ಡಯಾಬಿಟಿಸ್’ಗೆ ಇನ್ಸುಲಿನ್ ತೆಗೆದುಕೊಳ್ಳುವ ಪ್ರತಿಯೊಬ್ಬರೂ ಓದಲೇಬೇಕಾದ ವಿಷಯ ಇದು..!

Insulene
ಮಧುಮೇಹ (ಡಯಾಬಿಟಿಸ್) ರೋಗಕ್ಕೆ ನೀಡುವ ಚಿಕಿತ್ಸೆಗಳಲ್ಲಿ ಇನ್ಸುಲಿನ್ ಇಂಜೆಕ್ಷನ್ ಪ್ರಮುಖ ಪಾತ್ರ ವಹಿಸುತ್ತದೆ. ಡಯಾಬಿಟಿಸ್ ರೋಗಿಗಳು ಚುಚ್ಚುಮದ್ದಿಗೆ ಭಯಪಡಬಾರದು. ಇದು ರೋಗಿಗಳ ರಕ್ತದಲ್ಲಿನ ಗ್ಲುಕೋಸ್ (ಸಕ್ಕರೆ) ಪ್ರಮಾಣವನ್ನು ನಿಯಂತ್ರಿಸಲು ಹಾಗೂ ಉತ್ತಮ ರೀತಿಯಲ್ಲಿ ಮಧುಮೇಹವನ್ನು ನಿರ್ವಹಣೆ ಮಾಡಲು ನೆರವಾಗುತ್ತದೆ. ಆದರೆ ಸರಿಯಾದ ಕ್ರಮ ಮತ್ತು ವಿಧಾನದಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಇನ್ಸುಲಿನ್ ತೆಗೆದುಕೊಳ್ಳಬೇಕಾದ ವಿಧಾನಗಳ ಬಗ್ಗೆ ಇಲ್ಲಿ ಕೆಲವು ಮುಖ್ಯ ಟಿಪ್ಸ್‍ಗಳನ್ನು ನೀಡಲಾಗಿದೆ.
ಇನ್ಸುಲಿನ್ ಇಂಜೆಕ್ಷನ್ ಸ್ಥಳ ಯಾವುದೇ ಇರಲಿ ವಿಧಾನವು ಅದೇ ರೀತಿಯಾಗಿರುತ್ತದೆ.

> ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.

> ಸ್ವಾಭಾವಿಕ ಗುಣರಹಿತ ಸ್ಪಿರಿಟ್‍ನೊಂದಿಗೆ ಸ್ಥಳವನ್ನು ಸ್ವಚ್ಛಗೊಳಿಸಿ.

> ಮಾಂಸಖಂಡಕ್ಕೆ ಸೂಜಿ ಪ್ರವೇಶಿಸುವುದನ್ನು ತಡೆಯಲು ಚರ್ಮವನ್ನು ಬಿಗಿಯಾಗಿ ಹಿಡಿದುಕೊಂಡು ಚುಚ್ಚಬೇಕು.

> ಸೂಜಿಯನ್ನು ಲಂಬವಾಗಿ ಸೇರಿಸಬೇಕು (ಅಂದರೆ) ಚರ್ಮದ ಮೇಲ್ಮೈಗೆ 90 ಡಿಗ್ರಿಗಳ ಕೋನದಲ್ಲಿ ಚುಚ್ಚಬೇಕು.

> ಈಗ ಚರ್ಮವನ್ನು ಬಿಡುಗಡೆ ಮಾಡಬೇಕು ಮತ್ತು ಇನ್ಸುಲಿನ್‍ನನ್ನು ಚರ್ಮಕ್ಕೆ ಸೇರಿಸಬೇಕು.

> ಸೂಜಿ ಚುಚ್ಚಿದ ಸ್ಥಳದ ಮೇಲೆ ಹತ್ತಿಯನ್ನು ಇರಿಸಬೇಕು ಹಾಗೂ ಸಿರಿಂಜ್‍ನನ್ನು ತೆಗೆಯಬೇಕು.

ಚುಚ್ಚುಮದ್ದು ನೀಡಿದ ನಂತರ ಆ ಜಗದ ಮೇಲೆ ಮಸಾಜ್ ಮಾಡಬಾರದು.ಒಂದು ನಿರ್ದಿಷ್ಟ ಸ್ಥಳವು ಗಟ್ಟಿಯಾಗುವುದು ಅಥವಾ ಊದಿಕೊಳ್ಳುವುದನ್ನು ತಪ್ಪಿಸಲು ಹಾಗೂ ಇನ್ಸುಲಿನ್ ಅಸಮರ್ಪಕವಾಗಿ ಹೀರಿಕೊಳ್ಳುವುದನ್ನು ತಡೆಯಲು ಸ್ಥಳವನ್ನು ವೃತ್ತಾಕಾರವಾಗಿ ಬದಲಿಸುವುದು ಮುಖ್ಯ.

ಇನ್ಸುಲಿನ್ ಇಂಜೆಕ್ಷನ್‍ನಲ್ಲಿ ಅನುಸರಿಸಬೇಕಾದ ಕ್ರಮಗಳು ಇಲ್ಲಿವೆ ಮಾಡಬೇಕಾದುದು : 

> ಆಹಾರ ಸೇವನೆಗೆ 30 ನಿಮಿಷಗಳ ಮುನ್ನ (ಅಥವಾ) ನಿಮ್ಮ ವೈದ್ಯರ ಸಲಹೆಯಂತೆ ಇನ್ಸುಲಿನ್ ತೆಗೆದುಕೊಳ್ಳಿ.

> ಸೂಕ್ತ ಸಿರಿಂಜ್‍ಗಳನ್ನು ಬಳಸಿ (ಯು-40 ಸಿರಿಂಜ್‍ಗಳೊಂದಿಗೆ ಯು-40 ಇನ್ಸುಲಿನ್ ; ಯು-100 ಸಿರಿಂಜ್‍ಗಳೊಂದಿಗೆ ಯು-100 ಇನ್ಸುಲಿನ್) ಸರಿಯಾದ ಚುಚ್ಚುಮದ್ದು ಸ್ಥಳವನ್ನು ಬಳಸಿಕೊಳ್ಳಿ.

> ರೆಫ್ರಿಜರೇಟರ್ ಬಾಗಿಲಿನಲ್ಲಿ ಇನ್ಸುಲಿನ್‍ನನ್ನು ಸಂಗ್ರಹಿಸಿಡಬೇಕು. ರೆಫ್ರಿಜರೇಟರ್ ಇಲ್ಲದಿದ್ದರೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇನ್ಸುಲಿನ್‍ನನ್ನು ಇಟ್ಟು ಎಚ್ಚರಿಕೆಯಿಂದ ಸುತ್ತಬೇಕು ಹಾಗೂ ತಣ್ಣೀರಿನ ಮಡಿಕೆಯೊಳಗೆ ಸಂಗ್ರಹಿಸಿ ಇಡಬಹುದಾಗಿದೆ.

> ಇತರರ ಮೇಲೆ ಅವಲಂಬಿತರಾಗುವ ಬದಲು ನಿಮಗೆ ನೀವೇ ಸೂಜಿಮದ್ದು ತೆಗೆದುಕೊಳ್ಳಿ.

> ಪ್ರಯಾಣದ ವೇಳೆ ತಣ್ಣನೆಯ ಪಾತ್ರೆಯಲ್ಲಿ ಇನ್ಸುಲಿನ್‍ಅನ್ನು ಸಂಗ್ರಹಿಸಿಡಿ.

> ಇನ್ಸುಲಿನ್ ಬಾಟಲ್ ತುಂಬಾ ತಣ್ಣಗಿದ್ದರೆ ನಿಮ್ಮ ಹಸ್ತಗಳ ಮಧ್ಯೆ ಇಟ್ಟು ಉಜ್ಜಿ.

> ಸಕ್ಕರೆ ಪ್ರಮಾಣ ಕಡಿಮೆ ಇದ್ದಲ್ಲಿ ಇನ್ಸುಲಿನ್ 2 ರಿಂದ 3 ಯೂನಿಟ್‍ಗಳಿಗೆ ಇಳಿಸಿ.

ಮಾಡಬಾರದುದು : 

>ನಿಮ್ಮ ವೈದ್ಯರ ಗಮನಕ್ಕೆ ತರದೆ ಇನ್ಸುಲಿನ್‍ಅನ್ನು ಬಿಡಬಾರದು (ಅಥವಾ) ನಿಲ್ಲಿಸಬಾರದು.

>ಬಾಗಿದ ಸಿರಿಂಜ್‍ಗಳು (ಅಥವಾ) ಮೊಂಡ ಸಿರಿಂಜ್‍ಗಳ ಬಳಕೆ.

>ನಿಮ್ಮ ತೋಳುಗಳಿಗೆ ಸ್ವಯಂ ಚುಚ್ಚುಮದ್ದುರೆಫ್ರಿಜರೇಟರ್‍ನ ಫ್ರೀಜರ್ ವಿಭಾಗದಲ್ಲಿ ಸಂಗ್ರಹಿಸಿ ಇಡುವಿಕೆ.

>3-4ಕ್ಕಿಂತ ಹೆಚ್ಚು ಬಾರಿ ಸಿರಿಂಜ್‍ಗಳ ಬಳಕೆ.ಸೂರ್ಯನ ನೇರ ಬೆಳಕಿಗೆ ಇನ್ಸುಲಿನ್‍ಅನ್ನು ತೆರೆದಿಡುವಿಕೆ.

>ಬಾಟಲ್ ತುಂಬಾ ತಣ್ಣಗಿದ್ದಾಗ ಇನ್ಸುಲಿನ್‍ಅನ್ನು ತೆಗೆದುಕೊಳ್ಳುವಿಕೆ.ಇನ್ಸುಲಿನ್ ಮಬ್ಬಾಗಿರದ ಹೊರತು ಇನ್ಸುಲಿನ್ ಬಾಟಲ್‍ಗಳನ್ನು ಅಲ್ಲಾಡಿಸುವಿಕೆ.

ಇನ್ಸುಲಿನ್ ಪೆನ್‍ಗಳು : 

ಮೈಕ್ರೋಫೈನ್ ಸೂಜಿಗಳನ್ನು ಹೊಂದಿರುವ ಪೆನ್ ರೀತಿಯ ಇಂಜೆಕ್ಟರ್‍ಗಳ ಮುಖಾಂತರ ಇನ್ಸುಲಿನ್‍ಅನ್ನು ತೆಗೆದುಕೊಳ್ಳುವ ಮೂಲಕ ನೋವು ರಹಿತ ಚುಚ್ಚುಮದ್ದು ವಿಧಾನಗಳನ್ನು ಈಗ ಅಳವಡಿಸಿಕೊಳ್ಳಬಹುದಾಗಿದೆ. ಇವುಗಳ ವಿಧಾನವು ಮೇಲೆ ತಿಳಿಸಿದ್ದಕ್ಕಿಂತ ತುಂಬ ವಿಭಿನ್ನವಾಗಿರುತ್ತವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin