ಅಧಿಕೃತವಾಗಿ ಜಿಎಸ್‌ಟಿ ಜಾರಿ, ನಾಳೆಯಿಂದ ದೇಶದಾದ್ಯಂತ ಒಂದೇ ತೆರಿಗೆ

Spread the love

DDlu7IeU0AA9IIs

# ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್‍ಟಿ) ಜಾರಿ

# ಜಿಎಸ್‌ಟಿಯನ್ನು  ಅಧಿಕೃತವಾಗಿ  ಜಾರಿಗೊಳಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

# ಅಧಿಕೃತವಾಗಿ ಜಿಎಸ್‌ಟಿ  ಜಾರಿ, ನಾಳೆಯಿಂದ ದೇಶದಾದ್ಯಂತ ಒಂದೇ ತೆರಿಗೆ

# ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಿಎಸ್‍ಟಿ ಭಾಷಣ 

DDls62wV0AAmAH9

#  ಜಿಎಸ್‌ಟಿ  ಸತತ 14 ವರ್ಷಗಳ ಪರಿಶ್ರಮದ ಫಲ  :  ರಾಷ್ಟ್ರಪತಿ ಪ್ರಣಬ್ ಮುಖರ್ಜಿ

# ಜಿಎಸ್‌ಟಿ ಐತಿಹಾಸಿಕ ಹೆಜ್ಜೆ.  ಈ ಐತಿಹಾಸಿಕ ಕ್ಷಣ ನನಗೆ ಸಂತೃಪ್ತಿ ತಂದಿದೆ :  ರಾಷ್ಟ್ರಪತಿ ಪ್ರಣಬ್ ಮುಖರ್ಜಿ

# ಜಿಎಸ್‌ಟಿ ಕುರಿತು ಭಾಷಣ ಆರಂಭಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ


# ಮೋದಿ ಜಿಎಸ್‍ಟಿ ಭಾಷಣ 

# ಜಿಎಸ್‌ಟಿಯಿಂದ ಆರ್ಥಿಕ ಸುಧಾರಣೆಯಷ್ಟೇ ಅಲ್ಲ, ಸಾಮಾಜಿಕ ಸುಧಾರಣೆಯೂ ಆಗಲಿದೆ : ಮೋದಿ

# ಇದು ಗೂಡ್ಸ್ ಅಂಡ್ ಸೆರ್ವಿಸ್ ಟ್ಯಾಕ್ಸ್ ಅಲ್ಲ, ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್, ಜನರಿಗೆ ಸರಳ ರೀತಿಯಲ್ಲಿ ಟಾಕ್ಸ್ ಪಾವತಿಗೆ ಸಹಕಾರಿಯಾಗಲಿದೆ : ಮೋದಿ

# ಮೇಜು ತಟ್ಟಿ ಪ್ರಧಾನಿ ಮೋದಿ ಮಾತುಗಳನ್ನು ಬೆಂಬಲಿಸಿದ ಆಹ್ವಾನಿತರು

# 20 ಲಕ್ಷದೊಳಗಿನ ಆದಾಯವಿರುವ ವ್ಯಾಪಾರಿಗಳಿಗೆ ಜಿಎಸ್‌ಟಿಯಿಂದ ಮುಕ್ತಿ : ಮೋದಿ

# ಜಿಎಸ್‍ಟಿಯಿಂದ ತೆರಿಗೆಗಳ್ಳರಿಗೆ ಕಡಿವಾಣ ಬೀಳಲಿದೆ ; ಮೋದಿ

# ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿರುವಂತೆ 18 ಬಾರಿ ಜಿಎಸ್‍ಟಿ ಸಭೆ ನಡೆದ ನಂತರ ಐತಿಹಾಸಿಕ ಜಿಎಸ್ಟಿ ಜಾರಿಯಾಗುತ್ತಿದೆ ; ಮೋದಿ

#   ಪರಿಶ್ರಮ ಇದ್ದರೆ ಯಾವುದೇ ಗುರಿ ಮುಟ್ಟಲು ಸಾಧ್ಯ ಎಂಬ ಚಾಣಕ್ಯನ ನುಡಿಯನ್ನು ಸ್ಮರಿಸಿದ ಮೋದಿ

# ಮಧ್ಯ ರಾತ್ರಿಯಲ್ಲೇ ದೇಶಕ್ಕೆ ಸ್ವಾತಂತ್ಯ ಸಿಕ್ಕಿತ್ತು, ಈಗ ಮತ್ತೆ ಮಧ್ಯ ರಾತ್ರಿಯಲ್ಲೇ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ : ಮೋದಿ

#ದೇಶ ಹೊಸ ಆರ್ಥಿಕ ವ್ಯವಸ್ಥೆಯೊಂದಿಗೆ ಮುನ್ನಡೆಯಲಿದೆ  : ಮೋದಿ

# ಜಿಎಸ್ ಟಿ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಆರಂಭ

DDlnDeJUwAAYcuf

# ಎಸ್ ಟಿ ಇಡೀ ಭಾರತದ ಯಶಸ್ಸು, ನವಭಾರತದಲ್ಲಿ ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ: ಅರುಣ್ ಜೇಟ್ಲಿ

iPOYW-S0


ಅಧಿವೇಹಸನದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ವಿತ್ತ ಸಚಿವ ಅನುನ್ ಜೈಟ್ಲಿ


ಜಗಮಗಿಸುತ್ತಿದೆ ಸಂಸತ್ ಭವನ : 

GSAST

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಶುಕ್ರವಾರದ ಮಧ್ಯರಾತ್ರಿ ಜಾರಿಗೆ ತರಲು ವೇದಿಕೆ ಸಿದ್ಧವಾಗಿದ್ದು, ಸಂಸತ್ ಭವನ ವಿದ್ಯುದಲಂಕಾರದಿಂದ ಜಗಮಗಿಸುತ್ತಿದೆ.   ಜಿಎಸ್ಟಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆಯುತ್ತಿರುವ ವಿಶೇಷ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆದಿದೆ.

ಜಿಎಸ್ ಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಸತ್ ಗೆ ಆಗಮಿಸಿದ ಉದ್ಯಮಿ ರತನ್ ಟಾಟಾ.  ಕಾಂಗ್ರೆಸ್, ಆರ್ ಜೆಡಿ, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್, ಡಿಎಂಕೆಯಿಂದ ಜಿಎಸ್ ಟಿ ಜಾರಿ ಕಾರ್ಯಕ್ರಮಕ್ಕೆ ಬಹಿಷ್ಕಾರ. ಎನ್ ಸಿಪಿ ಮತ್ತು ಜೆಡಿಯು ಭಾಗಿ


GST--011

ರೈತರಿಗೆ ಖುಷಿ ಸುದ್ದಿ :
ಇಡೀ ದೇಶವೆ ಕಾತರಿಂದ ಕಾಯುತ್ತಿರುವ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ ಟಿ) ಜಾರಿಗೆ ಇನ್ನು ಕೆಲವೇ ಗಂಟೆಗಳ ಬಾಕಿ ಉಳಿದಿರುವ ನಡುವೆಯೇ ಶುಕ್ರವಾರ ಜಿಎಸ್ ಟಿ ಕೌನ್ಸಿಲ್ ರೈತರಿಗೆ ಖುಷಿ ಸುದ್ದಿಯನ್ನು ನೀಡಿದೆ.  ಜಿಎಸ್ ಟಿ ಕೌನ್ಸಿಲ್, ರಸಗೊಬ್ಬರಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಿದೆ. ಶೇ.12ರಷ್ಟು ಜಿಎಸ್ ಟಿ ಜಾರಿಯಿಂದ ರೈತರಿಗೆ ಹೊರಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಜಿಎಸ್ ಟಿ ಜಾರಿಗೂ ಮುನ್ನ ಜಿಎಸ್ ಟಿ ಕೌನ್ಸಿಲ್ ರೈತರಿಗೆ ಬಿಗ್ ಗಿಫ್ಟ್ ಅನ್ನು ನೀಡಿದೆ.

ಒಮ್ಮತಾಭಿಪ್ರಾಯದಿಂದ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲು ಜಿಎಸ್ ಟಿ ಕೌನ್ಸಿಲ್ ನಿರ್ಧರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯಿತು.ಟ್ರ್ಯಾಕ್ಟರ್ ಗಳ ಬಿಡಿಭಾಗಗಳ ಮೇಲಿನ ತೆರಿಗೆ ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ.


#  ಜಿಎಸ್’ಟಿಯ ಕನ್’ಫ್ಯೂಸ್’ನಿಂದಾಗಿ ಬೆಂಗಳೂರಿನ ಸೇರಿದಂತೆ ರಾಜ್ಯದ ಮಲ್ಟಿ’ಫ್ಲೆಕ್ಸ್’ಗಳು ಆನ್’ಲೈನ್ ಮುಂಗಡ ಟಿಕೆಟ್ ನೀಡುವುದನ್ನೇ ತಡೆಹಿಡಿದಿವೆ. ನೀವು ಈ ಚಿತ್ರಮಂದಿರಗಳಲ್ಲಿ ಮುಕ್ಕಿಂಗ್ ಮಾಡಬೇಕೆಂದರೆ ಬುಕ್’ಮೈ ಶೋ ಮೂಲಕ ಶನಿವಾರದವರೆಗೆ ಮಾಡಬಹುದು ಆದರೆ ಭಾನುವಾರದ ಬುಕ್ಕಿಂಗ್ ಆಗುತ್ತಿಲ್ಲ.  ಇದಕ್ಕೆ ಕಾರಣವಿಷ್ಟೆ ಟಿಕೆಟ್ ಬೆಲೆಯನ್ನು ಎಷ್ಟು ನಿಗದಿಪಡಿಸಬೇಕೆಂಬ ಗೊಂದಲಕ್ಕೆ ಮಲ್ಟಿಫ್ಲೆಕ್ಸ್’ಗಳು ಸಿಲುಕಿವೆ. ಸರಕು ಸೇವಾ ತೆರಿಗೆಯಲ್ಲಿ ಮನರಂಜನಾ ತೆರಿಗೆ ಶೇ.28 ಎಂದು ತಿಳಿಸಲಾಗಿದೆ. ಆದರೆ ಕನ್ನಡ ಸಿನಿಮಾಗಳಿಗೆ ವಿನಾಯಿತಿ ಮುಂದುವರಿಯುತ್ತಾ, ಇದು ಮುಂದುವರಿದರೆ ಅದರ ಪ್ರಮಾಣವೆಷ್ಟು ಎಷ್ಟು ದರವನ್ನು ಟಿಕೆಟ್’ಗೆ ನಿಗದಿಗೊಳಿಸಬೇಕು ಎಂಬ ಸಾಕಷ್ಟು ಅನುಮಾನಗಳು ಮಲ್ಟಿಫ್ಲೆಕ್ಸ್’ಗಳ ಮಾಲೀಕರಿಗೆ ಕಾಡುತ್ತಿದೆ. ಈ ಕಾರಣದಿಂದ ಭಾನುವಾರದ ಬುಕ್ಕಿಂಗ್ ಸ್ಥಗಿತಗೊಂಡಿದೆ. ಸಮಸ್ಯೆಗೆ ನಾಳೆ ಉತ್ತರ ಸಿಗಲಿದೆಯೇ ಕಾದು ನೋಡಬೇಕು.


# ತಮಿಳುನಾಡಿನ ಚಿತ್ರಮಂದಿರ ಮಾಲೀಕರು ಜಾರಿಗೊಳ್ಳುವ ಜಿಎಸ್’ಟಿ’ಯ ಅಸ್ಪಷ್ಟತೆ ವಿರೋಧಿಸಿ ಜುಲೈ 3ರಿಂದ ಅನಿರ್ದಿಷ್ಟಾವಧಿಯಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಸಿನಿಮಾಕ್ಕೆ ಎಷ್ಟು ತೆರಿಗೆ ವಿಧಿಸಬೇಕೆಂಬುದರ ಸ್ಪಷ್ಟ ಮಾಹಿತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಜಿಎಸ್‍ಟಿ ಎಂದರೇನು? : 
ಸರಕು ಮತ್ತು ಸೇವೆಗಳ ಬಳಕೆಯ ವೇಳೆ ಬಳಕೆದಾರ ಪಾವತಿಸುವ ತೆರಿಗೆ ಹಾಗೂ ಸರಕು ಮತ್ತು ಸೇವೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಭರಿಸುವ ತೆರಿಗೆಯೇ ಜಿಎಸ್‍ಟಿ. ಸರಳವಾಗಿ ಹೇಳಬೇಕೆಂದರೆ, ತೆರಿಗೆಗೇ ಮತ್ತೆ ಮತ್ತೆ ತೆರಿಗೆ ಕಟ್ಟುವುದನ್ನು ಇದು ತಪ್ಪಿಸುತ್ತದೆ. ಕೇಂದ್ರದ ಅಬಕಾರಿ ಸುಂಕ(ಸರಕುಗಳ ಮೇಲಿನ ತೆರಿಗೆ), ಸೇವೆಗಳ ಮೇಲಿನ ಕೇಂದ್ರದ ತೆರಿಗೆ, ಸರಕುಗಳ ಮೇಲಿನ ಕೇಂದ್ರೀಯ ಮಾರಾಟ ತೆರಿಗೆ( ಸಿಎಸ್‍ಟಿ), ರಾಜ್ಯದ ಒಳಗಡೆ ರಾಜ್ಯ ಸರ್ಕಾರ ವಿಧಿಸುವ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ರದ್ದಾಗುವುದಲ್ಲದೆ ತೆರಿಗೆಗೇ ತೆರಿಗೆ ತಪ್ಪುತ್ತದೆ. ಇದೇ ಜಿಎಸ್‍ಟಿಯ ಮುಖ್ಯ ಉದ್ದೇಶ.

ಜು.1ರಿಂದ ಜಿಎಸ್‍ಟಿ ಜಾರಿಯಾಗಲಿದ್ದು, ಮುಖ್ಯವಾಗಿ ಬಳಕೆದಾರರು, ಗ್ರಾಹಕರು, ಸಕ್ರಿಯರಾಗಿ ತೊಡಗಿಕೊಂಡರೆ ಗುಣಾತ್ಮಕ ಫಲ ನಿರೀಕ್ಷಿಸಬಹುದು.
ಇನ್ನು ಬಹುತೇಕ ಸರಕುಗಳು ಶೇ.18ರ ಸ್ಲ್ಯಾಬ್ ವ್ಯಾಪ್ತಿಯಲ್ಲಿ ಬರುವುದರಿಂದ ಪ್ರಚಲಿತ ಇರುವ ಶೇ.33ರ ತೆರಿಗೆ ಹೊರೆ ಇರುವುದಿಲ್ಲ. ಕೆಲ ಸರಕು ಸೇವೆಗಳು ಶೇ. 5, 12, 18 ಹಾಗೂ 28ರ ವ್ಯಾಪ್ತಿಗೆ ಒಳಪಡುವುದರಿಂದ ಈ ಮೊದಲಿನ ಶೇ.33ರ ತೆರಿಗೆ ಹೊರೆ ಇಳಿಯುತ್ತದೆ. ಆದ್ದರಿಂದ ಬಹುಶಃ ಇದು ಯಾರಿಗೂ ಹೊರೆ, ದುಬಾರಿ ಎನಿಸಲಿಕ್ಕಿಲ್ಲ. ಗ್ರಾಹಕರ ಸಕ್ರಿಯ ಪಾಲ್ಗೊಳ್ಳುವಿಕೆಯೇ ಈ ಪದ್ಧತಿಯ ಯಶಸ್ಸು .

ಮೂರನೇಯದಾಗಿ, ಪ್ರತಿ ವರ್ಷ ಲಕ್ಷಗಟ್ಟಲೇ ವ್ಯವಹಾರ ನಡೆಸುವ ಕಿರಾಣಿ ವ್ಯಾಪಾರಿಗಳು, ಈ ಜಿಎಸ್‍ಟಿಯಿಂದ ತಮಗೂ ಲಾಭವಿದೆ ಎಂಬುದನ್ನರಿತು ಭಾಗೀದಾರರಾಗಬೇಕು. ಆರಂಭಿಕ ಹಂತದಲ್ಲಿ ಅಷ್ಟೊಂದು ಭಾರೀ ಪ್ರಮಾಣದ ಪರಿಣಾಮಗಳು ಗೋಚರಿಸದಿದ್ದರೂ ಅದರಿಂದ ಉತ್ಪನ್ನಗಳ ದಾಸ್ತಾನು ಕಡಿಮೆ ಮಾಡುವ ಅಗತ್ಯವಿಲ್ಲ. ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಮೇಲಿನ ತಕ್ಷಣದ ಪರಿಣಾಮ ಈಗಲೇ ನಿರ್ಧರಿಸಲಾಗದು ಎನ್ನುತ್ತಾರೆ ತೆರಿಗೆ ತಜ್ಞರು. ಆದರೂ ಲಾಭ ಇಲ್ಲದಿರುವುದಿಲ್ಲ.  ರಾಜಕೀಯ ಪರಿಣಾಮಗಳ ಬಗ್ಗೆ ಹೇಳುವುದಾದರೆ, ಪ್ರಸ್ತುತ ಕೇಂದ್ರದ ಮೇಲೆ ಜನರಿಗೆ ಅಸಮಾಧಾನ ಉಂಟಾಗಬಹುದು. ಬೇರೆ ದೇಶಗಳಲ್ಲಿ ಹೀಗಾಗಿರುವ ನಿದರ್ಶನಗಳಿವೆ. ಕೇಂದ್ರ ಸರ್ಕಾರ ದೊಡ್ಡ ನೋಟು ರದ್ದುಪಡಿಸಿದಾಗಲೂ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಪರಿಣಾಮಗಳೂ ಭವಿಷ್ಯದಲ್ಲಿ ಯಾವ ಹಂತಕ್ಕೆ ಹೋಗಲಿವೆ ಎಂಬುದನ್ನು ಕಾದು ನೋಡಬೇಕು.

ಕೇಂದ್ರೀಯ ಜಿಎಸ್‍ಟಿ, ರಾಜ್ಯ ಜಿಎಸ್‍ಟಿ ಹಾಗೂ ಸಮಗ್ರ ಜಿಎಸ್‍ಟಿ ಎಂಬ ತೆರಿಗೆ ವ್ಯವಸ್ಥೆ ಇದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಮುಖ್ಯ.
ಎಸ್‍ಜಿಎಸ್‍ಟಿ( ಸ್ಟೇಟ್ ಜಿಎಸ್‍ಟಿ), ಸಿಜೆಎಸ್‍ಟಿ (ಸೆಂಟ್ರಲ್ ಜಿಎಸ್‍ಟಿ), ಐಜಿಎಸ್‍ಟಿ ಅಂತ ತೆರಿಗೆ ಪಾವತಿಯಾದರೂ ನೋಂದಣಿ (ರಿಜಿಸ್ಟ್ರೇಷನ್), ದಾಖಲೆ, ತೆರಿಗೆ ಪಾವತಿ ಚಲನ್, ತೆರಿಗೆ ಪ್ರಾಧಿಕಾರದ ಸ್ವರೂಪ ಮಾತ್ರ ಒಂದೇ.

ಇನ್ನು ತೆರಿಗೆ ವ್ಯಾಪ್ತಿಗೆ ಬರುವವರು ಯಾರು ಎಂಬುದನ್ನು ತಿಳಿಯೋಣ. ವಸ್ತುಗಳ(ಸರಕು) ಉತ್ಪಾದಕರು, ಸೇವೆ ಒದಗಿಸುವವರು, ವರ್ತಕರು ಇದರಡಿ ಬರುವರು. ನಿಜಕ್ಕೂ ಇದು ತೆರಿಗೆದಾರ ಸ್ನೇಹಿ ಪದ್ಧತಿ ಎನ್ನಬಹುದು. ಕರ್ನಾಟಕದಲ್ಲಿರುವ ತೆರಿಗೆ ಪಾವತಿಸುವವರ ಸಂಖ್ಯೆ ಸುಮಾರು 5 ಲಕ್ಷಕ್ಕೂ ಹೆಚ್ಚು. ವರ್ಷವೊಂದಕ್ಕೆ ಒಂದೂವರೆ(1.50) ಕೋಟಿ ರೂ. ವಹಿವಾಟು ನಡೆಸುವವರು ಸುಮಾರು ಒಂದು ಲಕ್ಷ ವಾರ್ಷಿಕ 50 ಲಕ್ಷ ರೂ. ವಹಿವಾಟುದಾರರು ಶೇ. 1ರಷ್ಟು ತೆರಿಗೆ ಪಾವತಿಸಬಹುದು, 50 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವರು ಜಿಎಸ್‍ಟಿ ಅಡಿ ಬರುತ್ತಾರೆ. 20 ಲಕ್ಷ ವಹಿವಾಟುದಾರರು ರಾಜ್ಯದ ಒಳಗಷ್ಟೇ ವ್ಯವಹಾರ ನಡೆಸಬೇಕು. ಅಂಥವರಿಗೆ ಜಾಗತಿಕ ವಹಿವಾಟು ಅವಕಾಶ ಇರುವುದಿಲ್ಲ. ಮುಖ್ಯವಾಗಿ ಚಿನ್ನದ ಮೇಲಿನ ತೆರಿಗೆ ಬಗ್ಗೆ ಹೇಳುವುದಾದರೆ ಈಗಾಗಲೇ ಶೇ.3ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದ ಚಿನ್ನದ ಬೆಲೆ ಏರಲಿದೆ.

ಜಿಡಿಪಿ ಬೆಳವಣಿಗೆಗೂ, ಜಿಎಸ್‍ಟಿಗೂ ಸಂಬಂಧವಿರುವುದಿಲ್ಲ. ಒಂದು ದೇಶದ ಗ್ರಾಹಕರ ಖರೀದಿ ಸಾಮಥ್ರ್ಯದ ಮೇಲೆ ಜಿಡಿಪಿ ನಿರ್ಧರಿತವಾಗುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತವಾಗಿದೆ. ಜಿಎಸ್‍ಟಿ ವ್ಯವಸ್ಥೆ ಜಾರಿ ಎಂದರೆ ಅದೊಂದು ಸವಾಲೇ. ಇನ್ನು ಅನುಷ್ಠಾನವೂ ಸವಾಲು ಎನ್ನಬಹುದು. ಮೊದಲನೆಯದಾಗಿ ಗ್ರಾಹಕ ಖರಿದೀಸುವ ಯಾವುದೇ ವಸ್ತುವಿಗೂ ಕಡ್ಡಾಯವಾಗಿ ಬಿಲ್ ಪಡೆಯಲೇಬೇಕು. ಇನ್ನು ಉದ್ಯಮಿಗಳು ನಿಗದಿತವಾಗಿ ಲೆಕ್ಕಪತ್ರ ಸಲ್ಲಿಸಬೇಕು. ಮಾರಾಟ-ಖರೀದಿ ವಿವರ ಕಡ್ಡಾಯ. ಇದಕ್ಕಾಗಿಯೇ ಜಿಎಸ್‍ಟಿಎನ್ ಮಾಡಲಾಗಿದೆ. ಈ ಕಂಪ್ಯೂಟರೀಕೃತ ವ್ಯವಸ್ಥೆ ಈ ಸಮಸ್ಯೆಗೆ ಪರಿಹಾರ ಒದಗಿಸಲಿದೆ.
ಯಾವುದೇ ವಸ್ತುಗಳ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿ ಬಂಡವಾಳವೇ ಹೂಡುವಳಿ ತೆರಿಗೆ. ಉತ್ಪಾದಕರು ಅಗತ್ಯ ದಾಖಲೆಗಳನ್ನು ನಿರ್ವಹಿಸಿ, ಸಲ್ಲಿಸಿ ಹೂಡುವಳಿ ತೆರಿಗೆ ಮತ್ತೆ ವಾಪಸ್ ಪಡೆಯಬಹುದು. ಮರು ಮಾರಾಟಕ್ಕೆ ವಸ್ತುಗಳ ಖರೀದಿಸಿದ್ದ ವರ್ತಕನೂ ಹೂಡುವಳಿ ತೆರಿಗೆ ಪ್ರಯೋಜನಕ್ಕೆ ಪಾತ್ರನಾಗುತ್ತಾನೆ. ಆದರೆ ಇವೆಲ್ಲ ಆನ್‍ಲೈನ್‍ನಲ್ಲಿ ದಾಖಲಾಗಿರಬೇಕು. ಇದನ್ನು ಇನ್‍ಪುಟ್ ಕ್ರೆಡಿಟ್ ಟ್ಯಾಕ್ಸ್ ಎನ್ನಲಾಗುತ್ತದೆ.

ಒಟ್ಟಾರೆ ಕೇಂದ್ರ ಸರ್ಕಾರ ಜಿಎಸ್‍ಟಿ ಅನುಷ್ಠಾನಕ್ಕೆ ಸಕಲ ಸಿದ್ದತೆಗಳನ್ನು ನಡೆಸಿದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಇದೊಂದು ಬಹುದೊಡ್ಡ ತೆರಿಗೆ ಸುಧಾರಣಾ ಪ್ರಕ್ರಿಯೆಯಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೊಳಿಸುವ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಕೆಳಮನೆ, ಮೇಲ್ಮನೆಗಳೆರಡರಲ್ಲೂ ಅನುಮೋದನೆ ಪಡೆದಿದೆ. ಕಳೆದ ಸಂಸತ್ ಅಧಿವೇಶನದಲ್ಲಿಯೇ ಅನುಮೋದನೆ ಪಡೆದು ಜುಲೈ ಒಂದರಿಂದ ಕಾಯ್ದೆ ಜಾರಿಗೆ ಮಾಡಲು ನಿರ್ಧರಿಸಿತು.   ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತಾದಲ್ಲಿದ್ದಾಗಲೇ ಮಂಡಿಸಿತ್ತು. ಆದರೆ ಆಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಅದನ್ನುವಿರೋಧಿಸಿ ಅಡ್ಡಿಪಡಿಸಿತ್ತು.


ಜಿಎಸ್‍ಟಿ ವೈಶಿಷ್ಟ್ಯಗಳು

ಜುಲೈ 1ರಿಂದ ದೇಶಾದ್ಯಂತ ಜಿಎಸ್‍ಟಿ ಅನುಷ್ಠಾನಗೊಳ್ಳಲಿದೆ
ತೆರಿಗೆ ದರ 5 ಸ್ಲ್ಯಾಬ್‍ಗಳಲ್ಲಿ(ಚಿನ್ನದ ತೆರಿಗೆ ಸೇರಿ) ಶೇ.5, 12, 18, 28 ಚಿನ್ನಕ್ಕೆ ಪ್ರತ್ಯೇಕ ಶೇ.3 ಹೊಸ ಸ್ಲ್ಯಾಬ್.
ಜನಸಾಮಾನ್ಯರ ದಿನ ಬಳಕೆ ವಸ್ತುಗಳಿಗೆ ಸರಳ ತೆರಿಗೆ.
ತಂಬಾಕು(ಹೊಗೆಸೊಪ್ಪಿನ ಉತ್ಪನ್ನ) ಮತ್ತಿತರೆ ಅನಾರೋಗ್ಯಕಾರಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಅವುಗಳ ಮೇಲೆ ವಿಶೇಷ ಸೆಸ್ ವಿಧಿಸಲಾಗಿದೆ.
ಪರೋಕ್ಷ ತೆರಿಗೆಯಿಂದ ಪಾರದರ್ಶಕತೆಯೂ ಹೆಚ್ಚುತ್ತದೆ.
ತೆರಿಗೆ ವಂಚನೆ ಅವಕಾಶಗಳು ಕಡಿಮೆಯಾಗಲಿವೆ.
ಸರಕು ಸಾಗಣೆ ಕ್ಷೇತ್ರಕ್ಕೆ ಇದೊಂದು ವರದಾನವೇ ಸರಿ.
ಸರಕುಗಳ ಧಾರಣೆ ಇಳಿಕೆಗೊಂಡು ಸೇವೆಗಳ ದರ ದುಬಾರಿಯಾಗಲಿದೆ.
ಸಂಘಟಿತ ವಲಯ ಬಲಿಷ್ಠವಾಗಿ ಅಸಂಘಟಿತ ವಲಯ ದುರ್ಬಲಗೊಳ್ಳುವ ನಿಟ್ಟಿನಲ್ಲಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ವಿಧಾನ ಕಾರಣವಾಗಲಿದೆ.
ಮೂಲ ಜಿಎಸ್‍ಟಿ(ಕರಡು)ಗೂ ಪ್ರಸ್ತುತ ಜಾರಿಗೆ ಬರಲಿರುವ ಜಿಎಸ್‍ಟಿಗೂ ಭಾರೀ ವ್ಯತ್ಯಾಸವಿದೆ.
ಜಿಎಸ್‍ಟಿ ಮಸೂದೆ ಮಂಡನೆಯಾಗಿ ಅನುಮೋದನೆ ಪಡೆಯುವುದರ ಒಳಗಾಗಿ ಸಾಕಷ್ಟು ಬದಲಾವಣೆ ಕಂಡಿದೆ.


ತೆರಿಗೆ: ದುಬಾರಿ -ಅಗ್ಗ-ವಿನಾಯ್ತಿ, ರಿಯಾಯ್ತಿ ಇತ್ಯಾದಿ  : 

ಭಾರತೀಯ ಅರ್ಥವ್ಯವಸ್ಥೆಯಲ್ಲಿ ಭೂಮಿ, ನಿವೇಶನ, ಮನೆ, ಕಾರ್ಖಾನೆ ಮುಂತಾದ ಸ್ಥಿರಾಸ್ತಿ ಹೊರತುಪಡಿಸಿದರೆ ಚರಾಸ್ತಿಗಳಲ್ಲಿ ತಮ್ಮ ಬದುಕಿನ ಭದ್ರತೆ ಎಂದೇ ನಂಬಿರುವ ಏಕೈಕ ವಸ್ತು ಬಂಗಾರ ! ಬಂಗಾರವಿಲ್ಲದೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನ ಭಾವಿಸಿದ್ದಾರೆ.
ಹಾಗಾಗಿ ತೆರಿಗೆ ವಿಷಯಕ್ಕೆ ಬಂದಾಗ ಮೊದಲ ಆದ್ಯತೆ ಈ ಹಳದಿ ಲೋಹಕ್ಕೆ. ಪ್ರಸಕ್ತ ರಾಷ್ಟ್ರದ ಉದ್ಯಮ, ವ್ಯಾಪಾರ, ವಹಿವಾಟು, ಸೇವೆಗಳ ವಲದಯಲ್ಲಿ ಹೊಸದೊಂದು ಪರ್ವವೇ ಆರಂಭವಾಗಲಿದೆ.

ಒಂದು ರೀತಿಯಲ್ಲಿ ಸ್ಥಿತ್ಯಂತರದ ಪರ್ವ ಕಾಲ ಎಂದೇ ಬಣ್ಣಿಸಬಹುದು. ಏಕೆಂದರೆ ಬರುವ ಜುಲೈ 1ರಿಂದ ದೇಶಾದ್ಯಂತ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟ) ವ್ಯವಸ್ಥೆ ಜಾರಿಗೆಬರಲಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳೂ ಅದನ್ನು ಸ್ವಾಗತಿಸಲೇಬೇಕು. ಈ ಪದ್ದತಿ ಆರಂಭದಲ್ಲಿ ಕಷ್ಟಕರ ಎನಿಸಿದರೂ ಕಾಲ ಕ್ರಮದಲ್ಲಿ ಎಲ್ಲವೂ ಸರಿಹೋಗಲಿವೆ ಎನ್ನುತ್ತಾರೆ ಅರ್ಥಶಾಸ್ತ್ರ ಕೋವಿದರು.  ಅದೇನೇ ಇರಲಿ ಈಗ ಎಲ್ಲರೂ ಅದಕ್ಕೆ ಹೊಂದಿಕೊಂಡು ಹೋಗುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಹೊಸದೊಂದು ಭಾಷ್ಯವನ್ನೇ ಬರೆಯಬೇಕಾಗಿದೆ. ಅಲ್ಪಕಾಲೀನ ಲಾಭಕ್ಕಿಂತ ದೀರ್ಘಕಾಲಿನ ಲಾಭದತ್ತ ನಾವು ದೃಷ್ಟಿ ಹರಿಸಬೇಕಾಗಿದೆ. ಪ್ರಸ್ತುತ ಚಿನ್ನವೂ ಸೇರಿದಂತೆ ಯಾವ ಯಾವವಸ್ತುಗಳು ದುಬಾರಿಯಾಗಲಿವೆ. ಹಾಗೆಯೇ ಯಾವ ಯಾವ ವಸ್ತುಗಳು ಅಗ್ಗವಾಗಲಿವೆ?

ಬಂಗಾರದ ಮೇಲಿನ ಶೇ.2ರ ತೆರಿಗೆ ದರವನ್ನು ಜಿಎಸ್‍ಟಿ ಮಂಡಳಿ ಶೇ.3ಕ್ಕೆ ಹೆಚ್ಚಿಸಿದೆ. ಇದಕ್ಕಾಗಿ (ಚಿನ್ನದ ಮೇಲಿನ ತೆರಿಗೆ ನಿಗದಿ) ಹೊಸದೊಂದು ತೆರಿಗೆ ಶ್ರೇಣಿಯನ್ನೇ ರೂಪಿಸಲಾಗಿದೆ. ಚಿನ್ನ ಮತ್ತು ವಜ್ರಕ್ಕೆ ಶೇ.3 ತೆರಿಗೆಯ ಹೊಸ ಸ್ಲ್ಯಾಬ್ ರಚಿಸಲಾಗಿದೆ. ಹಾಗಾಗಿ ಪ್ರಸ್ತುತ ಜಿಎಸ್‍ಟಿಯಲ್ಲಿ ಶೇ. 3, 5, 12,18 ಹಾಗೂ 28ರಷ್ಟು ತೆರಿಗೆ 5 ಸ್ಲ್ಯಾಬ್‍ಗಳು ಸೃಷ್ಟಿಯಾಗಿವೆ. ಮೊದಲು ತೆರಿಗೆ ರಹಿತ ವಸ್ತುಗಳ ಬಗ್ಗೆ ಹೇಳುವುದಾದರೆ, ಮುದ್ರಿತ ಪುಸ್ತಕ, ಕಲರಿಂಗ್ ಬುಕ್, ಪತ್ರಿಕೆ, ಕೈಮಗ್ಗ, ಬಳೆ, ಸ್ಲ್ಯಾಬ್ , ಉಪ್ಪು, ಬಿಂದಿ, ತರಕಾರಿಗಳು, ಹಿಟ್ಟು , ಪ್ರಸಾದ, ತಾಜಾಹಣ್ಣು , ಜೇನುತುಪ್ಪ , ಕೋಳಿ ಮಾಂಸ, ತಾಜಾ ಮಾಂಸ, ಹಾಲು, ಮೊಸರು, ಬೆಣ್ಣೆ , ಮಜ್ಜಿಗೆ, ಸೆಣಬು ಮೊದಲಾದ ವಸ್ತುಗಳು, ಇನ್ನು ಸೇವೆಇಯಲ್ಲಿ ಒಂದು ಸಾವಿರ(1000) ರೂ.ಗಳಿಗಿಂತ ಕಡಿಮೆ ದರದ ಲಾಡ್ಜ್‍ಗಳು, ಹೋಟೆಲ್‍ಗಳ ಸೇವೆಗೆ ಜಿಎಸ್‍ಟಿ ಇಲ್ಲ.


ವ್ಯಾಪ್ತಿ ಮಿತಿ ಇರದು  : 
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಫುಲ್‍ಪವರ್ ನೀಡುವ ಬಗ್ಗೆ ಚಿಂತನೆ ನಡೆದಿದೆ. ಹಳೆ ಪದ್ಧತಿ ಬಿಟ್ಟು ಹೊಸ ವ್ಯವಸ್ಥೆ ರೂಪಿಸಲು ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ. ಅಂದುಕೊಂಡಂತೆ ನಡೆದರೆ ಐಟಿ ಅಧಿಕಾರಿಗಳಿಗೆ ಭೌಗೋಳಿಕ ಮಿತಿ ಇರದು. ಆದಾಯ ತೆರಿಗೆ1961ಕ್ಕೆ ತಿದ್ದುಪಡಿ ತರುವ ಚಿಂತನೆಯೂ ನಡೆದಿದೆ ಎನ್ನಲಾಗಿದೆ. ಈ ಮೊದಲು ಒಂದೇ ವೃತ್ತಕ್ಕೆ ಸೇರಿದ ತೆರಿಗೆದಾರರನ್ನು ಅದೇ ವೃತ್ತದ ಅಧಿಕಾರಿ ಲೆಕ್ಕಪತ್ರ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ ಹೊಸ ಪದ್ದತಿಯಲ್ಲಿ ದೇಶದ ಯಾವುದೇ ಮೂಲೆಯ ಅಧಿಕಾರಿ ಇನ್ನಾವುದೋ ಪ್ರದೇಶದ ತೆರಿಗೆದಾರನ ಲೆಕ್ಕಪತ್ರ ತಪಾಸಿಸಬಹುದು.


ಇವು ದುಬಾರಿ  :

ಹೈಬ್ರಿಡ್ ಕಾರುಗಳಿಗೆ ಶೇ.43 (ಜಿಎಸ್‍ಟಿ 28% ಮತ್ತು ಸೆಸ್ 15%) ತೆರಿಗೆ ವಿಧಿಸಲು ಜೆಎಸ್‍ಟಿ ಕೌನ್ಸಿಲ್ ನಿರ್ಧರಿಸಿದೆ.
ಮನರಂಜನೆ: 100 ರೂ. ಒಳಗಿನ ಟಿಕೆಟ್‍ಗೆ ಶೇ.18 ಮತ್ತು 100 ರೂ.ಗೆ ಮೇಲ್ಪಟ್ಟು ಟಿಕೆಟ್‍ಗೆ ಶೇ. 28ರ ತೆರಿಗೆ.
ಜಿಎಸ್‍ಟಿ ವ್ಯವಸ್ಥೆಯಡಿ ಯಾವುದೇ ವಿನಾಯ್ತಿ ಇಲ್ಲ. ಬೇಕಾದರೆ ರಾಜ್ಯ ಸರ್ಕಾರಗಳು ಪ್ರಾದೇಶಿಕ ಸಿನಿಮಾದ ತೆರಿಗೆಯನ್ನು ಡಿಬಿಟಿ ಮೂಲಕ ಹಿಂದಿರುಗಿಸಬಹುದು ಎಂದಿದ್ದಾರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.


ದುಬಾರಿಯಾಗುವ ಸರಕು-ಸೇವೆ : 
ಬಂಗಾರ, ಮೊಬೈಲ್, ಪರ್ಸನಲ್ ಕೇರ್ ವಸ್ತು, ಬ್ಯಾಗ್, ಮೊಬೈಲ್ ವಿಮೆ , ಟಿವಿ, ಎಸಿ, ವಾಷಿಂಗ್ ಮಷಿನ್ ಸಹಿ ಕನ್ಸ್ಯೂಮರ್ ಡ್ಯುರಬಲ್ಸ್ ಮುಂತಾದವು ತುಟ್ಟಿಯಾಗಲಿವೆ. ಬಹುತೇಕ ಸೇವೆಗಳು ಶೇ. 18ರ ತೆರಿಗೆ ವ್ಯಾಪ್ತಿಯಲ್ಲಿ ಬರುವುದರಿಂದ ಮೊಬೈಲ್ ಬಿಲ್ ದುಬಾರಿಯಾಗಬಹುದು. ಪರ್ಸನಲ್ ಕೇರ್ ವಸ್ತುಗಳು (ಶ್ಯಾಂಪೂ, ಸುಗಂಧ ದ್ರವ್ಯಗಳು, ಮೇಕಪ್ ವಸ್ತುಗಳು ಇತ್ಯಾದಿ) ದುಬಾರಿಯಾಗಲಿವೆ.

ಅಗ್ಗ : 
ಸ್ಮಾರ್ಟ್ ಫೋನ್, ಸಿನಿಮಾ ಟಿಕೆಟ್, ಆಹಾರ ಧಾನ್ಯ, ಬೇಳೆಕಾಳುಗಳು, ಸಾರಿಗೆ ಸ್ಮಾರ್ಟ್‍ಫೋನ್ ಮೇಲಿನ ತೆರಿಗೆ ಶೇ.13.5ರಿಂದ ಶೇ.12ಕ್ಕೆ ಇಳಿಯಲಿದೆ. ಕೇಬಲ್ ಟಿವಿ, ಡಿಟಿಹೆಚ್ ಸೇವೆಗಳ ತೆರಿಗೆ ತಗ್ಗುತ್ತವೆ. ಇನ್ನು ಕ್ಯಾಬ್ ಸವಾರಿ ಅಗ್ಗವೋ ಅಗ್ಗ.
ಶೇ.28ರ ಸರಕು : 
ಬೀಡಿ, ಚ್ಯೂಯಿಂಗ್ ಗಮ್, ಕೋಕಾ ರಹಿತ ಚಾಕಲೇಟ್, ವ್ಯಾಸರ್ ಲೇಪಿತ ಚಾಕೋಲೇಟ್, ಪಾನ್ ಮಸಾಲಾ, ಗ್ಯಾಸ್‍ಯುಕ್ತ ಪಾನೀಯ, ಡಿಯೋಡ್ರಂಟ್, ಪೈಂಟ್, ಷೇವಿಂಗ್ ಕ್ರೀಂ, ಆಫ್ಟರ್ ಷೇವ್, ಹೇರ್ ಶಾಂಪೂ, ಡೈ, ಸನ್ ಸ್ಕ್ರೀನ್, ವಾಲ್‍ಪೇಪರ್, ಸಿರಾಮಿಕ್ ಟೈಲ್ಸ್ , ವಾಟರ್ ಹೀಟರ್, ಡಿಶ್ ವಾಷರ್, ವಾಷಿಂಗ್ ಮಷಿನ್, ವೆಂಡಿಂಗ್ ಮಷೀನ್ ಎಟಿಎಂ ವಾಕ್ಯೂ ಮ್ ಕ್ಲೀನರ್, ಹೇರ್ ಕ್ಲಿಪ್ಸ್ , ಷೇವರ್ಸ್ , ಆಟೋ ಮೊಬೈಲ್, ಮೋಟಾರ್ ಸೈಕಲ್, ಖಾಸಗಿ ವಿಮಾನ ಬಳಕೆಗೆ ಶೇ.28ರ ತೆರಿಗೆ ಅನ್ವಯ.
ಶೇ.18ರ ಸರಕು-ಸೇವೆ : 
ಶೇ.18ರಡಿ ಅನೇಕ ವಸ್ತುಗಳು ಬರಲಿವೆ. 500 ರೂ.ಗಿಂತಹೆಚ್ಚು ದರದ ಪಾದರಕ್ಷೆ, ಬಿಸ್ಕತ್( ಎಲ್ಲಾ ಬಗೆ), ಪಾಸ್ತಾ, ಸಂಸ್ಕರಿತ ಸಕ್ಕರೆ, ಕಾರ್ನ್‍ಪ್ಲೆಕ್ಸ್ , ಸೂಪ್, ಜಾಮ್ ಇನ್‍ಸ್ಟಂಟ್ ಫುಡ್ ಮಿಕ್ಸ್, ಮಿನರಲ್ ವಾಟರ್, ನೋಟ್‍ಬುಕ್ ಕವರ್, ಟಿಶ್ಯೂ, ಸ್ಟೀಲ್‍ನ ಉತ್ಪನ್ನಗಳು, ಮಾನಿಟರ್ ಸ್ಪೀಕರ್ ಕ್ಯಾಮೆರಾ ಇತ್ಯಾದಿ.
ಮದ್ಯ ಪೂರೈಕೆ, ಎಸಿ ಹೋಟೆಲ್, ದೂರ ಸಂಪರ್ಕ ಸೇವೆ, ಮಾಹಿತಿ-ತಂತ್ರಜ್ಞಾನ ಸೇವೆ, ಬ್ರಾಂಡೆಡ್ ಗಾರ್ಮೆಂಟ್ಸ್ , ಹಣಕಾಸು ಸೇವೆ ಶೇ.18ರ ವ್ಯಾಪ್ತಿಯಲ್ಲಿ ಶೇ. 12ರ ಸರಕು ಸೇವೆ: 1000 ರೂ.ಗಿಂತ ಹೆಚ್ಚಿನ ಮೌಲ್ಯದ ಜವಳಿ ಉತ್ಪನ್ನ ,ಬೆಣ್ಣೆ, ಚೀಸ್, ತುಪ್ಪ ,ಪ್ಯಾಕ್ಡ್ ಡ್ರೈಫ್ರೂಟ್ಸ್ ,ಕುರುಕಲು ತಿಂಡಿ, ಫ್ರೂಟ್‍ಜ್ಯೂಸ್, ಆರ್ಯುವೇದ ಔಷಧ, ಹಲ್ಲುಪುಡಿ, ಪಿಕ್ಚರ್‍ಬುಕ್, ಊದುಬತ್ತಿ, ಕೊಡೆ, ಹೊಲಿಗೆ ಯಂತ್ರ, ಮೊಬೈಲ್. ಸೇವೆಗಳು ಎಸಿ ರಹಿತ ಹೋಟೆಲ್, ಬಿಸಿನೆಸ್ ಕ್ಲಾಸ್ ಏರ್ ಟಿಕೆಟ್, ರಸಗೊಬ್ಬರ ಶೇ.12ರ ತೆರಿಗೆಗೆ ಒಳಪಡಲಿವೆ.
ಶೇ.5ರ ತೆರಿಗೆ ಸರಕು-ಸೇವೆ : 
1000 ರೂ.ಗಿಂತ ಕೆಳಗಿನ ದರದ ಜವಳಿ, ಸಿದ್ಧ ಆಹಾರ, 500 ರೂ.ಗೂ ಕಡಿಮೆ ಬೆಲೆಯ ಪಾದರಕ್ಷೆ, ನ್ಯೂಸ್ ಟ್ರೆಂಡ್, ಕ್ರೀಮ್, ಹಾಲಿನ ಪುಡಿ, ಪನೀರ್, ಶೀತಲೀಕೃತ ತರಕಾರಿ, ಮಸಾಲಾ ಪದಾರ್ಥ, ಚಹಾ, ಕಾಫಿ, ಪಿಜ್ಜಾ, ಬ್ರೆಡ್, ರಸ್ಕ್ , ಸೀಮೆಎಣ್ಣೆ , ಕಲ್ಲಿದ್ದಲು, ಔಷಧ, ಸೆಂಟ್, ಲೈಫ್ ಬೋಟ್, ಗೋಡಂಬಿ, ಅಗರಬತ್ತಿ, ಇನ್‍ಸುಲಿನ್ ವ್ಯಾಪ್ತಿಗೆ ಒಳಪಡುತ್ತವೆ. ಸಾರಿಗೆ ಸೇವೆ( ರೈಲು, ವಿಮಾನಯಾನ), ಸಣ್ಣ ರೆಸ್ಟೋರೆಂಟ್‍ಗಳು ಶೇ.5ರ ವ್ಯಾಪ್ತಿಯಲ್ಲಿ ಬರುವ ಸೇವೆಗಳು.
1000ರೂ.ಗೆ ಕಡಿಮೆ ಬೆಲೆಯ ಸೊಳ್ಳೆ ಪರದೆ, ನ್ಯಾಪ್‍ಕಿನ್, ಗೋಣಿಚೀಲ, ಬ್ಯಾಗ್, ಲೈಫ್‍ಜಾಕೆಟ್, ದುಪ್ಪಟ, ಬೆಡ್ ಕವರ್ ಅಡಿಗೆ ಮನೆ ಬಳಕೆಯ ಬಟ್ಟೆ ಇವೆಲ್ಲ ಶೇ.5ರ ತೆರಿಗೆ ವ್ಯಾಪ್ತಿಗೆ ಸೇರುತ್ತವೆ.
ತೆರಿಗೆ ರಹಿತ  : 
ರಾಷ್ಟ್ರಧ್ವಜ, ಗಾಂಧಿಟೋಪಿಗೆ, ಖಾದಿ ಉತ್ಪನ್ನ ಮಾಲು, ಪೂಜಾ ಸಾಮಗ್ರಿಗಳಾದ ರುದ್ರಾಕ್ಷಿ, ಪಂಚಾಮೃತ, ತುಳಸಿ ಮಾಲೆ,ಪಂಚಗಮ್ಯ, ಜನಿವಾರ, ಶಿವದಾರ, ವಿಭೂತಿ, ಚಂದನ, ದೀಪದ ಬತ್ತಿ, ಬ್ರಾಂಡ್ ರಹಿತ ಜೇನುತುಪ್ಪ, ಬಡವರಿಗಾಗಿ ವಿತರಿಸಲು ಉಚಿತವಾಗಿ ಧಾರ್ಮಿಕ ಸಂಸ್ಥೆಗಳಿಗೆ ದಾನಿಗಳು ಕೊಡುವ ವಸ್ತುಗಳು, ರೆಡ್‍ಕ್ರಾಸ್ ಸಂಸ್ಥೆಗೆ ರವಾನಿಸುವ ವಸ್ತುಗಳು. ಸಾರ್ವಜನಿಕ ತೆರಿಗೆ ಹಣದಿಂದ ನಡೆಯುವ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಐಐಟಿಗಳು, ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ , ಎನ್‍ಐಟಿ, ರೀಜನಲ್ ಕ್ಯಾನ್ಸರ್ ಸೆಂಟರ್, ಕೇಂದ್ರ ಸರ್ಕಾರದ ಪ್ರಯೋಗಾಲಯಗಳು ಮುಂತಾದವುಗಳಿಗೆ ತೆರಿಗೆ ವಿನಾಯ್ತಿ.

ದೇಶ ವಿದೇಶಗಳಲ್ಲಿ ಜಿಎಸ್‍ಟಿ ಕಷ್ಟ-ಸುಖ :

ಮಲೇಷ್ಯಾ ಪಡಿಪಾಟಲು: ಇತ್ತೀಚೆಗೆ ಸರಕು ಸೇವೆಗಳ ತೆರಿಗೆ(ಜಿಎಸ್‍ಟಿ) ಪದ್ಧತಿ ಜಾರಿಗೆ ತಂದ ದೇಶ ಮಲೇಷಿಯಾ. ಮಲೇಷಿಯಾ 2015ರಲ್ಲಿ ಜಿಎಸ್‍ಟಿ ಜಾರಿಗೆ ತಂದಿತು. 2009ರಲ್ಲಿ ಜಿಎಸ್‍ಟಿ ಜಾರಿಗೆ ಮಲೇಷ್ಯಾ ಚಿಂತನೆ ನಡೆಸಿತ್ತು. ಆದರೆ ಆ ಸಂದರ್ಭ ಅತ್ತ ಸರ್ಕಾರವಾಗಲಿ, ಇತ್ತ ವರ್ತಕರು, ಔದ್ಯಮಿಕ ರಂಗ ವಾಗಲಿ ಅದಕ್ಕೆ ಸನ್ನದ್ಧವಾಗಿರಲಿಲ್ಲ. ಹಾಗಾಗಿ ತೆರಿಗೆ ಇಲಾಖೆಯ ಪರಿಶೀಲನೆ, ಒಟ್ಟು ತೆರಿಗೆ ವಾಪಸ್ ಮರುಪಾವತಿ ಮಾಡುವಲ್ಲಿ ಬಿಕ್ಕಟ್ಟು ಉಂಟಾಯಿತು. ಜಿಎಸ್‍ಟಿಯಿಂದ ಎದುರಾದ ಗೊಂದಲಗಳನ್ನು ಭರಿಸಲಾರದೆ ವರ್ತಕರು, ಸಣ್ಣಪುಟ್ಟ ವ್ಯಾಪಾರಿಗಳು ಜಿಎಸ್‍ಟಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು.

ಸಿಂಗಪೂರ್ ಹೆಣಗಾಟ :

ಸಿಂಗಪೂರ್ ಸರ್ಕಾರ 1994ರಲ್ಲೇ ಜಿಎಸ್‍ಟಿ ಜಾರಿಗೆ ತಂದಿತ್ತು. ಅದರಿಂದಾಗಿ ಸಿಂಗಪೂರ್‍ನಲ್ಲಿ ಆರ್ಥಿಕ ಅಭಿವೃದ್ದಿ ಅನೂಹ್ಯ ರೀತಿಯಲ್ಲಿ ಪ್ರಗತಿ ಹೊಂದಿತು. ಎರಡುಮೂರು ವರ್ಷಗಳಾದರೂ ಅದು ನಿಯಂತ್ರಣಕ್ಕೆ ಬರಲಿಲ್ಲ. ಜಿಎಸ್‍ಟಿ ದರದಿಂದ ಸಾರ್ವಜನಿಕರಿಗೆ ಆದ ಹೊರೆ ಕಡಿಮೆ ಮಾಡಲು ಸಿಂಗಪೂರ್ ಸರ್ಕಾರ ಆದಾಯ ತೆರಿಗೆ ಹೊರೆಯನ್ನು ಗಣನೀಯವಾಗಿ ಕಡಿತಗೊಳಿಸಿತು.

ಕೆನಡಾದಲ್ಲಿ ಜಿಎಸ್‍ಟಿ ಅವಾಂತರ :

ಜಿಎಸ್‍ಟಿ ಅನುಷ್ಠಾನದಿಂದಾಗಿ ಕೆನಡಾದಲ್ಲಿ ಕೆಲವೊಂದು ವಸ್ತುಗಳ ಧಾರಣೆ ಗಣನೀಯವಾಗಿ ಏರಿಕೆಯಾಯಿತು. ಗ್ರಾಹಕರು ತತ್ತರಿಸಿ ಹೋದರು. ಪ್ರತಿಭಟನೆಗಿಳಿದರು. ಈ ಸಂದರ್ಭ ವರ್ತಕರು ಏನು ಮಾಡಿದರು ಗೊತ್ತೆ? ತಮ್ಮ ಅಂಗಡಿಗಳಲ್ಲಿ ನಮ್ಮನ್ನು ನಿಂದಿಸಬೇಡಿ ಇದು ಜಿಎಸ್‍ಟಿಯಿಂದಾದ ಘೋರ ಪ್ರಮಾದ ಎಂದು ಬೋರ್ಡ್‍ಗಳನ್ನು ತೂಗು ಹಾಕಿದರು.! ( ನಮ್ಮ ದೇಶದಲ್ಲಿ ಏನಾಗುತ್ತದೋ ಗೊತ್ತಿಲ್ಲ !)

ಆಸ್ಟ್ರೇಲಿಯಾದಲ್ಲಿ ಸರ್ಕಸ್ :

ಜಿಎಸ್‍ಟಿ ಜಾರಿಗೆ ತರಲು ಆಸ್ಟ್ರೇಲಿಯ ಸರ್ಕಾರ ದೊಡ್ಡ ಸರ್ಕಸ್ಸನ್ನೇ ಮಾಡಬೇಕಾಯಿತು. ಆದರೆ ಹಿಡಿದ ಪಟ್ಟು ಬಿಡಲಿಲ್ಲ ಆ ಸರ್ಕಾರ. ಚುನಾವಣಾ ಪ್ರಚಾರಕ್ಕೂ ಜಿಎಸ್‍ಟಿಯೇ ಪ್ರಮುಖ ವಿಷಯವಾಯಿತು. ಜಾನ್ ಹೋವಾರ್ಡ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರವೇ ಜಿಎಸ್‍ಟಿ ಜಾರಿಗೆ ತರಲು ಸಾಧ್ಯವಾಯಿತು. ಆದರೆ ಬಹುತೇಕ ವಸ್ತುಗಳು ಹಾಗೂ ಸೇವೆಗಳಿಗೆ ಶೇ.10ರ ಮೇಲೆ ತೆರಿಗೆ ವಿಧಿಸಲಾಗಲಿಲ್ಲ. ಅಷ್ಟೇ ಅಲ್ಲ ಹಲವು ಸರಕು ಮತ್ತು ಸೇವೆಗಳಿಗೆ ತೆರಿಗೆ ವಿನಾಯ್ತಿಯನ್ನೇ ನೀಡಲಾಯಿತು. ಪ್ರಸ್ತುತ ಸರ್ಕಾರ ತೆರಿಗೆ ದರವನ್ನು ಶೇ.15ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆಯಾದರೂ ಇನ್ನೂ ಈ ದುಸ್ಸಾಹಸಕ್ಕೆ ಕೈ ಹಾಕಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin