ಡಿಸಿಸಿ ಬ್ಯಾಂಕ್ ಪಟ್ಟಣದಲ್ಲಿ ಖರೀದಿಸಿರುವ ಸೈಟ್ ವ್ಯವಹಾರದಲ್ಲಿ ಮೋಸ

Spread the love

dcc--bank

ತುರುವೇಕೆರೆ, ಅ.16- ಡಿಸಿಸಿ ಬ್ಯಾಂಕ್ ಪಟ್ಟಣದಲ್ಲಿ ಖರೀದಿಸಿರುವ ಸೈಟ್ ವ್ಯವಹಾರದಲ್ಲಿ ಮೋಸವಾಗಿದೆ ಎಂದು ಶಾಸಕರು ಮಾಡಿರುವ ಆರೋಪವನ್ನು ಸಾಬೀತು ಪಡಿಸಲಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ದೇವರಾಜು ಶಾಸಕರಿಗೆ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸೈಟ್ ಖರೀದಿಯಲ್ಲಿ ಪಾರದರ್ಶಕವಾಗಿ ವ್ಯವಹಾರ ನಡೆಸಲಾಗಿದೆ. ಇದರಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ. ಬ್ಯಾಂಕ್‍ನಿಂದ ಸೈಟ್ ಮಾಲೀಕರ ಖಾತೆಗೆ ಹಣವನ್ನು ರವಾನಿಸಿದೆ. ಶಾಸಕರು ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಸಹಕಾರಿ ಕ್ಷೇತ್ರದಲ್ಲಿ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಹಣ ದುರುಪಯೋಗದ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ. ಸೈಟ್ ಖರೀದಿಯ ವಿಷಯದಲ್ಲಿ ಶಾಸಕರಾಗಲಿ ಅಥವಾ ಅವರ ಹಿಂಬಾಲಕರಾಗಲಿ ಆರೋಪವನ್ನು ಸಾಬೀತು ಪಡಿಸಿದರೆ ಸಹಕಾರಿ ಕ್ಷೇತ್ರಕ್ಕೆ ರಾಜೀನಾಮೇ ನೀಡುವುದಾಗಿ ತಿಳಿಸಿದರು.

ತಾಲೂಕಿನ 24 ಸಹಕಾರ ಸಂಘದಗಳಿಗೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು ಅಧ್ಯಕ್ಷರು ಹಾಗೂ ನಿರ್ದೇಶಕರಾಗಿದ್ದಾರೆ ಎಲ್ಲರು ಸಹ ಸಹಕಾರ ಕ್ಷೇತ್ರದಲ್ಲಿ ರಾಜಕೀಯವನ್ನು ಬದಿಗಿಟ್ಟು ರೈತರ ಸೇವೆ ಮಾಡುತ್ತಿದ್ದಾರೆ. ಯಾವುದೇ ತಪ್ಪುಗಳಾದರೆ ಶಾಸಕರು ಕರೆದು ಬುದ್ದಿ ಹೇಳಲಿ ನಾವು ಅವರಿಗೆ ಬಹಳ ಗೌರವ ಕೊಡುತ್ತೇವೆ ಅದನ್ನು ಬಿಟ್ಟು ಕೆಲವು ಹಿಂಬಾಲಕರ ಮಾತುಗಳನ್ನು ಕೇಳಿ ಹುರುಳಿಲ್ಲದ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದರು.ಡಿಸಿಸಿ ಬ್ಯಾಂಕ್ ಸೈಟ್ ಮಾರಿರುವ ಪುಟ್ಟಮ್ಮರ ಹಿರಿಯ ಮಗ ಎ.ಎನ್. ಬೈರೇಗೌಡ ಮಾತನಾಡಿ ನಾವು ಡಿಸಿಸಿ ಬ್ಯಾಂಕ್ ಗೆ 1 ಕೋಟಿ 55 ಲಕ್ಷಕ್ಕೆ ಸೈಟ್ ಕೊಡಲಾಗಿದೆ. ಸೈಟ್ ಮಾರಾಟದಲ್ಲಿ ಯಾರಿಗೂ ಒಂದು ರೂ ಹಣವನ್ನು ನೀಡಿಲ್ಲಾ ಕೇವಲ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟ  ಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಡಿ.ಪಿ.ರಾಜು, ಕೊಳ್ಳಘಟ್ಟ ಶಿವಾನಂದ್, ಮಾಯಸಂದ್ರ ಪುಟ್ಟೇಗೌಡ, ಮಾವಿನಕೆರೆ ಲಿಂಗಪ್ಪ, ಗೊಣಿತುಮಕೂರು ನೆಂಜುಂಡೇಗೌಡ, ದಬ್ಬೇಘಟ್ಟ ಬಾಲಕೃಷ್ಣೇಗೌಡ, ಮಾದಿಹಳ್ಳಿ ಉದಯಕುಮಾರ್, ತಂಡಗ ಚಂದ್ರಣ್ಣ, ಮುನಿಯೂರು ಮೈನ್ಸ್ ರಾಜು, ಕಣಕೂರು ಗಂಗಣ್ಣ ಇತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin