ಡೋಂಗಿ ಜ್ಯೋತಿಷಿಗಳಿಗೆ ಸಾರ್ವಜನಿಕರಿಂದ ಧರ್ಮದೇಟು

channapatanna-1

ಚನ್ನಪಟ್ಟಣ, ಆ.18- ಶಾಸ್ತ್ರ ಹೇಳುವ ನೆಪದಲ್ಲಿ ವೃದ್ದೆಯೋರ್ವರಿಗೆ ಕಪ್ಪು ಬಳಿದು ಆಕೆಯ ಮನಸ್ಸನ್ನು ಬೇರೆ ಕಡೆ ತಿರುಗಿಸಿ ಹಣ ಹಾಗೂ ಚಿನ್ನದ ಆಭರಣ ಕಸಿಯುತ್ತಿದ್ದ ಐನಾತಿ ಜ್ಯೋತಿಷಿಯನ್ನು ಹಿಡಿದು ಭರಪೂರ ಗೂಸಾ ನೀಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ನಡೆದಿದೆ.  ಯಶೋಧ ಎಂಬ ಮಹಿಳೆ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿದ್ದಾಗ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ಫುಟ್‍ಪಾತ್ ಮೇಲೆ ಕುಳಿತು ಶಾಸ್ತ್ರ ಹೇಳುವ ಇಬ್ಬರು ಜ್ಯೋತಿಷಿಗಳು ಆಕೆಗೆ ತಮ್ಮ ಶಾಸ್ತ್ರ ಕೇಳುವಂತೆ ಬಲವಂತ ಮಾಡಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿದ್ದ ತಮ್ಮ ಸಂಬಂಧಿಕರನ್ನು ನೋಡಲು ತರಾತುರಿಯಲ್ಲಿ ಆಕೆ ಶಾಸ್ತ್ರ ಕೇಳುವ ಮನಸ್ಸಿಲ್ಲದಿದ್ದರೂ ಅವರಿಬ್ಬರು ನಿಮಗೆ ಶನಿಕಾಟ ಶುರುವಾಗಿದೆ ಎಂದು ಹಲವಾರು ರೀತಿಯಲ್ಲಿ ಮಾಡಿದ್ದಲ್ಲದೆ ಶಾಸ್ತ್ರ ಕೇಳುವಂತೆ ಹಲವಾರು ರೀತಿಯಲ್ಲಿ ನನಗೆ ಹಾಗೂ ಕುಟುಂಬಕ್ಕೆ ಭಾರೀ ನಷ್ಟ ಹಾಗೂ ಅನಾಹುತವಾಗಲಿದೆ.ಈ ಎಲ್ಲಾ ಸಮಸ್ಯೆಗಳು ನಿವಾರಣೆಗೆ ಶಾಂತಿ ಮಾಡಿಸಬೇಕು ಎಂದು ನಂಬಿಸಿದ್ದಾರೆ. ಮಹಾಕಾಳಿ ದೇವಾಲಯ ಪ್ರಸಾದ ಎಂದು ಭರಣಿಯಿಂದ ಕಪ್ಪು ಬಣ್ಣವನ್ನು ತೆಗೆದು ಆಕೆಯ ಹಣೆಗಚ್ಚಿದ ಕೆಲ ಸೆಕೆಂಡುಗಳಲ್ಲಿಯೇ ಆಕೆಯ ಪರ್ಸ್‍ನಲ್ಲಿದ್ದ 2 ಸಾವಿರ ಹಣ ಹಾಗೂ ಆಕೆಯ ಕತ್ತಿನ ಒಂದು ಚಿನ್ನದ ಚೈನು ಅಪಹರಿಸಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.  ಸಾರ್ವಜನಿಕರು ಅವರಿಬ್ಬರನ್ನು ಹಿಗ್ಗಾಮಗ್ಗಾ ಥಳಿಸಿದ್ದಾರೆ.

ಹೆಣ್ಣು ಮಕ್ಕಳೇ ಇವರಿಗೆ ಟಾರ್ಗೆಟ್ :

ಕೆಲ ತಿಂಗಳುಗಳಿಂದಲೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಂಬದಿ ಫುಟ್‍ಪಾತ್ ಮೇಲೆ ಕಾಳಿಕಾ ದೇವಿಯ ಚಿಕ್ಕ ಭಾವಚಿತ್ರ ಹಾಗೂ ರಾಶಿಬಲ ಹೊಂದಿದ ಒಂದು ಕುಂಡಲಿಯ ಜೊತೆ ಕುಳಿತುಕೊಳ್ಳುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಶಾಸ್ತ್ರ ಕೇಳುವಂತೆ ಬಲವಂತ ಮಾಡುತ್ತಿದ್ದರೆಂದು ಹೇಳಲಾಗಿದೆ.  ಶಾಸ್ತ್ರ ಕೇಳಲು ಆಸಕ್ತಿ ಇಲ್ಲ ಎಂದರೂ ಬಿಡದೆ ಈ ಇಬ್ಬರು ಎದ್ದು ಬಂದು ಯೋಗಬಲವಿದೆ. ಅದೃಷ್ಟ ಮನೆಬಾಗಿಲಿಗೆ ಬಂದಿದೆ ಹಾಗೂ ಪ್ರೀತಿ ಪ್ರೇಮದ ವಿಚಾರವಾಗಿಯೂ ಹೇಳಿ ನಿಮ್ಮ ಬಳಿ ನಾವು ಹಣ ಪಡೆಯುವುದಿಲ್ಲ. ಉಚಿತವಾಗಿ ಶಾಸ್ತ್ರ ಹೇಳುತ್ತೇವೆ ಎಂದು ದುಂಬಾಲು ಬೀಳುತ್ತಿದ್ದರು.

► Follow us on –  Facebook / Twitter  / Google+

Sri Raghav

Admin