ಡೆಂಘಿಗೆ ಬಲಿಯಾದ ಕರ್ನಾಟಕದ ಯೋಧ
ಬಾಗಲಕೋಟೆ/ಶ್ರೀನಗರ,ಜು.9-ಜಮ್ಮು ಕಾಶ್ಮೀರದಲ್ಲಿ ಸೇವೆಯಲ್ಲಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಮ್ಮಡ ಗ್ರಾಮದ ಸಿಆರ್ಪಿಎಫ್ ಯೋಧ ಡೆಂಘಿ ಜ್ವರದಿಂದ ಮೃತಪಟ್ಟಿದ್ದಾರೆ. ಮಂಜುನಾಥ ಕಸ್ತೂರವ್ವ ಮೇತ್ರಿ(30) ಎಂಬುವವರೇ ಸಾವನ್ನಪ್ಪಿರುವ ಯೋಧ. ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಶಾಂತಿ ಮುಕಂದ್ ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ ಅವರಿಗೆ ಡೆಂಘಿ ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಜಮ್ಮುಕಾಶ್ಮೀರದ ಸಿಆರ್ಪಿಎಫ್ನ 28ನೇ ಬೆಟಾಲಿಯನ್ನಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮಂಜುನಾಥ ಪಾರ್ಥಿವ ಶರೀರ ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಗೆ ಸಂಜೆ ಬರಲಿದ್ದು, ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಚಿಮ್ಮಡ ಗ್ರಾಮಕ್ಕೆ ತರಲಿಲಾಗುವುದು.
< Eesanje News 24/7 ನ್ಯೂಸ್ ಆ್ಯಪ್ >