ಟಾಪ್ 1 ಪಟ್ಟ ಕಳೆದುಕೊಂಡ ಭಾರತ

Virat-Kohli--01

ಬೆಂಗಳೂರು, ಸೆ. 29- ಸಿಲಿಕಾನ್ ಸಿಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 4ನೆ ಪಂದ್ಯದಲ್ಲಿ 21 ರನ್‍ಗಳಿಂದ ಸೋಲು ಕಂಡ ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್‍ನಲ್ಲಿ ಟಾಪ್ 1 ಸ್ಥಾನವನ್ನು ಕಳೆದುಕೊಂಡಿದೆ. ಇಂಧೋರ್‍ನಲ್ಲಿ ನಡೆದ 3ನೆ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಬೆನ್ನ ಹಿಂದೆಯೇ ಕೊಹ್ಲಿ ಪಡೆ 120 ಪಾಯಿಂಟ್ಸ್‍ಗಳೊದಿಗೆ ನಂಬರ್ 1 ಪಟ್ಟವನ್ನು ಅಲಂಕರಿಸಿತ್ತು.ಅಂತಿಮ ಪಂದ್ಯದಲ್ಲಿ ಒಂದು ವೇಳೆ ಭಾರತ ತಂಡ ವಿರೋಚಿತ ಗೆಲುವು ಸಾಧಿಸಿ 4-1 ರಿಂದ ಸರಣಿಯನ್ನು ವಶಪಡಿಸಿಕೊಂಡರೆ ಟೀಂ ಇಂಡಿಯಾ ಮತ್ತೆ ನಂಬರ್ 1 ಪಟ್ಟವನ್ನು ಅಲಂಕರಿಸಲಿದೆ.

ಭಾರತ ತಂಡವು ಬೆಂಗಳೂರು ಪಂದ್ಯದಲ್ಲಿ ಸೋಲು ಕಂಡಿರುವುದರಿಂದ ಪ್ರಸ್ತುತ ದಕ್ಷಿಣ ಆಫ್ರಿಕಾವು ಮತ್ತೆ ಅಗ್ರಸ್ಥಾನಿಯಾಗಿದ್ದು , ಅಕ್ಟೋಬರ್ 1 ರಂದು ನಾಗ್ಪುರ ಪಂದ್ಯದ ಫಲಿತಾಂಶದ ಮೇಲೆ ಭಾರತ ನಂಬರ್ 1 ಆಗುತ್ತದೆಯೋ ಅಥವಾ ದಕ್ಷಿಣ ಆಫ್ರಿಕಾವೇ ಅಗ್ರಸ್ಥಾನದಲ್ಲೇ ಮುಂದುವರೆಯುತ್ತದೆಯೋ ಎಂಬುದನ್ನು ನಿರ್ಧರಿಸಲಿದೆ.

Sri Raghav

Admin