ಜಿಯೊ ಗ್ರಾಹಕರಿಗೆ ಶಾಕ್ : ಡಿಸೆಂಬರ್ 3ಕ್ಕೆ ಅಂತ್ಯವಾಗುತ್ತೆ ವೆಲ್ ಕಮ್ ಆಫರ್…!

Jio

ನವದೆಹಲಿ.ಅ.20 : ಡಿಜಿಟಲ್ ಇಂಡಿಯಾ, ಫ್ರೀ ಇಂಟರ್ ನೆಟ್, ಫ್ರೀ ವಾಯ್ಸ್ ಕಾಲ್ ಎಂದು ಜನರನ್ನು ತನ್ನತ್ತ ಸೆಳೆದಿದ್ದ ರಿಲಾಯನ್ಸ್ ಜಿಯೋ ಈಗ ಉಲ್ಟಾ ಹೊಡೆದಿದೆ. ನಿಜಕ್ಕೂ ಈ ಸುದ್ದಿ ಜಿಯೋ ಬಳಕೆದಾರರಿಗೆ ಬೇಸರ ಮೂಡಿಸಲಿದೆ. ಜಿಯೋ ನೀಡಿದ್ದ ವೆಲ್ ಕಮ್ ಆಫರ್ ಡಿ.31 ರ ಬದಲಾಗಿ ಡಿ. 3ಕ್ಕೆ ಕೊನೆಗೊಳ್ಳಲಿದೆ.  ಡಿಸೆಂಬರ್ 4 ರನಂತರ  ರಿಯಾಲನ್ಸ್ ಜಿಯೋ ಸಿಮ್ ಪಡೆದಿರುವ ಗ್ರಾಹಕರು ನೆಟ್ ಬಳಕೆಗೆ ಹಣ ಪಾವತಿಸಬೇಕಾಗುತ್ತದೆ. ರಿಲಾಯನ್ಸ್ ಮೂರು ತಿಂಗಳ ಕಾಲ ಉಚಿತ ನೆಟ್ ಸೇವೆ ನೀಡುವುದಾಗಿ ಗ್ರಾಹಕರಿಗೆ ಹೇಳಿತ್ತು. ಇದರ ಪ್ರಕಾರ ಉಚಿತ ಅನ್ ಲಿಮಿಟೆಡ್ 4ಜಿ ಇಂಟರ್ ನೆಟ್ ಹಾಗೂ ಉಚಿತ ಕರೆ ಗ್ರಾಹಕರಿಗೆ ಲಭ್ಯವಿತ್ತು. ಇದಲ್ಲದೆ ಸಾಕಷ್ಟು ಸೌಲಭ್ಯಗಳನ್ನು ಗ್ರಾಹಕರಿಗೆ ಕಂಪನಿ ನೀಡತ್ತು. ಡಿಸೆಂಬರ್ 31 ರವರೆಗೆ ಎಲ್ಲವೂ ಉಚಿತ ಎಂಬ ಘೋಷಣೆಯನ್ನೂ ಮಾಡಿತ್ತು. ಇದೇ ಕಾರಣಕ್ಕೆ ಗ್ರಾಹಕರು ಮುಗಿಬಿದ್ದು ಸಿಮ್ ಖರೀದಿಸಿದ್ದರು.

 ಟ್ರಾಯ್ ನಿಯಮದ ಪ್ರಕಾರ ಯಾವುದೇ ಕಂಪೆನಿಯು 90 ದಿನಗಳಿಗಿಂತ ಹೆಚ್ಚಿನ ದಿನಗಳ ಕಾಲ ಉಚಿತ ಸೇವೆಯನ್ನು ಒದಗಿಸುವಂತಿಲ್ಲ ಕಳೆದ ಸೆಪ್ಟೆಂಬರ್ 5ರಂದು ವೆಲ್ಕಮ್ ಆಫರ್ ಎಂದು ತನ್ನ ಗ್ರಾಹಕರಿಗೆ ಉಚಿತ ಡಾಟಾ ಹಾಗೂ ಕಾಲ್ ಸರ್ವಿಸ್ ಒದಗಿಸಲಾಗಿತ್ತು. ಆದರೆ, ಡಿಸೆಂಬರ್ 30ಕ್ಕೆ ಅಂತ್ಯವಾಗಬೇಕಿದ್ದ ಸಿಮ್ ಆಫರ್ ಡಿಸೆಂಬರ್ 3ಕ್ಕೆ ಸ್ಥಗಿತಗೊಳಿಸುವಂತೆ ಟ್ರಾಯ್ ಆದೇಶಿಸಿದೆ. ಇನ್ನೊಂದು ವಿಷಯವೇನೆಂದರೆ ಜಿಯೋ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಮತ್ತೊಂದು ಆಯ್ಕೆಯಿದ್ದು ಈಗಿರುವ ಆಫರ್ ಗೆ ಬದಲಾಗಿ ತನ್ನ ಗ್ರಾಹಕರಿಗೆ ನೂತನ ಆಫರ್ ನೀಡಬಹುದಾಗಿದೆ.

ಕೇವಲ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಚಂದಾದಾರರನ್ನು ಹೊಂದಿದ ರಿಲಾಯ್ಸ್ 16 ಮಿಲಿಯನ್ ಹೆಚ್ಚು ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿತ್ತು.

► Follow us on –  Facebook / Twitter  / Google+

Sri Raghav

Admin