ಡೆಂಘೀ ರೋಗಿಗಳಿಗೆ ಅನುಕೂಲವಾಗುವಂತೆ ರಕ್ತ ಬೇರ್ಪಡಿಸುವ ವ್ಯವಸ್ಥೆ

Spread the love

Dengue-Fever--01

ಬೆಂಗಳೂರು, ಆ.5-ಡೆಂಘೀ ರೋಗಿಗಳಿಗೆ ಅನುಕೂಲವಾಗುವಂತೆ ಎಲ್ಲ ಜಿಲ್ಲೆಗಳಲ್ಲಿ ರಕ್ತ ಬೇರ್ಪಡಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ರೋಗಿಗಳಿಗೆ ಪ್ಲೇಟ್‍ಲೆಟ್‍ಗಳನ್ನು ರಕ್ತದಿಂದ ಬೇರ್ಪಡಿಸಲಾಗುತ್ತದೆ. ಅದಕ್ಕೂ ಕೂಡ ಸರ್ಕಾರ ಇನ್ನು ಒಂದೂವರೆ ತಿಂಗಳೊಳಗೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ನಾಲ್ಕು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಡ್ರಗ್ಸ್ ಮತ್ತು ಲಾಜಿಸ್ಟಿಕ್ ಕೇಂದ್ರದ ಎಲ್ಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ತೀರ್ಮಾನ ಮಾಡಲಾಗಿದೆ. ಏಕೆಂದರೆ ವೈದ್ಯರು ರೋಗಿಗಳಗೆ ನೀಡುವ ಸಲಹೆ ಚೀಟಿಯನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಅಗತ್ಯವಿರುವ ಎಲ್ಲ ಔಷಧಿಗಳು ಡ್ರಗ್ಸ್ ಮತ್ತು ಕೇಂದ್ರದಿಂದ ಪೂರೈಸಲಾಗುತ್ತದೆ ಹಾಗೂ ಆಸ್ಪತ್ರೆ ಮತ್ತು ಲಾಜಸ್ಟಿಕ್ ಕೇಂದ್ರದ ನಡುವೆ ಅಭಿಪ್ರಾಯದ ಭಿನ್ನತೆ ಕಂಡುಬಂದಿರುವುದರಿಂದ ವರ್ಗಾವಣೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಕ್ರಮ ಕೈಗೊಂಡ ನಂತರ ಅವಧಿ ಮುಗಿದ ಔಷಧಿಗಳು ಪತ್ತೆಯಾಗುವುದು ಕಡಿಮೆಯಾಗಿದೆ ಎಂದ ಅವರು, ಸೇಮ್‍ಸಂಗ್ ಇಂಡಿಯಾ ಸಂಸ್ಥೆಯು ಒಂದು ಸಾವಿರ ಟಾಬ್ಲೆಟ್‍ಗಳನ್ನು ಆರೋಗ್ಯ ಕೇಂದ್ರಕ್ಕೆ ನೀಡಿದ್ದು , ಇನ್ನು ಒಂದೂವರೆ ಸಾವಿರ ಟಾಬ್ಲೆಟ್‍ಗಳನ್ನು ನೀಡಲು ಸಿದ್ದರಿದ್ದಾರೆ ಎಂದರು.  ರಾಜ್ಯದಲ್ಲಿ 1872 ಮಂದಿ ರಕ್ತ ಹೀನತೆಯಿಂದ ಬಳಲುತ್ತಿದ್ದು ಅವರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಪ್ಲೇಟ್‍ಲೆಟ್ ತೆರೆಯುತ್ತಿದ್ದು ರೋಗಿಗಳು ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಇದೆ. ಜೊತೆಗೆ 32 ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ. ನವೆಂಬರ್ 1ರ ವೇಳೆಗೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಬಿಆರ್‍ಎಫ್ ಸಂಸ್ಥೆ 89 ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲು ಒಪ್ಪಿಕೊಂಡಿದ್ದು , ಅಕ್ಟೋಬರ್ 15ರ ಒಳಗೆ 50 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಆರಂಭವಾಗಲಿವೆ. ಇಎಸ್‍ಕೆಜಿ ಸಂಸ್ಥೆ 25 ಡಯಾಲಿಸ್ ಕೇಂದ್ರ ಸ್ಥಾಪಿಸಲು ಒಪ್ಪಿಕೊಂಡಿದ್ದು ಅ.15ರೊಳಗೆ 15 ಕೇಂದ್ರಗಳು ಪ್ರಾರಂಭಿಸಲಿವೆ ಎಂದರು. ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಸ್ಥಾಪಿಸುವ ಸಂಬಂಧ ಆಯಾ ಕ್ಷೇತ್ರದ ಸಂಸದರು ಅನುದಾನವನ್ನು ನೀಡಿದ್ದು , ಇದುವರೆಗೂ 20 ಮಂದಿ ಮಾತ್ರ ಅನುದಾನ ನೀಡಿದ್ದಾರೆ ಎಂದರು.

ಜನೌಷಧಿ ಮಳಿಗೆ:

ಮುಂದಿನ ಮೂರು ತಿಂಗಳಲ್ಲಿ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ನಂತರ ಸಮುದಾಯ ಕೇಂದ್ರ ಹಾಗೂ ಪ್ರಾಥಮಿಕ ಕೇಂದ್ರಗಳಿಗೂ ಜನೌಷಧಿ ಮಳಿಗೆಗಳನ್ನು ವಿಸ್ತರಣೆ ಮಾಡಲಾಗುವುದು. ರಾಜ್ಯದಲ್ಲಿ ಮೊದಲ ಹಂತದಲ್ಲಿ ಎರಡು ಸಾವಿರ ಜನೌಷಧಿ ಮಳಿಗೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಡ್ರಗ್ಸ್ ಮತ್ತು ಲಾಜಸ್ಟಿಕ್ ವೇರ್‍ಹೌಸ್ ರೆಡ್‍ಕ್ರಾಸ್ ಸಂಸ್ಥೆಗೆ ವಿಸಲಾಗಿದೆ ಎಂದು ತಿಳಿಸಿದರು.

ತಜ್ಞ ವೈದ್ಯರ ಕೊರತೆ ನೀಗಿಸಲು ರಾಜ್ಯದ 11 ಜಿಲ್ಲೆಗಳಲ್ಲಿ ಡಿಎನ್‍ಬಿ ಕೋರ್ಸ್‍ಗಳನ್ನು ಪ್ರಾರಂಭಿಸಲು ಸಿದ್ದತೆ ನಡೆಸಲಾಗಿದೆ. ಜಯನಗರದ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲು ಅನುಮತಿ ಸಿಕ್ಕಿದೆ ಎಂದರು. ಒಂದೇ ಸ್ಥಳದಲ್ಲಿ 10 ವರ್ಷಕ್ಕೂ ಹೆಚ್ಚು ಅವಧಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯಾ ಬಲವನ್ನು ಆಧರಿಸಿ ಐದರಿಂದ 15ಕ್ಕೆ ಹೆಚ್ಚಿಸಿ ವರ್ಗಾವಣೆ ಮಾಡಲಾಗುವುದು. ಅಕ್ಟೋಬರ್ 2ರ ವೇಳೆಗೆ 4 ಸಾವಿರ ಪ್ಯಾರಾ ಮೆಡಿಕಲ್ ವೈದ್ಯಕೀಯ ಸಿಬ್ಬಂದಿಯನ್ನು ವಿಶೇಷ ನೇಮಕಾತಿಯಡಿ ನೇಮಿಸಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin