ಜು.1ರಿಂದ ಆಧಾರ್-ಪ್ಯಾನ್ ಲಿಂಕ್ ಕಡ್ಡಾಯ

Adhaar--01

ನವದೆಹಲಿ,ಜೂ.28-ಮುಂದಿನ ತಿಂಗಳು 1ರಿಂದ ಜಾರಿಗೆ ಬರುವಂತೆ ತೆರಿಗೆ ಪಾವತಿದಾರರ ಪ್ಯಾನ್ ಕಾರ್ಡ್‍ಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ಈ ಕುರಿತು ಆದಾಯ ತೆರಿಗೆ ನಿಯಮಗಳಿಗೆ ಮಾಡಲಾದ ತಿದ್ದುಪಡಿಗಳ ಬಗ್ಗೆ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.  ಪರ್ಮೆನೆಂಟ್ ಅಕೌಂಟ್ ನಂಬರ್(ಪ್ಯಾನ್)ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ 12 ಅಂಕಿಗಳ ಬಯೋಮೆಟ್ರಿಕ್ ಆಧಾರ್ ಅಥವಾ ನೋಂದಣಿ ಗುರುತು ಪತ್ರ ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹಣಕಾಸು ಮಸೂದೆ 2017-18ರಲ್ಲಿ ತೆರಿಗೆ ಪ್ರಸ್ತಾವನೆಗಳಿಗೆ ತಿದ್ದುಪಡಿ ಮೂಲಕ ಹಣಕಾಸು ಸಚಿವ ಅರುಣ್ ಜೇಟ್ಲಿ ಆದಾಯ ತೆರಿಗೆ ಮರುಪಾವತಿ ಮಾಡುವ ವೇಳೆ ಆಧಾರ್ ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಲಾಗಿದೆ.   ಅನೇಕ ಪ್ಯಾನ್ ಕಾರ್ಡ್‍ಗಳನ್ನು ಬಳಸುವ ಮೂಲಕ ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ಆಧಾರ್ ಮತ್ತು ಪ್ಯಾನ್ ಜೋಡಣೆ ಮಾಡಲು ಉದ್ದೇಶಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin