ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡ ಕೊಹ್ಲಿ

Spread the love

virat

ದುಬೈ,ಆ.31- ಇತ್ತೀಚೆಗೆ ಅಮೆರಿಕಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ರನ್ ಬರ ಅನುಭವಿಸಿದರೂ ಕೂಡ ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.  ಕನ್ನಡಿಗ ಕೆ.ಎಲ್.ರಾಹುಲ್ ಅವರು ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಗಳಿಸಿದ್ದರಿಂದ 36 ಸ್ಥಾನಗಳ ಮೇಲ್ಪಂಕ್ತಿ ಪಡೆದು ಪ್ರಸ್ತುತ 31ನೆ ರ‍್ಯಾಂಕಿಂಗ್‌ಗೆ ಜಿಗಿದಿದ್ದಾರೆ.  ಇನ್ನು ಬೌಲಿಂಗ್ ವಿಭಾಗದಲ್ಲಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅವರು ಬೌಲಿಂಗ್ ವಿಭಾಗದಲ್ಲಿ ನಂಬರ್ 1 ಸ್ಥಾನದಿಂದ 4ನೆ ಸ್ಥಾನಕ್ಕೆ ಕುಸಿದಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧದ 2ನೆ ಟ್ವೆಂಟಿ-20 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅಮಿತ್‌ಮಿಶ್ರಾ ಇದೇ ಮೊದಲ ರ‍್ಯಾಂಕಿಂಗ್‌ನಲ್ಲಿ ಗುರುತಿಸಿಕೊಂಡಿದ್ದು 104ನೆ ಸ್ಥಾನದಲ್ಲಿದ್ದಾರೆ.  ಟ್ವೆಂಟಿ-20ಯಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿರುವ ನ್ಯೂಜಿಲ್ಯಾಂಡ್ ತಂಡವು ನಂಬರ್1 ಸ್ಥಾನದಲ್ಲಿದ್ದರೆ, ವೆಸ್ಟ್‌ಇಂಡೀಸ್ ವಿರುದ್ಧ ಸೋತಿರುವ ಭಾರತ 2ನೆ ಸ್ಥಾನದಲ್ಲಿ ಹಾಗೂ ವೆಸ್ಟ್‌ಇಂಡೀಸ್ ತಂಡವು 3ನೆ ಸ್ಥಾನವನ್ನು ಅಲಂಕರಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin