ಜಾರ್ಖಂಡ್‍ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮಹಿಳಾ ಕಮಾಂಡೊಗಳ ತಂಡ

jarkhand

ರಾಂಚಿ, ನ.15- ದೇಶದ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಜಾರ್ಖಂಡ್‍ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮಹಿಳಾ ಕಮಾಂಡೊಗಳ ತಂಡವನ್ನು ಸಿಆರ್‍ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ನಿಯೋಜಿಸಿದೆ.   232 ಬೆಟಾಲಿಯನ್ ಡೆಲ್ಟಾ ಕಂಪೆನಿಗೆ ಸೇರಿದ 135 ಮಹಿಳೆಯರು ಪ್ರಸ್ತುತ ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ನೆರವಾಗಲಿದ್ದಾರೆ. ಖೂಂಟಿ ಪ್ರದೇಶದ ಬಳಿ ರಾಂಚಿ ಹೊರವಲಯದ ನಕ್ಸಲ್ ಪೀಡಿತ ಅರಣ್ಯಗಳಲ್ಲಿ ಸಿಆರ್‍ಪಿಎಫ್‍ನ 133 ತುಕಡಿಯ ಮೇಲ್ವಿಚಾರಣೆಯಲ್ಲಿ ಈ ಮಹಿಳಾ ಕಮಾಂಡೊಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ನಿರತರಾಗಲಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಕಮಾಂಡೋಗಳ ತಂಡವನ್ನು ಮಾವೋವಾದಿಗಳ ದಮನಕ್ಕೆ ನಿಯೋಜಿಸಲಾಗಿದೆ ಎಂದು ಜಾರ್ಖಂಡ್‍ನ ಸಿಆರ್‍ಪಿಎಫ್ ಪೊಲೀಸ್  ಮಹಾನಿರೀಕ್ಷಕ ಸಂಜಯ್ ಲತ್ಕರ್ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ಯೋಧರ ಪುಂಡಾಟ ಹತ್ತಿಕ್ಕಲು ಮಹಿಳಾ ಕಮಾಂಡೋಗಳು ಇತ್ತೀಚೆಗೆ ನಿಯೋಜನೆಗೊಂಡ ಬೆನ್ನಲ್ಲೆ ಈ ತಂಡ ಕಾರ್ಯಾಚರಣೆಗಿಳಿದಿರುವುದು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ.

► Follow us on –  Facebook / Twitter  / Google+

Sri Raghav

Admin