ಟಿಕೆಟ್ ನೀಡದಿದ್ದಕ್ಕೆ ದಂಡ : ಬಸ್ ನಲ್ಲೆ ನೇಣಿಗೆ ಶರಣಾದ ಮನನೊಂದು ಕಂಡಕ್ಟರ್
ಕಲಬಯರಗಿ,ಅ5- ಪ್ರಯಾಣಿಕರಿಗೆ ಟಿಕೆಟ್ ನೀಡದ ಕಾರಣ ತಪಾಸಣಾಧಿಕಾರಿ ತರಾಟೆಗೆ ತೆಗೆದು ಕೊಂಡು ದಂಡ ಹಾಕಿದ ಹಿನ್ನಲೆಯಲ್ಲಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿರ್ವಾಹಕ ಮನನೊಂದು ಬಸ್ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಿನಕೇರ ಗ್ರಾಮದ ಬಳಿ ನಡೆದಿದೆ.ಈರಣ್ಣ ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಘಟನೆ ವಿವರ :
ಬೀದರ್ ಡಿಪೊೀಗೆ ಸೇರಿದ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಹೊರಟ್ಟಿತ್ತು ಒಟ್ಟು ನಾಲ್ಕು ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಇಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ಇನ್ನುಳಿದ ಇಬ್ಬರಿಗೆ ನೀಡಿರಲಿಲ್ಲ. ಅದೇ ಸಮಯದಲ್ಲಿ ತಪಾಸಣಾಧಿಕಾರಿಗಳು ಬಂದು ಚೆಕ್ ಮಾಡಿದಾಗ ಟಿಕೆಟ್ ನೀಡದಿರುವ ವಿಷಯ ಗಮನಕ್ಕೆ ಬಂದು ನಿರ್ವಾಹಕನನ್ನು ತೀವ್ರ ತರಾಟೆಗ ತೆಗೆದುಕೊಂಡು ಪ್ರಯಾಣಿಕರಿಗೆ ದಂಡ ವಿಧಿಸಿದರು. ಇದರಿಂದ ಮನನೊಂದ ನಿರ್ವಾಹಕ ಈರಣ್ಣ ಬಸ್ನಲ್ಲಿಯೇ ನೇಣಿಗೆ ಶರಣಾದರೆಂದು ಪೊಲೀಸರು ತಿಳಿಸಿದ್ದಾರೆ. ಚಿಂಚೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.