ಡಿವೈಡರ್‍ಗೆ ಬೈಕ್ ಡಿಕ್ಕಿ : ವ್ಯಕ್ತಿ ಸಾವು

Spread the love

accident--bikeತುಮಕೂರು, ಸೆ.8- ಮೋಟಾರ್‍ಬೈಕ್ ಡಿವೈಡರ್‍ಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಆಂಧ್ರ ಗಡಿಭಾಗದ ಅಮರಾಪುರ ಸಮೀಪದ ಗೌಡನಕುಂಟೆ ನಿವಾಸಿ ಕುಮಾರ್ (35) ಮೃತಪಟ್ಟ ದುರ್ದೈವಿ.ಕುಮಾರ್ ಹಾಗೂ ಆತನ ಇಬ್ಬರು ಸ್ನೇಹಿತರು ಒಂದೇ ಬೈಕ್‍ನಲ್ಲಿ ಬಟವಾಡಿ ಬಳಿ ಇರುವ ಎಪಿಎಂಸಿ ಯಾರ್ಡ್ ಕಡೆಗೆ ಬರುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಟೆಂಪೋ  ಬರುತ್ತಿದ್ದುದನ್ನು ಕಂಡು ಬೈಕ್ ಸವಾರ ವಿಚಲಿತನಾಗಿದ್ದಾನೆ.
ಟೆಂಪೋ  ಡಿಕ್ಕಿ ಹೊಡೆದುಬಿಡುತ್ತದೆ ಎಂದು ಭೀತಿಗೊಂಡು ಬೈಕನ್ನು ಪಕ್ಕಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ಅದು ಡಿವೈಡರ್‍ಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿದೆ.ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್‍ಪಿ ಚಿದಾನಂದಸ್ವಾಮಿ, ಇನ್ಸ್‍ಪೆಕ್ಟರ್ ಗಂಗಲಿಂಗಯ್ಯ, ಪೂರ್ವ ಸಂಚಾರಿ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಣ್ ಭೇಟಿ ನೀಡಿದ್ದರು. ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಣ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Sri Raghav

Admin