ಜಾರ್ಖಂಡ್ನ ಲೋಹರ್ದಾಗ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ : ಭಾರೀ ಶಸ್ತ್ರಾಸ್ತ್ರ ವಶ
ರಾಂಚಿ, ಮೇ 4– ಜಾರ್ಖಂಡ್ನ ಲೋಹರ್ದಾಗ ಜಿಲ್ಲೆಯಲ್ಲಿ ನಕ್ಸಲೀಯರ ವಿರುದ್ಧ ಭದ್ರತಾಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಇದರ ಭಾಗವಾಗಿ ರಹಸ್ಯ ನೆಲೆಯೊಂದರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲರಿಂದ ಮುಂದೆ ಸಂಭವಿಸಬಹುದಾಗಿದ್ದ ಮತ್ತೊಂದು ಹತ್ಯಾಕಾಂಡ ಈ ಕಾರ್ಯಾಚರಣೆಯೊಂದಿಗೆ ತಪ್ಪಿದಂತಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ರಾಜ್ಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ನಕ್ಸಲ್ ಅಡಗುತಾಣವೊಂದರಿಂದ 12ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು 2,000ಕ್ಕೂ ಅಧಿಕ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ.
ಒಂದು ಲಘು ಮೆಷಿನ್ ಗನ್ (ಎಲ್ಎಂಜಿ), ಒಂದು ಸ್ವಯಂ-ಚಾಲಿತ ಅಮೆರಿಕ ರೈಫಲ್, ಒಂದು ಎಕೆ-47, ಸ್ವಯಂ ಲೋಡಿಂಗ್ ರೈಫಲ್ (ಎಸ್ಎಲ್ಆರ್), ಮೂರು ಐಎನ್ಎಸ್ಎಸ್ ರೈಫಲ್ಗಳು, ಆರು ಇತರ ಗನ್ಗಳು ಹಾಗೂ ಅತ್ಯಾಧುನಿಕ ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಿಧ ಸಾಮಥ್ರ್ಯದ 3,000 ಬುಲೆಟ್ಗಳು ಮತ್ತು ಮದ್ದುಗುಂಡುಗಳ ಕವಚಗಳನ್ನು ಸಹ ಜಪ್ತಿ ಮಾಡಲಾಗಿದೆ. ಸಿಆರ್ಪಿಎಫ್ನ 158ನೇ ತುಕಡಿ ಮತ್ತು ಜಿಲ್ಲಾ ಪೊಲೀಸ್ ತಂಡ ಜಂಟಿ ಕಾರ್ಯಾಚರಣೆಯನ್ನು ಮುಂದುವರಿಸಿವೆ.
< Eesanje News 24/7 ನ್ಯೂಸ್ ಆ್ಯಪ್ >