ಡ್ರಾಪ್ ನೀಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ವಿದೇಶಿಯರಿಬ್ಬರಿಂದ ಅತ್ಯಾಚಾರ

Spread the love

Rape-Bengaluru

ಬೆಂಗಳೂರು,ಅ.28-ಬಾಲಕಿಯೊಬ್ಬಳಿಗೆ ಡ್ರಾಪ್ ನೀಡುವ ನೆಪದಲ್ಲಿ ಆಕೆ ಮೇಲೆ ವಿದೇಶಿಯರಿಬ್ಬರು ಅತ್ಯಾಚಾರ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.  ಕೆ.ಆರ್.ಪುರಂನ ಗಾರ್ಡನ್‍ಸಿಟಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ತನ್ನ ಸ್ನೇಹಿತನ ಮನೆಗೆ ತೆರಳಿ ವಾಪಸ್ ಮನೆಗೆ ಹೋಗುವಾಗ ಕಾರಿನಲ್ಲಿ ಬಂದ ಇಬ್ಬರು ಆಕೆಗೆ ಡ್ರಾಪ್ ಕೊಡುವುದಾಗಿ ವಾಹನಕ್ಕೆ ಹತ್ತಿಸಿಕೊಂಡು ನಂತರ ಅತ್ಯಾಚಾರ ವೆಸಗಿದ್ದಾರೆ ಎಂದು ಹೇಳಲಾಗಿದೆ.  ಕಳೆದ 26ರಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇರಾನ್ ಪ್ರಜೆ ಜಲಾಲ್ ಮತ್ತು ಆಫ್ಘಾನಿಸ್ತಾನದ ಮುಕರಮ್ ಎಂಬುವರನ್ನು ಬಂಧಿಸಲಾಗಿದೆ.   ಸಂತ್ರಸ್ತ ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು , ಮೂಲತಃ ಈಕೆ ಮಣಿಪುರ ರಾಜ್ಯದವರು. ಸ್ನೇಹಿತರ ಜೊತೆ ಕೆಆರ್‍ಪುರಂನಲ್ಲಿ ಮನೆಯಲ್ಲಿ ವಾಸವಾಗಿದ್ದರು ಎಂದು ಪೊ ಲೀಸರು ತಿಳಿಸಿದ್ದಾರೆ. ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.

Gang-Rape

► Follow us on –  Facebook / Twitter  / Google+

Sri Raghav

Admin