ಜಾಗ್ವಾರ್ ನಲ್ಲಿ ಶೃತಿ ಹಾಸನ್ ‘ಐಟಂ’ ಸಾಂಗ್
ಬೆಂಗಳೂರು. ಆ.26 : ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ಯಾಂಡಲ್ವುಡ್, ಟಾಲಿವುಡ್ಗೆ ಏಕಕಾಲದಲ್ಲಿ ಭರ್ಜರಿಯಾಗಿಯೇ ಎಂಟ್ರಿ ಕೊಡುತ್ತಿರುವ ದ್ವಿಭಾಷಾ ಚಿತ್ರ ‘ಜಾಗ್ವಾರ್’ ಈಗಾಗಲೇ ಟೀಸರ್ನಿಂದ ಚಿತ್ರರಸಿಕರ ನಿರೀಕ್ಷೆ ಗರಿಗೆದರಿಸಿದೆ. ಈಗ ಹೊಸದೊಂದು ಸುದ್ದಿ ಏನಂದರೆ, ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ‘ಜಾಗ್ವಾರ್’ನಲ್ಲಿ ಐಟಂ ಸಾಂಗ್ವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಶೃತಿ ಹಾಸನ್ ನಾಯಕಿಯಾಗಿ ಬ್ಯುಸಿಯಾಗಿದ್ದರೂ ಆಗಾಗ್ಗೆ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿಲ್ಲ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗೆ ‘ಆಗಡು’ ಚಿತ್ರದಲ್ಲಿ ಶೃತಿ ಐಟಂ ಆಗಿದ್ದರು.
ಈಗ ಟಾಲಿವುಡ್, ಕಾಲಿವುಡ್ಗಳಲ್ಲಿ ಹಲವು ಚಿತ್ರಗಳಲ್ಲಿ ಹೀರೋಯಿನ್ ಆಗಿದ್ದರೂ ‘ ಜಾಗ್ವಾರ್’ನಲ್ಲಿ ಐಟಂ ಸಾಂಗ್ಗೆ ಶೃತಿ ಓಕೆ ಎಂದಿದ್ದಾರಂತೆ. ಐಟಂ ಸಾಂಗ್ಗಾಗಿ ಶೃತಿಗೆ ಸೂಪರ್ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ರಾಜಮೌಳಿ ಶಿಷ್ಯ ಮಹದೇವ್ ನಿರ್ದೇಶಿಸುತ್ತಿರುವ ಜಾಗ್ವಾರ್’ನಲ್ಲಿ ದೀಪ್ತಿ ನಾಯಕಿ. ಜಗಪತಿಬಾಬು,ರಮ್ಯಕೃಷ್ಣ ಮತ್ತಿತರರು ನಟಿಸುತ್ತಿರುವ ಈ ಚಿತ್ರದಲ್ಲಿ ಈಗ ಶೃತಿ ಹಾಸನ್ ಸೇರ್ಪಡೆಯಾಗಿದ್ದಾರೆ.
► Follow us on – Facebook / Twitter / Google+