ಡಿಕೆಶಿ ನೇತೃತ್ವದ ಪ್ರಚಾರ ಸಮಿತಿಗೆ 70 ಜನರ ತಂಡ ನೇಮಕ
ಬೆಂಗಳೂರು, ಜ.28-ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಚಾರ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದೆ ರಮ್ಯಾ ಸೇರಿದಂತೆ 70 ಜನ ಮುಖಂಡರನ್ನು ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.
ಮಾಜಿ ಸಚಿವ ಅಂಬರೀಶ್, ಬಾಬುರಾವ್ ಚಿಂಚನಸೂರ್, ವಿನಯ್ಕುಮಾರ್ ಸೊರಕೆ, ಸಿ.ಎ.ಇಬ್ರಾಹಿಂ, ಬಿ.ಎಲ್.ಶಂಕರ್, ರಾಣಿ ಸತೀಶ್, ವಿ.ಆರ್.ಸುದರ್ಶನ್, ಜಯಮಾಲಾ, ಮಾಜಿ ಮೇಯರ್ ಪಿ.ಆರ್.ರಮೇಶ್, ಎಂ.ರಾಮಚಂದ್ರಪ್ಪ, ಕವಿತಾರೆಡ್ಡಿ, ಎಸ್.ಮನೋಹರ್, ಅಲ್ಲಂ ಪ್ರಭು ಪಾಟೀಲ್,ಧರ್ಮಸೇನಾ, ಭಾವನಾ, ಅಭಿನಯ, ಸಾಧುಕೋಕಿಲ, ಮಾಲಾಶ್ರೀ, ಸಲೀಂ ಅಹಮ್ಮದ್, ರಿಜ್ವಾನ್ ಅರ್ಷದ್, ಶರಣಪ್ಪ ಮಟ್ಟೂರ್, ಅನಿಲ್ಲಾಡ್, ವಿ.ಎಸ್.ಉಗ್ರಪ್ಪ, ಎಲ್.ಹನುಮಂತಯ್ಯ, ಶಶಿಕುಮಾರ್, ಜಲಜಾನಾಯಕ್, ಮುಖ್ಯಮಂತ್ರಿ ಚಂದ್ರು, ಸಚಿನ್ ಮಿಗಾ ಸೇರಿದಂತೆ 70 ಮಂದಿಯ ತಂಡವನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇದಲ್ಲದೆ, ಮಾಜಿ ಕೇಂದ್ರ ಸಚಿವರು, ಪ್ರಾದೇಶ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರು, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಎಐಸಿಸಿ ಪದಾಧಿಕಾರಿಗಳು, ಸಂಸದರು, ರಾಜ್ಯಸಭಾ ಸದಸ್ಯರು ಖಾಯಂ ಆಹ್ವಾನಿತರಾಗಿರುತ್ತಾರೆ ಎಂದು ಎಐಸಿಸಿ ಕಾರ್ಯದರ್ಶಿ ಜನಾರ್ಧನ ದ್ವಿವೇದಿ ಅವರ ಆದೇಶದಲ್ಲಿ ಪ್ರಕಟಿಸಲಾಗಿದೆ.