ಜಾಕ್ವೆಲಿನ್’ಗೆ ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸುವಾಸೆಯಂತೆ

Spread the love

5

ಬಾಲಿವುಡ್‍ನ ಟಾಮ್‍ಬಾಯ್ (ಗಂಡುಬೀರಿ) ಎಂದೇ ಗುರುತಿಸಿಕೊಂಡಿರುವ ಸೆಕ್ಸಿ ತಾರೆ ಜಾಕ್ವೆಲಿನ್ ಫರ್ನಾಂಡಿಸ್‍ಗೆ ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸುವುದೆಂದರೆ ಅಚ್ಚುಮೆಚ್ಚು. ಸಾಹಸ ಪ್ರಧಾನ ಚಿತ್ರಗಳಲ್ಲಿ ಇನ್ನಷ್ಟು ಮಿಂಚಬೇಕೆಂಬ ಬಯಕೆ. ಎ ಫ್ಲೈಯಿಂಗ್ ಜಾಟ್ ಚಿತ್ರಕ್ಕಾಗಿ ಮೊದಲ ಬಾರಿಗೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡ ದ್ವೀಪರಾಷ್ಟ್ರ ಶ್ರೀಲಂಕಾದ ಈ ಬೆಡಗಿಗೆ ತಾನು ಬಾಲಿವುಡ್‍ನ ಆ್ಯಕ್ಷನ್ ಐಕಾನ್ ಆಗಬೇಕೆಂಬ ಹಂಬಲ. ಈಕೆ ನಟಿಸುತ್ತಿರುವ ರೀಲೋಡ್ ಮತ್ತು ಡ್ರೈವ್ ಸಿನಿಮಾಗಳೂ ಕೂಡ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್. ಸಾಹಸ ಪ್ರಧಾನ ಸಿನಿಮಾಗಳಲ್ಲಿ ನಟಿಸುವುದು ಒಂದು ವಿಸ್ಮಯ ಅನುಭವ. ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣದಲ್ಲಿ ಭಾಗವಹಿಸಲು ನನಗೆ ಇಷ್ಟ.

ಬಾಲಿವುಡ್ ನಟರಿಗೆ ಹೋಲಿಸಿದರೆ ನಟಿಯರಿಗೆ ಇಂಥ ಸಿನಿಮಾಗಳಲ್ಲಿ ಅವಕಾಶ ಕಡಿಮೆ. ಆದರೆ ಇನ್ನಷ್ಟು ಸಾಹಸಮಯ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನಸೆಳೆಯಬೇಕೆಂಬ ಆಸೆ ಇದೆ. ಅಂಥ ಪಾತ್ರಗಳಲ್ಲಿ ನಟಿಸಲು ನಾನು ಸಿದ್ಧಳಿದ್ದೇನೆ. ಅದಕ್ಕಾಗಿ ತರಬೇತಿ ಕೂಡ ಪಡೆಯುತ್ತೇನೆ ಎಂದು ಜಾಕ್ವೆಲಿನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ನಾಯಕಿಯರಿಗೆ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸಲು ಅವಕಾಶ ಇರುತ್ತದೆ ನಮ್ಮ ಬಾಲಿವುಡ್ ಚಿತ್ರ ನಿರ್ಮಾತೃಗಳು ಆ ಚಿತ್ರಗಳಿಂದ ಪ್ರೇರಣೆ ಪಡೆದು ನಮಗೂ ಅವಕಾಶ ನೀಡಬೇಕು ಎಂದು ಕಿಕ್ ಚಿತ್ರದ ನಟಿ ಹೇಳಿಕೊಂಡಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin