ಜ.8ಕ್ಕೆ ಬಂಜೆತನ ತಪಾಸಣಾ ಶಿಬಿರ

chnannapatana
ಚನ್ನಪಟ್ಟಣ,ಜ.6- ರೋಟರಿ ಕ್ಲಬ್ ಚನ್ನಪಟ್ಟಣ ಇವರ ಸಹಯೋಗದೊಂದಿಗೆ ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್ ವತಿಯಿಂದ ಚನ್ನಪಟ್ಟಣ ನಗರ ಮತ್ತು ಗ್ರಾಮೀಣ ಜನತೆಯ ಸಲುವಾಗಿ ಜ.8ರಂದು ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಗರ್ಭಗುಡಿ ಐವಿಎಫ್ ಸೆಂಟರ್‍ನ ಮಾರ್ಕೆಂಟಿಗ್ ಮ್ಯಾನೇಜರ್ ನಿರಂಜನ್ ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಲ್ಲದೆ ನಿರಾಶರಾಗಿ ಕೊರಗುತ್ತಿರುವ ಗ್ರಾಮೀಣ ಜನರಿಗೆ ಬಂಜೆತನ ಚಿಕಿತ್ಸಾ ವಿಧಾನಗಳ ಅರಿವು ಮೂಡಿಸಿ, ಈ ಸಮಸ್ಯೆಯನ್ನು ತೊಡೆದು ಹಾಕಲು ನಮ್ಮ ಸಂಸ್ಥೆಯಿಂದ ರಾಮನಗರ, ಕೊಳ್ಳೇಗಾಲ, ಮಂಡ್ಯ, ಕನಕಪುರ, ಸಾತನೂರು, ದೇವನಹಳ್ಳಿ ಸೇರಿದಂತೆ ಅನೇಕ ಕಡೆ ಶಿಬಿರ ನಡೆಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದವರು ಈ ಶಿಬಿರದಲ್ಲಿ ಪಾಲ್ಗೊಂಡು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು. ಈ ಶಿಬಿರದಲ್ಲಿ ಬೆಂಗಳೂರಿನ ಬಂಜೆತನ ತಜ್ಞರಾದ ಡಾ.ಆಶಾರವರ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದು, ಈ ತಪಾಸಣೆಗೆ ಬರಬೇಕಾದರೆ ದಂಪತಿ ಸಮೇತ ಬರಬೇಕಿದ್ದು, ಹಿಂದೆ ಇರುವ ಯಾವುದಾದರೂ ಹಳೆಯ ವೈದ್ಯಕೀಯ ರಿಪೋರ್ಟ್ ಗಳನ್ನು ಕಡ್ಡಾಯವಾಗಿ ತರತಕ್ಕದ್ದು.
ಈ ಶಿಬಿರದಲ್ಲಿ ಉಚಿತ ಚಿಕಿತ್ಸೆ, ಉಚಿತ ವೀರ್ಯ ತಪಾಸಣೆ ಎಲ್ಲವೂ ಕೂಡ ಒಳಗೊಂಡಿದ್ದು, ಸಣ್ಣಪುಟ್ಟ ಸಮಸ್ಯೆಗಳಿಗೆ ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ಸೂಚಿಸಲಾಗುವುದು, ದೊಡ್ಡ ಸಮಸ್ಯೆಗಳೇನಾದರೂ ಕಂಡು ಬಂದಲ್ಲಿ ಅವರಿಗೆ ಗರ್ಭಗುಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ರೋಟರಿ ಶಾಲೆಯ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಈ ಆಸ್ಪತ್ರೆಯಿಂದ ಈಗಾಗಲೇ ಹಲವರು ಅನೇಕ ಉಪಯೋಗಗಳನ್ನು ಪಡೆದುಕೊಂಡಿರುವುದರಿಂದ ಈ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಮಾಜದಲ್ಲಿ ಬಂಜೆತನ ಎನ್ನುವುದೇ ಒಂದು ಶಾಪವಾಗಿದ್ದು, ಅದನ್ನು ಬಗೆಹರಿಸುವ ಪ್ರಯತ್ನಗಳನ್ನು ಗರ್ಭಗುಡಿ ಸಂಸ್ಥೆಯಿಂದ ಆಯೋಜಿಸಲಾಗಿದೆ ಎಂದರು.ಆದ್ದರಿಂದ ಶಿಬಿರಾರ್ಥಿಗಳು ದೂರವಾಣಿ ಸಂಖ್ಯೆ: 9886915556 ಅಥವಾ 9886895556 ಸಂಪರ್ಕಿಸಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ನಿತಿನ್ ಹಾಜರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin