ಜಾರ್ಖಂಡ್‍ನಲ್ಲಿ ಗಣಿ ಕುಸಿತ : 40 ಕಾರ್ಮಿಕರ ಸಜೀವ ಸಮಾಧಿ ಶಂಕೆ

Mining-1
ನವದೆಹಲಿ, ಡಿ.30-ಜಾರ್ಖಂಡ್‍ನ ಲಾಲ್‍ಮತಿಯಾದಲ್ಲಿ ನಿನ್ನೆ ರಾತ್ರಿ ಗಣಿಯೊಂದು ಕುಸಿದು 40 ಕಾರ್ಮಿಕರು ದುರಂತ ಸಾವಿಗೀಡಾಗಿದ್ದಾರೆ ಎಂದು ಶಂಕಿಲಾಗಿದೆ. ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿದ್ದಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.  ಗೊಡ್ಡಾ ಜಿಲ್ಲೆಯ ಈಸ್ಟರ್ನ್ ಕೋಲ್‍ಫೀಲ್ಡ್ಸ್ ಲಿಮಿಟೆಡ್‍ಗೆ (ಇಸಿಎಲ್) ಸೇರಿದ ಲಾಲ್‍ಮತಿಯಾದ ಗಣಿಯಲ್ಲಿ ನಿನ್ನ ರಾತ್ರಿ 8.50ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಣಿ ಕುಸಿತದ ಕಾರಣ ಪ್ರವೇಶದ ದ್ವಾರದಲ್ಲೇ ಮಣ್ಣಿನ ಭಾರೀ ರಾಶಿ ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ರಾಜ್ಯ ವಿಪತ್ತು ನಿರ್ವಹಣೆ ಇಲಾಖೆಯ ಉನ್ನತಾಧಿಯೊಬ್ಬರು ತಿಳಿಸಿದ್ದಾರೆ.

Mining-2

ಗಣಿ ಕುಸಿದಾಗ ಅದರೊಳಗೆ 60ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಇವರೆಲ್ಲ ಭಗ್ನಾವಶೇಷಗಳಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ದುರಂತದಲ್ಲಿ ಅನೇಕ ವಾಹನಗಳು ಮತ್ತು ಗಣಿ ಯಂತ್ರೋಪಕರಣಗಳೂ ಸಿಕ್ಕಿ ಹಾಕಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.  ನಿನ್ನೆ ಮಧ್ಯರಾತ್ರಿಯಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಇಂದು ಬೆಳಗ್ಗೆಯೂ ಮುಂದುವರಿದಿತ್ತು. ಈವರೆಗೆ ಕೇವಲ ನಾಲ್ವರು ಕಾರ್ಮಿಕರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ.

Mining-4

ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿವೆ. ಗಣಿ ರಕ್ಷಣಾ ತಂಡಕ್ಕೆ ನೆರವು ನೀಡಲು ಅತ್ಯಾಧುನಿಕ ಉಪಕರಣಗಳನ್ನು ಕೋಲ್ ಇಂಡಿಯಾ ಲಿಮಿಟೆಡ್ ಸ್ಥಳಕ್ಕೆ ರವಾನಿಸಿದೆ.  ಜಾರ್ಖಂಡ್ ಮುಖ್ಯಮಂತ್ರಿ ರಘುಬೀರ್ ದಾಸ್ ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸಿತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Mining-3

Sri Raghav

Admin