ಜಿಗಿಶಾ ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

Jigisha

ನವದೆಹಲಿ,ಆ.22- ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕಿ ಜಿಗಿಶಾ ಘೋಷ್ ಭೀಕರ ಕೊಲೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯವೊಂದು ಇಂದು ಮರಣದಂಡನೆ ವಿಧಿಸಿದೆ. ಮತ್ತೊಬ್ಬ ಆಪಾದಿತನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 2009ರಲ್ಲಿ ನಡೆದ ಈ ಕೊಲೆ ಪ್ರಕರಣ ರಾಜಧಾನಿಯನ್ನು ಬೆಚ್ಚಿ ಬೀಳಿಸಿತ್ತು.   ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಅವರು, ಕೊಲೆ ಪ್ರಕರಣದ ಆಪಾದಿತರಾದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರಿಗೆ ನೇಣು ಶಿಕ್ಷೆ ವಿಧಿಸಿದರು ಮತ್ತೊಬ್ಬ ಆಪಾದಿತ ಬಲ್ಜೀತ್ಗೆ ಆಜೀವ ಕಾರಾಗೃಹ ಸಂಜೆ ವಿಧಿಸಲಗಿದೆ.  ನೊಯ್ಡಾದ ಹೆವಿಟ್ ಅಸೋಸಿ ಯೇಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಮ್ಯಾನೇಜರ್(ಆಪರೇಷನ್ಸ್) ಆಗಿದ್ದ ಜಿಗಿಶಾ ಘೋಷ್(28) ಅವರನ್ನು 18ನೇ ಮಾಚ್, 2008ರಂದು ಬೆಳಗ್ಗೆ ದಕ್ಷಿಣ ದೆಹಲಿಯ ವಸಂತ ವಿಹಾರ್ನಿಂದ ಅಪಹರಿಸಲಾಗಿತ್ತು. ಮರುದಿನ ಕೊಲೆಗೀಡಾಗಿದ್ದ ಅವರ ಮೃತದೇಹವು ಫರಿದಾಬಾದ್ನ ಸೂರಜ್ಕುಂಡ್ನಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ವಾದ- ಪ್ರತಿವಾದ ಗಳು ನಡೆದ ಏಳು ವರ್ಷಗಳ ಬಳಿಕ ನ್ಯಾಯಾಧೀಶರು ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದರು.  ಇದು ಅತ್ಯಂತ ಬರ್ಬರ ಮತ್ತು ಹೀನಾಯ ಕೊಲೆ ಪ್ರಕರಣ. ಓರ್ವ ಮಹಿಳೆ ಮೇಲೆಹೃದಯ ವಿದ್ರಾವಕ ರೀತಿಯಲ್ಲಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಅಪರಾಧದ ತೀವ್ರತೆ ಮತ್ತು ಬರ್ಬರತೆಯು ಅಪರೂಪದಲ್ಲಿ ಅಪರೂಪವಾಗಿದೆ. ಈ ಅಪರಾಧಿಗಳಿಗೆ ಯಾವುದೇ ಕರುಣೆ ತೋರಿದರೆ ಸಮಾಜದಲ್ಲಿನ ಕ್ರಿಮಿನಲ್ಗಳಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ಆದ್ದರಿಂದ ಸಾಯುವ ತನಕ ಕುತ್ತಿಗೆಗೆ ಕುಣಿಕೆ ಬಿಗಿಯಬೇಕು ಎಂದು ನ್ಯಾಯಾಧೀಶ ಸಂದೀಪ್ ಯಾದವ್ ತೀರ್ಪು ನೀಡಿದ್ದಾರೆ.

► Follow us on –  Facebook / Twitter  / Google+

Sri Raghav

Admin