ಜೋಕಫಾಲ್ಸ್ ತಿಂಗಳ ಹಾಸ್ಯ ಕಾರ್ಯಕ್ರಮ
ಬೆಳಗಾವಿ,ಫೆ.11- ಹಾಸ್ಯಕೂಟ ಹಾಗೂ ಸಾಹಿತ್ಯ ಭನವ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇಂದು ಸಂಜೆ 4.30ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನ ಸಭಾಭವನದಲ್ಲಿ ಜೋಕಫಾಲ್ಸ ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಅವರ ಮೊಬೈಲ್ 9448093589 ಸಂಖ್ಯೆಗೆ ಹೆಸರನ್ನು ನೊಂದಾಯಿಸಿಕೊಳ್ಳುವುದರ ಮೂಲಕ ತಮ್ಮ ಮೆಚ್ಚಿನ ಒಂದು ಜೋಕ್ನನ್ನು ಹಂಚಿಕೊಳ್ಳಬಹುದಾಗಿದೆ.ಕಾರ್ಯಕ್ರಮಕ್ಕೆ ಶ್ರೇಷ್ಠ ವಾಗ್ಮಿಗಳಾದ ಡಾ. ಬಸವರಾಜ ಜಗಜಂಪಿ ಚಾಲನೆ ನೀಡಲಿದ್ದು, ಸಭಾಪತಿ ಸ್ಥಾನವನ್ನು ಕರ್ನಾಟಕ ವಿಕಾಸ ಬ್ಯಾಂಕಿನ ಹಿರಿಯ ಪ್ರಬಂಧಕ ಪಿ.ವಿ. ಪಾಟೀಲ ವಹಿಸಿಕೊಳ್ಳಲಿದ್ದಾರೆ. ಮಿಮಿಕ್ರಿ ಜಿ.ಎಸ್. ಸೋನಾರ, ಉದಯೋನ್ಮುಖ ಹಾಸ್ಯ ಪ್ರತಿಭೈ ರಾಜು ಹಿರೇಮಠ ಹಾಗೂ ವೇಣುಧ್ವನಿಯ ಸರ್ವಮಂಗಳಾ ಅರಳಿಮಟ್ಟಿ ಜೋಕ್ಗಳನ್ನು ಹಂಚಿಕೊಳ್ಳುವುದರೊಂದಿಗೆ ನಿಮ್ಮನ್ನು ರಂಜಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ನಿರ್ದೇಶಕ ಆರ್.ಬಿ. ಕಟ್ಟಿ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS