ಡಿ.5ಕ್ಕೆ ಅಪೋಲೋ ಆಸ್ಪತ್ರೆಯಿಂದ ಅಮ್ಮ ಡಿಸ್ಜಾರ್ಜ್..?
ಚೆನ್ನೈ, ನ.19- ತೀವ್ರ ಅನಾರೋಗ್ಯದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಗುಣಮುಖರಾಗಿದ್ದು, ಡಿ.5ರಂದು ಡಿಸ್ಜಾರ್ಜ್ ಆಗುವ ಸಾಧ್ಯತೆ ಇದೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹಂತ ಹಂತವಾಗಿ ಚೇತರಿಸಿಕೊಂಡಿದ್ದು, ಅವರನ್ನು ಸಾಮಾನ್ಯ ವಾರ್ಡ್ಗೆ ಶಿಫ್ಟ್ ಮಾಡುವ ಸಾಧ್ಯತೆಯಿದ್ದು, ಡಿ.5ರೊಳಗೆ ಡಿಸ್ಜಾರ್ಜ್ ಮಾಡಲಾಗುವುದು ಎಂದು ಅವರ ಆಪ್ತ ವಲಯಗಳಿಂದ ತಿಳಿದುಬಂದಿದೆ.
ಕಳೆದ ಎರಡು ತಿಂಗಳಿನಿಂದ ಅವರ ಆರೋಗ್ಯದ ಬಗ್ಗೆ ಗಾಳಿ ಸುದ್ದಿಗಳು ಹಬ್ಬಿದ್ದವು. ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಅವರ ಖಾತೆಗಳನ್ನು ನಿಭಾಯಿಸಲು ಅವರ ಆಪ್ತರಾದ ಪನ್ನೀರ್ ಸೆಲ್ವಂ ಅವರಿಗೆ ವಹಿಸಲಾಗಿತ್ತು. ಅವರು ಗುಣಮುಖರಾಗಲೆಂದು ವಿವಿಧೆಡೆ ಹೋಮ-ಹವನಗಳನ್ನು ಮಾಡಲಾಗಿತ್ತು. ಜಯಲಲಿತಾ ಅವರು ಚೇತರಿಸಿಕೊಂಡು ಡಿಸ್ಜಾರ್ಜ್ ಆಗುತ್ತಿರುವುದು ಅಮ್ಮ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.