ಡೋಂಟ್ ವರಿ..ಶನಿವಾರ, ಭಾನುವಾರವೂ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಲಿವೆ

Spread the love

RBI

ನವದೆಹಲಿ,ನ.9- ಕಾಳಧನ ಖೋಟಾನೋಟು ಮತ್ತು ಭ್ರಷ್ಟಚಾರ ತಡೆಗೆ ಸರ್ಜಿಕಲ್ ಸ್ಟೈಕ್ ಮಾದರಿ ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಂಡಿರುವುದರಿಂದ ಜನರ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ನಾಳೆಯಿಂದಲೇ ಅಥವಾ ಶುಕ್ರವಾರದಿಂದಲೇ ಹೊಸ ನೋಡುಗಳು ಜನರ ಕೈಸೇರಲಿವೆ ಎಂದು ಆರ್ಬಿಐ ತನ್ನ ಪ್ರೆಸ್ ನೋಟ್ ನಲ್ಲಿ ತಿಳಿಸಿದೆ. ಮತ್ತೊಂದು ವಿಷಯವೇನೆಂದರೆ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ಬ್ಯಾಂಕ್ ಗಳು ಶನಿವಾರ ಮತ್ತು ಭಾನುವಾರವೂ ಸಹ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.

500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಬ್ಯಾಂಕ್ ವಹಿವಾಟನ್ನು ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಗ್ರಾಹಕರಿಗಾಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಈ ಶನಿವಾರ ಮತ್ತು ಭಾನುವಾರ(ನ.12, 13) ಬ್ಯಾಂಕ್ ಗಳಿಗೆ ರಜೆ ಇಲ್ಲ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೂ ಮೊದಲು ಅಭಯ ನೀಡಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸ ನ.11ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಅತಿ ಭದ್ರತೆಯ ಹೊಸ 500 ರೂ. ಮತ್ತು 2000 ರೂ.ಗಳ ನೋಟುಗಳು ಲಭ್ಯವಿದೆ ಎಂದು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಇಂದು ಬೆಳಗ್ಗೆ ಕರೆಯಲಾದ ತುರ್ತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೊಸದಾಗಿ ಚಲಾವಣೆಗೆ ಬರಲಿರುವ ಕರೆನ್ಸಿ ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗಾ ವಹಿಸಲಿದೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಬಳಕೆಯಾಗದೆ ಬಿದ್ದಿದ್ದ ಸಾಕಷ್ಟು ಹಣ ಅಧಿಕೃತವಾಗಿ ಆರ್ಥಿಕ ವ್ಯವಸ್ಥೆಗೆ ಬರತೊಡಗಿದೆ. ಹೊಸದಾಗಿ ಚಲಾವಣೆಗೆ ಬರಲಿರುವ 500 ರೂ ಮತ್ತು 2000 ರೂ.ಗಳ ಕರೆನ್ಸಿ ಪೂರೈಕೆ ಸುಧಾರಿಸುವ ನಂತರ ಗೊಂದಲ ಪರಿಸ್ಥಿತಿ ಶಮನಗೊಳ್ಳಲಿದೆ ಎಂದು ಅವರು ಹೇಳಿದರು.

ಎಲೆಕ್ಟಾನಿಕ್ ಚಿಪ್ ಇರುವುದಿಲ್ಲ : ಮತ್ತೊಂದು ಮಹತ್ವದ ವಿಚಾರವನ್ನು ಸ್ಪಷ್ಟಪಡಿಸಿದ ಆರ್ಬಿಐ ಹೊಸ  500, 2000 ರೂ. ಮುಖಬೆಲೆ ಹೊಸ ನೋಟಿನಲ್ಲಿ GPS ಅಳವಡಿಸಿಲ್ಲ ಅಥವಾ ನೋಟುಗಳಲ್ಲಿ ಯಾವುದೇ ಎಲೆಕ್ಟಾನಿಕ್ ಚಿಪ್ ಇರುವುದಿಲ್ಲ, ಹೊಸ ನೋಟನ್ನು ವಿಶೇಷ ಕಾಳಜಿಯಿಂದ ತಯಾರು ಮಾಡಿದ್ದು ಎಲೆಕ್ಟಾನಿಕ್ ಚಿಪ್ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin