ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳನ್ನು ಸ್ವೀಕರಿಸದಿರಲು ಪೆಟ್ರೋಲ್ ಬಂಕ್ ಮಾಲೀಕರ ನಿರ್ಧಾರ ..!

Debit-Card

ಬೆಂಗಳೂರು, ಜ.8-ಪೆಟ್ರೋಲ್ ಬಂಕ್‍ಗಳಲ್ಲಿ ಇನ್ನು ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ ಬಳಕೆ ಇಲ್ಲ. ಪೆಟ್ರೋಲ್, ಡೀಸೆಲ್ ಹಾಕಿಸುವ ವಾಹನ ಸವಾರರು ಹಣ ಇಟ್ಟುಕೊಂಡೇ ಬಂಕ್‍ಗಳಿಗೆ ಹೋಗಬೇಕಿದೆ.   ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ಸರ್ವೀಸ್ ಚಾರ್ಜ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಗದು ನೀಡಿಯೇ ಪೆಟ್ರೋಲ್ , ಡೀಸೆಲ್ ಹಾಕಿಸಿಕೊಳ್ಳಿ ಎಂದು ಮಾಲೀಕರು ಹೇಳುತ್ತಿರುವುದು ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಆಗಿದೆ. ಭ್ರಷ್ಟಾಚಾರ, ಕಪ್ಪು ಹಣ ನಿಗ್ರಹ ಮಾಡುವ ಹಿನ್ನೆಲೆಯಲ್ಲಿ ನೋಟು ನಿಷೇಧ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ಕ್ರಮ ಕೈಗೊಂಡಿದ್ದರು. ನಗದು ರಹಿತ ವ್ಯವಹಾರಕ್ಕೆ ಕರೆ ಕೊಟ್ಟಿದ್ದರು. ಜನ ನಿಧಾನವಾಗಿ ಕ್ಯಾಶ್ ಲೆಸ್ ವ್ಯವಹಾರಕ್ಕೆ ಒಗ್ಗಿಕೊಳ್ಳತೊಡಗಿದ್ದರು.

ಬಹುತೇಕ ಪೆಟ್ರೋಲ್ ಬಂಕ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರ ನಡೆಯುತ್ತಿತ್ತು. ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳನ್ನು ನೀಡಿ ಜನ ತಮ್ಮ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿದ್ದರು. ಆದರೆ ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ಸರ್ವೀಸ್ ಚಾರ್ಜ್ ವಿಧಿಸಿರುವುದರಿಂದ ಇದನ್ನು ವಿರೋಧಿಸಿ ಕಾರ್ಡ್‍ಗಳನ್ನು ಸ್ವೀಕರಿಸದಿರಲು ಬಂಕ್ ಮಾಲೀಕರು ನಿರ್ಧರಿಸಿರುವುದರಿಂದ ನಗದು ರಹಿತ ವ್ಯವಹಾರಸ್ಥರಿಗೆ ತೀವ್ರ ತೊಂದರೆಯಾಗಿದೆ. ಇದ್ದಕ್ಕಿದ್ದಂತೆ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಜನಸಾಮಾನ್ಯರು ಮತ್ತಷ್ಟು ತೊಂದರೆಗೆ ಸಿಲುಕಿಕೊಂಡಿದ್ದಾರೆ.
Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin