ತನ್ನ ಹೆತ್ತ ಕುಡಿಯನ್ನೇ ಜೀವಂತವಾಗಿ ಸುಟ್ಟುಹಾಕಿದ ತಾಯಿ..!
ಚಿಕ್ಕಬಳ್ಳಾಪುರ, ಏ.22- ಮಾನಸಿಕವಾಗಿ ಬಳಲಿದ್ದ ಮಹಿಳೆಯೊಬ್ಬಳು ತನ್ನ ಹೆತ್ತ ಕುಡಿಯನ್ನೇ ಬೆಂಕಿ ಹಚ್ಚಿ ಧಾರುಣವಾಗಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಕೇಶವಾರದಲ್ಲಿ ನಡೆದಿದೆ.ರಾಜೇಶ್ ಮತ್ತು ನಿರ್ಮಲಾ ದಂಪತಿಗಳ ಒಂದು ವರ್ಷದ ಮಗು ಬಲಿಯಾಗಿದೆ. ನಿರ್ಮಲಾ ಆರು ತಿಂಗಳಿಂದ ಮಾನಸಿಕವಾಗಿ ಬಳಲುತ್ತಿದ್ದಳು.
ನಾವಿಬ್ಬರೂ ಅನ್ಯೋನ್ಯವಾಗಿಯೇ ಇದ್ದು ನಮ್ಮಿಬ್ಬರ ಮಧ್ಯೆ ಯಾವುದೇ ವಾಜ್ಯಗಳಿಲ್ಲ, ಕೂಲಿ ಮಾಡಿಕೊಂಡು ಜೀವನೋಪಾಯ ಕಂಡುಕೊಂಡಿದ್ದ ನಾವು ನಿನ್ನೆಯೂ ಗ್ರಾಮದ ತೋಟವೊಂದಕ್ಕೆ ಕೂಲಿಗೆ ತೆರಳಿದ್ದೆ ಸಂಜೆ ವಾಪಸ್ ಬಂದಾಗ ಈ ಕೃತ್ಯ ತಿಳಿದಿದೆ ಎಂದು ರಾಜೇಶ್ ಪೊಲೀಸರಿಗೆ ತಿಳಿಸಿದ್ದಾನೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >