ಝಣ್ ಝಣ್ ಝಣ್‍ಗೆ ಶುಭಾರಂಭ

jan-jan    ಕಳೆದ ನವೆಂಬರ್‍ನಲ್ಲಿ 500, 1000 ನೋಟುಗಳ ಅಪಮೌಲ್ಯೀಕರಣ ಆದ ನಂತರ ದೇಶಾದ್ಯಂತ ಹಳೇ ನೋಟುಗಳ ವರ್ಗಾವಣೆ ಚಟುವಟಿಕೆ ನಡೆಯಿತು. ಈ ಸಂದರ್ಭದಲ್ಲಿ ಅನೇಕ ಅವ್ಯವಹಾರ ಪ್ರಕರಣಗಳೂ ನಡೆದು ಸುದ್ದಿಯಾದವು. ಇಂಥ ಒಂದು ಕಂಟೆಂಟ್ ಇಟ್ಟುಕೊಂಡು ಚಲನ ಚಿತ್ರವೊಂದರನ್ನು ಮೊನ್ನೆ ಆರಂಭಿಸ ಲಾಗಿದೆ. ಆ ಚಿತ್ರದ ಹೆಸರು ಝಣ್ ಝಣ್ ಝಣ್.ಶಿವಕುಮಾರ್ ತಂತಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇಸ್ಕಾನ್ ಎದುರಿನ ಪಂಚತಾರಾ ಹೊಟೇಲೊಂದರಲ್ಲಿ ನೆರವೇರಿತು. ಈ ಸಂಭಾಷಣೆ ಖ್ಯಾತಿಯ ನಟ ಸಂದೇಶ, ನಟಿ ಅಸ್ಮಾ ಹಾಗೂ ಪ್ರಭು ಈ ಚಿತ್ರದಲ್ಲಿ 3 ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಹಲವಾರು ಕಾರ್ಪೊರೇಟ್  ಜಾಹೀರಾತುಗಳನ್ನು ನಿರ್ಮಿಸಿದ್ದ ಶಿವಕುಮಾರ್ ಈ ಚಿತ್ರದ ಮೂಲಕ ಸಿನಿಮಾ ರಂಗಕ್ಕೂ ಎಂಟ್ರಿ ಪಡೆದುಕೊಂಡಿದ್ದಾರೆ.

jan-jan-3
ಮೂರು ಜನ ನಿರ್ಮಾಪಕರು ಸೇರಿ ದಿ ಸರಗಮ್ ಟೀಮ್ ಅಂತ ಮಾಡಿಕೊಂಡು ಈ ಸಿನಿಮಾ ಆರಂಭಿಸಿದ್ದಾರೆ. ಅಭಿಮನರಾಯ ಅವರ ಸಹೋದರ ಅಭಿಷೇಕ್ ಜಿ.ರಾಯ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನೋಹರ ಈ ಚಿತ್ರದ ಛಾಯಾಗ್ರಾಹಕರು. ಕಾಮಿಡಿ, ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥಾನಕ ವನ್ನು ಈ ಚಿತ್ರ ಒಳಗೊಂಡಿದೆ.ಮಧ್ಯಮ ವರ್ಗದ ಕುಟುಂಬಗಳಿಂದ ಬಂದಂಥ ಮೂವರು ಸ್ನೇಹಿತರು ಹಣದ ಹಿಂದೆ ಬಿದ್ದ ಸಂದರ್ಭದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ಈ ಚಿತ್ರದ ಕಥಾ ಹಂದರ.

jan-jan-9
ಒಬ್ಬ ಇಂಟರ್‍ನ್ಯಾಷನಲ್ ಕ್ರಿಮಿನಲ್ ಇವರಿಗೆ ಪರಿಚಯವಾಗಿ ತಾನು ಮಾಡುತ್ತಿರುವ ಹಣ ವರ್ಗಾವಣೆ ಕಾರ್ಯದಲ್ಲಿ ಈ ಹುಡುಗರನ್ನು ಬಳಸಿಕೊಳ್ಳುತ್ತಾನೆ. ಕೊನೆಯಲ್ಲಿ ಈ ಮೂವರು ಆದೇಶ ದ್ರೋಹಿಯನ್ನು ಹಿಡಿದು ಕೊಟ್ಟರೆ ಅಥವಾ ಕಾಸಿನ ಹಿಂದೆ ಬಿದ್ದರಾ ಎನ್ನುವುದೇ ಈ ಚಿತ್ರದ ಕ್ಲೈಮ್ಯಾಕ್ಸ್. ಮೇಜರ್ ಶ್ರೀನಿವಾಸ್ ಅವರು ಈ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. ಬೆಂಗಳೂರು ಸುತ್ತಮುತ್ತ ಬಹುತೇಕ ಚಿತ್ರೀಕರಣ ನಡೆಸಲಾಗುವ ಈ ಚಿತ್ರದ ಹಾಡುಗಳನ್ನು ಚಿಕ್ಕಮಗಳೂರು, ಅಂಡಮಾನ್ ದ್ವೀಪದಲ್ಲಿ ಶೂಟ್ ಮಾಡುವ ಪ್ಲ್ಯಾನ್ ಈ ಚಿತ್ರ ತಂಡಕ್ಕಿದೆ.jan-jan-5

jan-jan-6

jan-jan-6

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin