ಡಾಬಾದಲ್ಲಿದ್ದ ಅಕ್ರಮ ಮದ್ಯ ವಶ

chintamani--alcohol

ಚಿಂತಾಮಣಿ, ಆ.29-ಗ್ರಾಮಾಂತರ ಠಾಣೆ ಪೊಲೀಸರು ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿಯಿರುವ ಡಾಬಾದ ಮೇಲೆ ದಾಳಿ ನಡೆಸಿ ಸುಮಾರು 5ಸಾವಿರ ರೂ. ಬೆಲೆಬಾಳುವ ವಿವಿಧ ಮಾದರಿಯ ಮದ್ಯಗಳನ್ನು ವಶಪಡಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಲಿಯಾಖತ್ ರವರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿಯೊಂದಿಗೆ ಮಾಡಿಕೆರೆ ಕ್ರಾಸ್‍ನಲ್ಲಿಯೇ ಇರುವ ಎಂ.ಕೆ. ಡಾಬಾ ಮೇಲೆ ದಾಳಿ ನಡೆಸಿದಾಗ ವಿವಿಧ ಮಾದರಿಯ ಮದ್ಯಗಳು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಸುಮಾರು 5 ಸಾವಿರ ರೂಗಳ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಡಾಬಾದೊಳಕ್ಕೆ ಪ್ರವೇಶಿಸುತ್ತಿದ್ದಂತೆ ಡಾಬಾದ ಮಾಲೀಕ ಮಂಜುನಾಥ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆ ಪೊಲೀಸರು ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಅರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಅರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Sri Raghav

Admin