ಜುಲೈನಲ್ಲಿ ರಜನಿ ರಾಜಕೀಯ ರಂಗ ಪ್ರವೇಶ

Rajanikant

ಬೆಂಗಳೂರು/ಚೆನ್ನೈ, ಮೇ 27- ಸೂಪರ್‍ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಬಗ್ಗೆ ಜುಲೈ ಅಂತ್ಯದಲ್ಲಿ ಅಧಿಕೃತವಾಗಿ ಪ್ರಕಟಿ ಸಲಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ರಜನಿ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಈ ವಿಷಯ ತಿಳಿಸಿದ್ದಾರೆ.  ರಜನಿಕಾಂತ್ ರಾಜಕೀಯ ರಂಗ ಪ್ರವೇಶಿಸುವ ಕುರಿತು ಮುಂದಿನ ತಿಂಗಳ ಅಂತ್ಯದ ವೇಳೆಗೆ ಸ್ಪಷ್ಟ ಚಿತ್ರ ಲಭಿಸಲಿದೆ. ಅವರು ರಾಜಕೀಯ ಪಕ್ಷ ಸೇರುತ್ತಾರೋ ಅಥವಾ ತಮ್ಮದೇ ಅದ ಪಕ್ಷವನ್ನು ರಚಿಸುತ್ತಾರೆ ಎಂಬುದು ಆಗ ಘೋಷಣೆಯಾಗಲಿದೆ ಎಂದು ಗಾಯಕ್ವಾಡ್ ಹೇಳಿದ್ದಾರೆ.ರಜನಿ ರಾಜಕೀಯ ಸೇರ ಬೇಕೆಂ ಬುದು ಅವರ ಅಭಿಮಾನಿ ಗಳ ಬಹುದಿನಗಳ ಬಯಕೆಯಾಗಿದೆ. ಅವರು ಈಗಷ್ಟೇ ಈ ಸಂಬಂಧ ಅಭಿಮಾನಿ ಮತ್ತು ಹಿತೈಷಿಗಳೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆಸಿ ಅಭಿಪ್ರಾಯ ಮತ್ತು ಸಲಹೆ ಪಡೆದಿದ್ದಾರೆ. ಅವರೆಲ್ಲರೂ ತಲೈವಾ ರಾಜಕೀಯ ಪ್ರವೇಶಿಸ ಬೇಕೆಂದು ಹೇಳಿದ್ದಾರೆ. ಹೀಗಾಗಿ ಜುಲೈ ಅಂತ್ಯದ ವೇಳೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರ ಬೀಳಲಿದೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin