ಡೊನಾಲ್ಡ್ ಟ್ರಂಪ್ ಗೆಲ್ಲಲು ರಷ್ಯಾ ನೆರವು..!

Spread the love

Trump-Rassia

ವಾಷಿಂಗ್ಟನ್, ಡಿ.10-ಅಮೆರಿಕ ರಾಜಕೀಯದಲ್ಲೇ ಸಂಚಲನ ಮೂಡಿಸುವ ಸ್ಪೋಟಕ ಮಾಹಿತಿಯೊಂದನ್ನು ದೇಶದ ಬೇಹುಗಾರಿಕೆ ಸಂಸ್ಥೆ-ಸಿಐಎ ಬಹಿರಂಗಗೊಳಿಸಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ರಷ್ಯಾ, ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಗೆಲ್ಲಲು ನೆರವು ನೀಡಿದೆ ಎಂದು ಸಿಐಎ ವರದಿ ತಿಳಿಸಿದೆ. ಆದರೆ ಈ ಆರೋಪಗಳನ್ನು ರಿಪಬ್ಲಿಕನ್ ಪಕ್ಷದ ಮುಖಂಡರು ತಳ್ಳಿ ಹಾಕಿದ್ದಾರೆ.   ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲಬೇಕು ಎಂಬ ಉದ್ದೇಶದಿಂದ ಕೆಲವೆಡೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಪರವಾಗಿ ರಷ್ಯಾ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ಇದೆ ಎಂಬುದಾಗಿ ಸಿಐಎನ ರಹಸ್ಯ ಮೌಲ್ಯಾಂಕನ ವರದಿಯಲ್ಲಿ ತಿಳಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಆದರೆ, ಈ ಹೇಳಿಕೆಗಳನ್ನು ರಿಪಬ್ಲಿಕನ್ ಪಕ್ಷದ ಧುರೀಣರು ತಳ್ಳಿ ಹಾಕಿದ್ದಾರೆ. ಇರಾಕ್ ಅಧ್ಯಕ್ಷ ಸದ್ದಾಂ ಬಳಿ ಸಮೂಹ ನಾಶ ಶಸ್ತ್ರಾಸ್ತ್ರಗಳು ಇವೆ ಎಂದು ಇದೇ ವ್ಯಕ್ತಿಗಳು ಹೇಳಿಇರಾಕ್ ಅಧ್ಯಕ್ಷ ಸದ್ದಾಂ ಬಳಿ ಸಮೂಹ ನಾಶ ಶಸ್ತ್ರಾಸ್ತ್ರಗಳು ಇವೆ ಎಂದು ಇದೇ ವ್ಯಕ್ತಿಗಳು(ಸಿಐಎ) ಹೇಳಿದ್ದರು. ಆದರೆ ಅವುಗಳು ಪತ್ತೆಯಾಗಲಿಲ್ಲ. ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡು ದೀರ್ಘಕಾಲವಾಗಿದೆ. ಆಗ ಈ ಮಾಹಿತಿ ಬೆಳಕಿಗೆ ಬಂದಿರುವ ಔಚಿತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin