ತಂಜಾವೂರಿನಲ್ಲಿ ಜಲ್ಲಿಕಟ್ಟು ವೇಳೆ 50ಕ್ಕೂ ಹೆಚ್ಚು ಜನರಿಗೆ ಗಾಯ

Jallikattu--01

ತಂಜಾವೂರು, ಫೆ.27-ತಮಿಳುನಾಡಿನ ಪ್ರಾಚೀನ ಸಂಸ್ಕøತಿಯ ಪ್ರತೀಕವಾದ ಜಲ್ಲಿಕಟ್ಟು (ಹೋರಿ ಪಳಗಿಸುವ ಸ್ಪರ್ಧೆ) ವೇಳೆ 23 ಸ್ಪರ್ಧಿಗಳೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಂಜಾವೂರಿನ ತಿರುಕನೂರುಪಟ್ಟಿಯಲ್ಲಿ ಸಂಭವಿಸಿದೆ.   ಜಲ್ಲಿಕಟ್ಟು ಕಾರ್ಯಕ್ರಮವನ್ನು ನಿನ್ನೆ ಜಿಲ್ಲಾ ಕಲೆಕ್ಟರ್ ಎ. ಅಣ್ಣಾದುರೈ ಉದ್ಘಾಟಿಸಿದ್ದರು. ಜಲ್ಲಿಕಟ್ಟು ಸ್ಪರ್ಧೆ ವೇಳೆ ಮುನ್ನುಗ್ಗುವ ಗೂಳಿಯನ್ನು ಪಳಗಿಸುವ ಭರದಲ್ಲಿ ಗಾಯಗೊಂಡವರಲ್ಲಿ 18 ಜನರನ್ನು ತಂಜಾವೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕ್ರೀಡೆಗಾಗಿ 276 ಗೂಳಿಗಳು ಭಾಗವಹಿಸಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin