ಟೈಮ್ ಸೆಲೆಬೆಕ್ಸ್ ಖ್ಯಾತನಾಮರ ಪಟ್ಟಿಯಲ್ಲಿ ಬಿಗ್ ಬಿ ನಂ.1
ಅತ್ಯಧಿಕ ಸಂಭಾವನೆ ಪಡೆಯುವ ಟಾಪ್-20 ಜಗದ್ವಿಖ್ಯಾತ ನಟರಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಇನ್ನೊಂದು ಸಾಧನೆಯ ಶಿಖರಕ್ಕೇರಿದ್ದಾರೆ. ಟೈಮ್ಸ್ ಸೆಲೆಬೆಕ್ಸ್ ಖ್ಯಾತನಾಮರ ಪಟ್ಟಿಯಲ್ಲಿ ಬಿಗ್ ಬಿ ಮೊದಲ ಸ್ಥಾನದಲ್ಲಿದ್ದಾರೆ. ಈ ಅಭಿನೇತನೊಂದಿಗೆ ನಂ.1 ಸ್ಥಾನ ಪಡೆದಿರುವ ಮತ್ತೊಬ್ಬ ತಾರೆ ಪ್ರಿಯಾಂಕ ಚೋಪ್ರಾ. ಏನಿದು ಟೈಮ್ ಸೆಲೆಬೆಕ್ಸ್ ? ಇದು 2012ರಲ್ಲಿ ಆರಂಭವಾದ ಸೆಲೆಬ್ರೆಟಿಗಳ ಜನಪ್ರಿಯತೆಯನ್ನು ಮಾಪನ ಮಾಡುವ ಮಾಸಿಕ ಶ್ರೇಣಿ ಸೂಚ್ಯಂಕ (ಎಂಆರ್ಐ-ಮಂತ್ಲಿ ರೇಟಿಂಗ್ ಇಂಡೆಕ್ಸ್). ಇದಕ್ಕಾಗಿ ಹಲವಾರು ಮಾನದಂಡ ಕ್ರಮಗಳನ್ನು ಅನುಸರಿಸಲಾಗುತ್ತದೆ.
ತಾರೆಯರ ಬಾಕ್ಸ್-ಆಫೀಸ್ ಸಾಧನೆ, ಮುದ್ರಣ, ವಿದ್ಯುನ್ಮಾನ ಮತ್ತು ಆನ್ಲೈನ್ಗಳಲ್ಲಿ ಸುದ್ದಿಯಲ್ಲಿರುವ ಅವರ ಸಾಮಥ್ರ್ಯ, ಅವರ ಪ್ರಚಾರ ಜನಪ್ರಿಯತೆ, ಇಂಟರ್ನೆಟ್ ಮತ್ತು ಸೋಷಿಯನ್ ಮೀಡಿಯಾದಲ್ಲಿ ಅವರ ಅಭಿಮಾನಿಗಳ ನಡುವೆ ಅವರ ಪಾಪ್ಯುಲಾರಿಟಿ ಮೊದಲಾದ ಅರ್ಹತೆಗಳನ್ನು ರೇಟಿಂಗ್ ನೀಡಲು ಬಳಸಲಾಗುತ್ತದೆ.ಸೆಪ್ಟೆಂಬರ್-2016ರ ಟೈಮ್ಸ್ ಸೆಲೆಬೆಕ್ಸ್ನಲ್ಲಿ ಬಡೇ ಮಿಂಯಾ ಬಚ್ಚನ್ ಮತ್ತು ಪ್ರಿಯಾಂಕಾ ಯಾನೆ ಪಿಗ್ಗ ನಂ.1 ಸ್ಥಾನದಲ್ಲಿದ್ದಾರೆ. ಪಿಂಕ್ ಸಿನಿಮಾ, ರಿಯಾಲಿಟಿ ಶೋ ಸೆಲೆಬ್ರೆಟಿ-ಇವುಗಳಿಂದಾಗಿ ಬಚ್ಚನ್ ಜನಪ್ರಿಯತೆ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಸದಾ ಸುದ್ದಿಯಲ್ಲಿರುವ ಪಿಸಿ ಸುಲಭವಾಗಿ ಅಗ್ರಪಟ್ಟಕ್ಕೇರಿದ್ದಾರೆ. ಟೈಮ್ಸ್ ಸೆಲೆಬೆಕ್ಸ್ನ ಸೆಪ್ಟೆಂಬರ್ ಮಾಸದಲ್ಲಿ ಮುನ್ನಡೆ ಸಾಧಿಸಿದ ಬಾಲಿವುಡ್ ದಿಗ್ಗಜರೆಂದರೆ ಶಾರುಖ್ ಖಾನ್ (2ನೇ ರ್ಯಾಂಕ್), ಸುಶಾಂತ್ ಸಿಂಗ್ ರಜಪೂತ್ (5ನೇ ರ್ಯಾಂಕ್), ಹರ್ಷವಧನ್ ಕಪೂರ್ (17ನೇ ರ್ಯಾಂಕ್). ಇನ್ನು ಅಭಿಶೇಕ್ ಬಚ್ಚನ್, ರಜನೀಶ್ ದುಗ್ಗಲ್, ನೀಲ್ ನಿತೀನ್ ಮುಖೇಶ್, ಅನುಪಮ್ ಖೇರ್, ಧನುಷ್, ರಾಣಾ ದಗ್ಗುಬಾಟಿ ಹೆಸರು ಪಟ್ಟಿಯಲ್ಲಿದೆ.
► Follow us on – Facebook / Twitter / Google+