ಡಾ.ರಾಜ್‍ಕುಮಾರ್ ಪುಣ್ಯಸ್ಮರಣೆ : ಪುಣ್ಯಭೂಮಿಗೆ ಹರಿದುಬಂದ ಅಭಿಮಾನಿಗಳ ದಂಡು

Spread the love

Rajkumar--1
ಬೆಂಗಳೂರು, ಏ.12- ಕನ್ನಡದ ಮೇರುನಟ, ಮರೆಯಲಾಗದ ಮಾಣಿಕ್ಯ, ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ 11ನೆ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕುಟುಂಬ ಸದಸ್ಯರು ಸಮಾಧಿ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದ ನೆಚ್ಚಿನ
ನಾಯಕ ಡಾ.ರಾಜ್ ಸಮಾಧಿ ಬಳಿ ಬೆಳಗಿನಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಅಭಿಮಾನಿಗಳು ರಾಜ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

 

ಪತ್ನಿ ಪಾರ್ವತಮ್ಮ ರಾಜ್‍ಕುಮಾರ್, ಸಹೋದರಿ ನಾಗಮ್ಮ, ಮಕ್ಕಳಾದ ರಾಘವೇಂದ್ರ ರಾಜ್‍ಕುಮಾರ್, ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅವರು ಪತ್ನಿ ಸಮೇತರಾಗಿ ಬಂದು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಮನೆಯಲ್ಲಿ ಪುಣ್ಯಸ್ಮರಣೆ ಕಾರ್ಯ ನೆರವೇರಿಸಿ, ಡಾ.ರಾಜ್‍ಕುಮಾರ್ ಅವರು ಇಷ್ಟ ಪಡುತ್ತಿದ್ದ ಆಹಾರ ಪದಾರ್ಥಗಳು, ತಿಂಡಿ-ತಿನಿಸುಗಳನ್ನು ಅಲಂಕೃತ ಸಮಾಧಿ ಬಳಿ ಇಟ್ಟು ಪೂಜೆ ಸಲ್ಲಿಸಲಾಯಿತು.

Rajkumar--2

ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ವರನಟ ಡಾ.ರಾಜ್‍ಕುಮಾರ್ ಕ್ಯಾಲೆಂಡರ್ ಹಿಡಿದು ತಮ್ಮ ಅಭಿಮಾನದ ಪರಾಕಾಷ್ಠೆ ಮೆರೆದರು. ವಿಶೇಷವಾಗಿ ನಿನ್ನೆಯಷ್ಟೆ ಬಿಡುಗಡೆಗೊಳಿಸಿದ್ದ ಡಾ.ರಾಜ್ ಸುಪ್ರಭಾತ ಸಿಡಿಯನ್ನು ಅಭಿಮಾನಿಗಳು ಮುಗಿಬಿದ್ದು ಪಡೆದರು. ಇದೇ ಸಂದರ್ಭದಲ್ಲಿ ನೆಚ್ಚಿನ ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Rajkumar--3

Sri Raghav

Admin