ಜಿಯೋನಿ ರಾಯಭಾರಿಯಾಗಿ ವಿರಾಟ್ ಕೊಹ್ಲಿ ನೇಮಕ

Spread the love

Virat-Kohli

ಬೆಂಗಳೂರು, ಜ.10-ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಾಗತಿಕ ಮುಂಚೂಣಿಯಲ್ಲಿರುವ, 1.20 ಗ್ರಾಹಕರನ್ನು ಹೊಂದಿರುವ ಜಿಯೋನಿ ಬ್ರಾಂಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಜಿಯೋನಿಯ ಮುಂಬರುವ ಪ್ರಚಾರದಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದು ಬ್ರಾಂಡಿನ ಹೊಸತನದ ಮಾರುಕಟ್ಟೆ ಹಾಗೂ ಗ್ರಾಹಕರ ಅನುಭವ ಹಂಚಿಕೊಳ್ಳುವುದರಲ್ಲಿಯೂ ಅವರು ಭಾಗಿಯಾಗಲಿದ್ದಾರೆ. ಕೆಲ ತಿಂಗಳ ಹಿಂದೆ ಜಿಯೋನಿ ನಟಿ ಅಲಿಯಾ ಭಟ್ ಅವರನ್ನು ಸಹ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಂಸ್ಥೆಯ ಉತ್ಪನ್ನಗಳು ನೂತನ ಎತ್ತರಕ್ಕೇರುವಂತೆ ಮಾಡುವಲ್ಲಿ ಇವರಿಬ್ಬರೂ ಶ್ರಮಿಸಲಿದ್ದಾರೆ.

ಈ ವೇಳೆ ವಿರಾಟ್ ಕೊಹ್ಲಿ ಮಾತನಾಡಿ, ಘನತೆ ಹಾಗೂ ಪ್ಯಾಷನ್‍ನಿಂದ ಕ್ರಿಕೆಟ್ ಆಡುವಂತೆ ಸಹಭಾಗಿತ್ವ ಆಯ್ಕೆಯಲ್ಲೂ ಅದೇ ನಿಯಮ ಅನುಸರಿಸುತ್ತೇನೆ. ಜಿಯೋನಿ ಉತ್ಪನ್ನಗಳು ಪ್ಯಾಷನ್, ಗುರಿ ಹಾಗೂ ಖಚಿತ ನಿರ್ಧಾರ ಹೊಂದಿವೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಮನಸು ಅದು ಹೊಂದಿದೆ. ಅದರಿಂದ ಸಂಸ್ಥೆಯೊಂದಿಗಿನ ಸಹಭಾಗಿತ್ವ ದೀರ್ಘ ಕಾಲ ಇರುತ್ತದೆ ಎಂದು ನಾನು ಭಾವಿಸಿದ್ದೇನೆ, ನಂಬಿದ್ದೇನೆ. ಜಿಯೋನಿ ಜತೆಗಿನ ಪ್ರಯಾಣ ಪ್ರಾರಂಭಿಸಲು ಕಾತರದಿಂದ ಇದ್ದೇನೆ ಎಂದಿದ್ದಾರೆ.

ಜಿಯೋನಿಯ ಸಿಇಒ ಮತ್ತು ಎಂಡಿ, ಅರವಿಂದ ಆರ್. ವೊಹ್ರ ಮಾತನಾಡಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಯುವ ಅರ್ಥವ್ಯವಸ್ಥೆಯಲ್ಲಿ ಭಾರತ ಒಂದಾಗಿದೆ. ಭಾರತದ ಐಕಾನ್‍ಗಳಾದ ವಿರಾಟ್ ಕೊಹ್ಲಿ ಹಾಗೂ ಅಲಿಯಾ ಭಟ್ ಅವರನ್ನು ರಾಯಭಾರಿ ಆಗಿ ಹೊಂದಿರುವುದಕ್ಕೆ ಸಂಸ್ಥೆಗೆ ಹೆಮ್ಮೆಯಾಗಿದೆ. ಯುವ ಹೃದಯಗಳಲ್ಲಿ ಹೊಸ ಛಾಪು ಮೂಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin