ಟ್ಯಾಬ್ ಮೂಲಕ ಶಿಕ್ಷಣ ದೇಶದಲ್ಲಿ ಜಾರಿ ದೂರವಿಲ್ಲ

7

ರಾಯಬಾಗ,ಫೆ.11- ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪಠ್ಯ ಪುಸ್ತಕದ ಹೊರೆ ತಗ್ಗಿಸಲು ಕೇವಲ ಒಂದು ಟ್ಯಾಬ್ ಮೂಲಕ ಶಿಕ್ಷಣ ನೀಡುವ ಪ್ರಯೋಗ ಮಾಡುತ್ತಿದ್ದು, ಅದು ಯಶಸ್ವಿ ಕೂಡ ಆಗಿದೆ. ಅಂತಹ ಶಿಕ್ಷಣ ವ್ಯವಸ್ಥೆ ಪದ್ದತಿ ನಮ್ಮ ದೇಶದಲ್ಲಿ ಜಾರಿಗೆ ಬರುವುದು ಇನ್ನು ಬಹಳ ದೂರವಿಲ್ಲವೆಂದು ಇಲ್ಲಿನ ಶ್ರೀ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಬಿ.ಎ. ಮಲಗೌಡನ್ನವರ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಶ್ರೀ ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿ ಕೊಂಡಿದ್ದ ಶ್ರೀ ಸನ್ಮತಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಶ್ರೀ ಚಂದ್ರಪ್ರಭ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ತಂತ್ರಜ್ಞಾನ ದ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಹೊಂದದೇ ಇರುವವರನ್ನು ಅನಕ್ಷರಸ್ಥ ಎಂದು ಪರಿಗಣಿಸುವ ಕಾಲ ಬಂದಿದೆ. ಇಂದು ವಿದ್ಯಾರ್ಥಿಗಳಿಗೆ ಉತ್ಕಷ್ಟ  ವಾದಂತಹ ಜ್ಞಾನವನ್ನು ನೀಡುವುದು ಅತ್ಯವಶ್ಯಕತೆ ಇದೆ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಬೋರಗಾಂವ ಪಿ.ಕೆ.ಪಿ.ಎಸ್. ಅಧ್ಯಕ್ಷ ಉತ್ತಮ ಪಾಟೀಲ ಮಾತನಾಡಿ, ಸರಕಾರದ ಅನುದಾನವಿಲ್ಲದೇ ಒಂದು ಶಿಕ್ಷಣ ಸಂಸ್ಥೆ ನಡೆಸುವುದು ಬಹಳ ಕಷ್ಟದ ಕೆಲಸ.

ಅಂತಹ ಆರ್ಥಿಕ ಸಂಕಷ್ಟದಲ್ಲಿಯೂ ಈ ಸಂಸ್ಥೆ ತಮ್ಮ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಯೋಗ, ಕಂಪ್ಯೂಟರ್ ಶಿಕ್ಷಣ ಹೇಳಿಕೊಡುತ್ತಿರುವುದು ನಿಜಕ್ಕೂ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಲ್ಹಾಪೂರ, ರಾಯಬಾಗ, ಬೆಳಗಾವಿ ಸಂಸ್ಥಾನಮಠದ ಡಾ. ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಅತಿಥಿಗಳಾಗಿ ಬೋರಗಾಂವ ಪಪಂ ಸದಸ್ಯ ಅಭಯ ಮಗದುಮ್ಮ, ಬಾಹುಬಲಿ ಸೊಲ್ಲಾಪೂರೆ, ಚಂದ್ರಕಾಂತ ಪಾಟೀಲ, ರೋಹಿತ ಚೌಗಲಾ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮೀಸೇನ ವಿದ್ಯಾಪೀಠದ ಕಾರ್ಯಾಧ್ಯಕ್ಷ ಶಾಂತಿನಾಥ ಶೆಟ್ಟಿ ವಹಿಸಿದ್ದರು.ಮುಖ್ಯೋಪಾಧ್ಯಾಪಕಿ ಸುರೇಖಾ ಡಿ.ಜೆ., ರತ್ನಪ್ಪ ಉಗಾರೆ, ಸುರೇಂದ್ರ ಬಿರಾಜ, ಚೇತನ ಶೆಟ್ಟಿ, ಮಹಾವೀರ ಶೆಟ್ಟಿ, ಭೀಮಗೌಡ ಬಿರಾದಾರಪಾಟೀಲ, ಅನೀತಾ ಶೆಟ್ಟಿ, ಸರೋಜನಿ ಬಿರಾಜ ಹಾಗೂ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ರಚಿಸಿದ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಂತರ ವಿದ್ಯಾರ್ಥಿಗಳಿದ ಸಾಂಸ್ಕøತಿಕ ಮನೋರಂಜನೆ ಕಾರ್ಯಕ್ರಮ ಜರುಗಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin