ಜೈಲು ಅಧಿಕಾರಿಗಳ ಎಡವಟ್ಟು ; ಪರಪ್ಪನ ಅಗ್ರಹಾರ ಜೈಲಿನಿಂದ ವಿಚಾರಣಾಧೀನ ಕೈದಿ ಎಸ್ಕೇಪ್

Parappana-Agraha-r-021

ಬೆಂಗಳೂರು. ಫೆ. 21 : ಜೈಲು ಅಧಿಕಾರಿಗಳ ಎಡವಟ್ಟಿನಿಂದ ಪರಪ್ಪನ ಅಗ್ರಹಾರ ಜೈಲಿನಿಂದ ವಿಚಾರಣಾಧೀನ ಕೈದಿ ಎಸ್ಕೇಪ್ ಆಗಿರುವ ಘಟನೆ ಇಂದು ನಡೆದಿದೆ.  ಹೇಮಂತ್ ಎಸ್ಕೇಪ್ ಅಗಿರುವ ಕೈದಿ. ಕಳ್ಳತನ ಹಾಗೂ  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ಹೇಮಂತ್ ಜೈಲು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಹೇಮಂತ ತಪ್ಪಿಸಿಕೊಳ್ಳಲು ಜೈಲು ಅಧಿಕಾರಗಳಾದ ಪರಮೇಶ ನಾಯ್ಕ ಮತ್ತು ಹೇಮಾವತಿ ಕರ್ತವ್ಯ ಲೋಪ ಕರಣ ಎನ್ನಲಾಗಿದೆ.   ಎಸ್ಕೇಪ್ ಆದ ಹೇಮಂತ್ ಕುರಿತು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಹೇಮಂತ , ಮತ್ತೊಂದು ಪ್ರಕರಣದಲ್ಲಿ ಜಾಮೀನು ಸಿಕ್ಕರಲಿಲ್ಲ.   ಈ ನಡುವೆ ಒಂದು ಪ್ರಕರಣದ ಜಾಮೀನು ಅದೇಶ ತೋರಿಸಿ ಕಳ್ಳ ಹೇಮಂತ್ ಜೈಲಿನಿಂದ ಜಾಣತನದಿಂದ  ಎಸ್ಕೇಪ್ ಆಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin