ಟಾರ್ಗೆಟ್ 2016 : ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ

Modi-01

ನವದೆಹಲಿ, ಸೆ.1-ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಈಗಾಗಲೇ ರಣತಂತ್ರ ರೂಪಿಸುತ್ತಿರುವ ಬಿಜೆಪಿ, ಕಳೆದ 2014ರಲ್ಲಿ ತಾನು ಸೋತಿದ್ದ ಲೋಕಸಭಾ ಕ್ಷೇತ್ರಗಳನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಕೆಲಸಗಳಲ್ಲಿ ತೊಡಗುವಂತೆ ಎಲ್ಲ ರಾಜ್ಯಸಭಾ ಸದಸ್ಯರುಗಳಿಗೆ ತಾಕೀತು ಮಾಡಿದೆ. ರಾಜಧಾನಿಯಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆದ ಪಕ್ಷದ ಎಲ್ಲ 52 ರಾಜ್ಯಸಭಾ ಸದಸ್ಯರುಗಳ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು ಪಕ್ಷವನ್ನು ಬೇರುಮಟ್ಟದಿಂದ ಬಲಗೊಳಿಸಬೇಕು. ಸರ್ಕಾರದ ಸಾಧನೆಗಳನ್ನು ಸಂಸತ್ತಿನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಬೇಕು ಮತ್ತು ಸಾಮಾಜಿಕ ಜಲ ತಾಣಗಳಲ್ಲಿ ಸಕ್ರಿಯವಾಗಿರಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಮತ್ತು ಉತ್ತಮ ಆಡಳಿತ ನೀಡಲು ಪ್ರಮುಖ ಪಾತ್ರ ವಹಿಸಬೇಕೆಂದು ಸಂಸತ್ತಿನ ಮೇಲ್ಮನೆ ಸದಸ್ಯರಿಗೆ ಅವರು ಸೂಚನೆ ನೀಡಿದರು.   ಅಮಿತ್ ಷಾ ಮಾತನಾಡಿ. 2019ರ ಚುನಾವಣೆಯಲ್ಲಿ ಕಳೆದಕೊಂಡ ಪ್ರತಿ ಲೋಕಸಭಾ ಕ್ಷೇತ್ರವನ್ನು ಪಕ್ಷದ ರಾಜ್ಯಸಭಾ ಸದಸ್ಯರು ದತ್ತು ತೆಗೆದುಕೊಳ್ಳಬೇಕು ಹಾಗೂ ಲೋಕಸಭೆಯ ಪ್ರತಿನಿಧಿಯಂತೆ ಅದನ್ನು ಪೋಷಿಸಬೇಕು. ಇದರಿಂದ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ನೆರವಾಗಲಿದೆ ಎಂದು ಸಲಹೆ ಮಾಡಿದರು.  ಲೋಕಸಭಾ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳಲು ರಾಜ್ಯಸಭಾ ಸದಸ್ಯರುಗಳಿಗೆ ಹಿರಿಯ ಸಚಿವರುಗಳಾದ ಅರುಣ್ ಜೇಟ್ಲಿ, ಎಂ.ವೆಂಕಯ್ಯನಾಯ್ಡು ಮತ್ತು ಮನೋಹರ್ ಪರಿಕ್ಕರ್ ನೆರವಾಗಲಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜವೇಡ್ಕರ್ ಸಭೆಗೆ ತಿಳಿಸಿದರು.

► Follow us on –  Facebook / Twitter  / Google+

Sri Raghav

Admin