ಟಿಂಬರ್ ಲಾರಿ ಓಡಾಟ ನಿಷೇಧದಿಂದ ಮಾಲಿಕರು-ಕಾರ್ಮಿಕರಿಗೆ ಸಂಕಷ್ಟ

Spread the love

chikkamangaluru--3

ಚಿಕ್ಕಮಗಳೂರು, ಆ.30- ಮಳೆ ಇಲ್ಲದಿದ್ದರೂ ರಸ್ತೆ ಹಾಳಾಗುತ್ತದೆ ಎಂಬ ನೆಪದಿಂದ ಜಿಲ್ಲೆಯಲ್ಲಿ ಟಿಂಬರ್ ಲಾರಿ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಮಾಲಿಕರು-ಚಾಲಕರು ಹಾಗೂ ಕಾರ್ಮಿಕರ ತೀವ್ರ ಸಂಕಷ್ಠ ಎದುರಿಸುವಂತಾಗಿದ್ದು ಕೂಡಲೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಆಗ್ರಹಿಸಿದ್ದಾರೆ.

ನಗರದ ಸಹರಾ ಶಾದಿಮಹಲ್‍ನಲ್ಲಿ ಕರೆದಿದ್ದ ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಮತ್ತು ಟಿಂಬರ್ ಮಾಲಿಕರ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ವೈಜ್ಞಾನಿಕವಾಗಿ ಚರ್ಚೆ ಮಾಡಬೇಕಾದಂತ ವಿಚಾರ. ಟಿಂಬರ್ ಲಾರಿ ನಿಷೇಧದಿಂದ ಲಾರಿ ಮಾಲಿಕರು-ಚಾಲಕರು, ಕ್ಲೀನರ್‍ಗಳು ಕುಟುಂಬ ತೊಂದರೆ ಅನುಭವಿಸುವ ಜೊತೆ ಕಾಫಿ ಬೆಳೆಗಾರರು, ರೈತರು , ಸಾಮಿಲ್‍ಗಳ ಕೆಲಸವು ಸಹ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.  ಪಕ್ಷಬೇಧ ಮರೆತು ಎಲ್ಲ ಜನಪ್ರತಿನಿಧಿಗಳು,ರಾಜಕೀಯ ಪಕ್ಷದ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸೋಣ ಎಂದು ಸಲಹೆ ನೀಡಿದರು.  ಸಂಘದ ಜಿಲ್ಲಾಧ್ಯಕ್ಷ ಹಮಾನ್ ಮಾತನಾಡಿ, ಒಂದು ಲಾರಿ ಹಿಂದೆ 50ಜನರ ಜೀವನ ನಡೆಯುತ್ತಿದೆ. ಟಿಂಬರ್ ಲಾರಿಗಳಿಗೆ ಮಾತ್ರ ಈ ಮಾನದಂಡ ಅನ್ವಯಿಸುತ್ತದೆ ಎಂದರೆ ಯಾವನ್ಯಾಯ ಎಂದು ಪ್ರಶ್ನಿಸಿದ ಅವರು, ಸಂಚಾರ ನಿಷೇಧ ಮಾಡುವುದಾದರೆ ಎಲ್ಲರಿಗೂ ಒಂದೆ ಕಾನೂನು ಅನ್ವಯಿಸಲಿ ಎಂದರು.

ಜಿಲ್ಲಾಧಿಕಾರಿಗಳು ವಾಸ್ತವತೆ ಅರಿತು ಶ್ರಮಜೀವಿಗಳಿಗೆ ಸಹಕರಿಸುತ್ತಾರೆಂಬ ನಂಬಿಕೆ ಇದೆ. ವರ್ಷದಲ್ಲಿ ಮೂರು ತಿಂಗಳು ಟಿಂಬರ್ ಲಾರಿಗಳು ಸಂಚಾರ ನಿಲ್ಲಿಸಿದರೆ ಅದನ್ನೆ ಆಶ್ರಯಸಿರುವ ಕುಟುಂಬಗಳು ವಿಷ ಕುಡಿಯುವ ಪರಿಸ್ಥಿತಿ ಎದುರಾಗುತ್ತದೆ. ಇಲ್ಲವಾದರೆ 3ತಿಂಗಳ ಟ್ಯಾಕ್ಸ್ ಮನ್ನಾ ಮಾಡುವಂತೆ ಆಗ್ರಹಿಸಿದರು.ಸಂಘದ ಮುಖಂಡರಾದ ರಫೀಕ್, ಮುನೀರ್, ಮಂಜುನಾಥ್, ಕುಮಾರ್, ಲದೀಮ್, ಅಜ್ಗರ್, ಅತೀಕ್‍ಬೇಗ್, ಬಾಬಾ ಇತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin