ಜಾಗ್ವಾರ್ ಯಶಸ್ಸಿಗೆ ವಿಶೇಷ ಪೂಜೆ

Worship

ಕನಕಪುರ, ಅ.7-ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿತಿನ್‍ಕುಮಾರ್ ಅಭಿನಯದ ಅದ್ಧೂರಿ ವೆಚ್ಚದ ಜಾಗ್ವಾರ್ ಚಲನ ಚಿತ್ರದ ಯಶಸ್ಸಿಗಾಗಿ ಪಕ್ಷದ ಕಾರ್ಯಕರ್ತ ಮುಖಂಡರು, ಅಭಿಮಾನಿಗಳು ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಜೆಡಿಎಸ್ ಯುವಮುಖಂಡ ಸ್ಟುಡಿಯೋಚಂದ್ರು ಮಾತನಾಡಿ, ಜಾಗ್ವಾರ್ ಚಲನಚಿತ್ರಕ್ಕೆ ಈಗಾಗಲೇ ಅತಿಹೆಚ್ಚಿನ ಪ್ರಚಾರ ದೊರೆತಿದ್ದು ಪ್ರೇಕ್ಷಕರಿಂದ ಹೆಚ್ಚಿನ ರೀತಿಯಲ್ಲಿ ಪ್ರಶಂಸೆ ದೊರೆತಿರುವುದರಿಂದ ಚಿತ್ರ ಶತದಿನೋತ್ಸವದತ್ತ ಸಾಗಲಿ ಎಂದು ಶುಭ ಹಾರೈಸಿದರು.

ಕಲ್ಲಹಳ್ಳಿ ವೆಂಕಟರಮಣಸ್ವಾಮಿ, ಆಡನಕುಪ್ಪೆ ವೀರಭದ್ರಸ್ವಾಮಿ, ಶಿವನಹಳ್ಳಿ ವೀರಭದ್ರಸ್ವಾಮಿ ಮತ್ತು ಕಬ್ಬಾಳಿನ ಕಬ್ಬಾಳಮ್ಮ ದೇವಾಲಯದಲ್ಲಿ ವಿಶೇಷಪೂಜೆಯನ್ನು ಏರ್ಪಡಿಸಲಾಗಿತ್ತು. ಮುಖಂಡರಾದ ಕಬ್ಬಾಳೇಗೌಡ, ಚಂದ್ರಶೇಖರ್, ಚೀರಣಕುಪ್ಪೆ ಸಂಪತ್, ಹರೀಶ್, ವೀರಭದ್ರ, ಶೇಖರ್ ಸೇರಿದಂತೆ ಅನೇಕರು ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು.

 

 

► Follow us on –  Facebook / Twitter  / Google+

Sri Raghav

Admin