ಟೆಕ್ಕಿ ಮನೆಯಲ್ಲಿ 4 ಲಕ್ಷ ಮೌಲ್ಯದ ವಜ್ರಾಭರಣ ಕಳವು

techie

ಬೆಂಗಳೂರು, ಅ.23-ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಒಳಗೆ ನುಗ್ಗಿರುವ ಕಳ್ಳರು, ಸುಮಾರು ನಾಲ್ಕು ಲಕ್ಷ ರೂ. ಬೆಲೆಯ ಚಿನ್ನ ಹಾಗೂ ವಜ್ರದ ಆಭರಣಗಳನ್ನು ದೋಚಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಚರಕನಹಳ್ಳಿಯ ರಾಮಯ್ಯ ಲೇಔಟ್ ನಿವಾಸಿ ಪಲೋಮಾ ಮ್ಯಾಥ್ಯೂ ಎಂಬ ಸಾಫ್ಟ್‌ವೇರ್ ಇಂಜಿಯರ್ ಮನೆಯಲ್ಲಿ ಕಳ್ಳತನ ನಡೆದಿದೆ. ಮೊನ್ನೆ ರಾತ್ರಿ ಮನೆಯವರು ಮಲಗಿದ್ದ ವೇಳೆ ಕಳ್ಳರು ಅಪಾರ್ಟ್‌ಮೆಂಟ್‌ನ ಬಾಲ್ಕನಿ ಮೂಲಕ ಒಳನುಗ್ಗಿ 4 ಲಕ್ಷ ಬೆಲೆಯ ಚಿನ್ನ ಮತ್ತು ವಜ್ರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Sri Raghav

Admin