಕರು ಹೆದರಿ ಕಂಗಾಲಾಗಿದ್ದಾರೆ.  ಕುಂದುಜ್ ಪ್ರಾಂತ್ಯದ ಮೇಲೆ ಈ ತಿಂಗಳ ಆರಂಭದಲ್ಲಿ 32 ನಾಗರಿಕರನ್ನು ಬಲಿ ತೆಗೆದುಕೊಂಡ ಅಮೆರಿಕದ ವಾಯುಪಡೆ ದಾಳಿಗೆ ಪ್ರತೀಕಾರದ ಆಕ್ರಮಣ ಇದಾಗಿದೆ ಎಂದು ತಾಲಿಬಾನ್ ಉಗ್ರರು ಹೇಳಿದ್ದಾರೆ.

ಐವರು ಉಗ್ರರ ಸೆರೆ :

ಈ ಮಧ್ಯೆ, ಭಯೋತ್ಪಾದನೆ ಹಣಕಾಸು ಕುಮ್ಮಕು ನೀಡಿತ್ತಾ ಶಸ್ತ್ರಾಸ್ತ್ರಗಳ ಖರೀದಿಗೆ ನೆರವಾಗುತ್ತಿದ್ದ ಆರೋಪದ ಮೇಲೆ ಜರ್ಮನಿಯ ಸಾಕ್ಸೋನಿ ಪ್ರದೇಶದ ಉತ್ತರ ರೈನಿ-ವೆಸ್ಟ್‍ಫಾಲಿಯಾದಲ್ಲಿ ವಿವಿಧೆಡೆ ದಾಳಿ ನಡೆಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin