ಟೀಕೆಗೊಳಗಾಗಿದ್ದ ದಢೂತಿ ಇನ್ಸ್ಪೆಕ್ಟರ್ ತೂಕ ಇಳಿಸಿಕೊಳ್ಳಲು ಮುಂಬೈಗೆ ಬಂದ

Spread the love

Police-inspector

ಮುಂಬೈ, ಫೆ.27-ಟ್ವೀಟರ್‍ನಲ್ಲಿ ವ್ಯಾಪಕ ಟೀಕೆ-ಟಿಪ್ಪಣಿಗೆ ಒಳಗಾದ ಮಧ್ಯಪ್ರದೇಶದ ದಢೂತಿ ಪೊಲೀಸ್ ಇನ್ಸ್ಪೆಕ್ಟರ್ ದೌಲತ್ ರಾಮ್ ಜೋಗಾವತ್ (58) ತಮ್ಮ ಭಾರೀ ತೂಕ ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಿದ್ದಾರೆ.   185 ಕೆಜಿ ತೂಕದ ಇವರು ಕಳೆದ ಮೂರು ವರ್ಷಗಳಿಂದ ಭಾರೀ ಟೀಕೆಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಅಂಕಣಕಾರ್ತಿ ಶೋಭಾ ಡೇ ಅವರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಭಾರೀ ಬಂದೋಬಸ್ತ್ ಎಂದು ಟೀಕಿಸಿದ್ದರು. ಇದಾದ ಬಳಿಕೆ ದೌಲತ್ ರಾಮ್ ವಿವಾದದ ಕೇಂದ್ರ ಬಿಂದುವಾಗಿದ್ದರು. ಈಗ ತಮ್ಮ ಭಾರೀ ಶರೀರವನ್ನು ಇಳಿಸಲು ಮುಂಬೈಗಾಗಿ ಚಿಕಿತ್ಸೆಗೆ ಬಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin