ಟಾಟ ಏಸ್ಗೆ ಬೈಕ್ ಡಿಕ್ಕಿ : ಸವಾರ ಸಾವು
ತುರುವೇಕೆರೆ,ಅ.3- ದ್ವಿಚಕ್ರವಾಹನ ಟಾಟ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿನ ಬೆಳ್ಳಿ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.ತಾಲೂಕಿನ ದೊಡ್ಡಮಲ್ಲಿಗೆರೆ ವಾಸಿ ಅಬ್ಜಲ್ ಪಾಷ (25) ಮೃತ ದುರ್ದೈವು.ಪಟ್ಟಣದ ಕೆಡೆಯಿಂದ ಮಾಯಸಂದ್ರ ಕಡೆಗೆ ದ್ವಿಚಕ್ರ ವಾಹನಲ್ಲಿ ಅಬ್ಜಲ್ ಪಾಷ ಬರುವಾಗ ಪೆಟ್ರೋಲ್ ಬಂಕ್ ಕಡೆಯಿಂದ ಬಂದ ಟಾಟ ಏಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಬೈಕ್ ಹಿಂಬದಿಯ ಸವಾರ ಮಹಾಮದ್ ಹುಸೇನ್ನ (24) ಅವರಿಗೆ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.