ಟ್ಯ್ರಾಕ್ಟರ್-ಟಂಟಂ ಡಿಕ್ಕಿ : 6 ಜನರಿಗೆ ಗಾಯ

Spread the love

ರೋಣ,ಜ.9-ಟ್ಯ್ರಾಕ್ಟರ್ ಮತ್ತು ಟಂಟಂ ರಿಕ್ಷಾ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಎರಡು ವರ್ಷದ ಹಸುಳೆ ಸೇರಿದಂತೆ 6ಜನರು ಗಾಯಗೊಂಡ ಘಟನೆ ತಾಲೂಕಿನ ಚಿಕ್ಕಮಣ್ಣೂರು ಮತ್ತು ರೋಣ ಮಾರ್ಗಮಧ್ಯದ ಕಟ್ಟಿಗೆ ಸೇತುವೆಸಮೀಪದ ಕೋಳಿ ಪಾರ್ಮ್ ಹತ್ತಿರ ತಡರಾತ್ರಿಸಂಭವಿಸಿದೆ.ಎರಡುವರ್ಷದಹಸುಳೆಗಣೇಶ ಯಾವಗಲ್, ಕದಡಿಗ್ರಾಮದ ಶಶಿಕಲಾ ಅಬ್ಬಿಗೇರಿ, ಪಕೀರಯ್ಯ ಅಬ್ಬಿಗೇರಿ, ಸಂದಿಗವಾಡಗ್ರಾಮದ ಬಾಲಕ ಉಮೇಶ ಭೂಸಗೌಡ್ರ ಬಾಸಲಾಪೂರಗ್ರಾಮದಬಸವರಾಜ, ಕೊಣ್ಣೂರ, ಮತ್ತು ಈರಪ್ಪ ಸಂಗಮದಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಪಟ್ಟಣದ ಡಾ.ಭೀಮಸೇನ ಜೋಶಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಗಂಭೀರವಾಗಿ ಗಾಯಗೊಂಡ ಶಶಿಕಲಾ ಅಬ್ಬಿಗೇರಿ ಅವರನ್ನು ಹೆಚ್ಚಿನಚಿಕಿತ್ಸೆಗಾಗಿ ಗದಗ ಜಿಲ್ಲಾ ಸ್ಪತ್ರೆಗೆ ಸೇರಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡುಮುಂದಿನ ತನಿಖೆ ನಡೆಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin