ತಮಟೆ ಬಾರಿಸಿ ಹಣ ವಸೂಲಿಗೆ ಮುಂದಾದ ಬೇಲೂರು ಪುರಸಭೆ

Spread the love

beluru

ಬೇಲೂರು, ಮಾ.22- ಪುರಸಭೆ ಅಧ್ಯಕ್ಷರ ಆದೇಶದ ಮೇರೆಗೆ ಮುಖ್ಯಾಧಿಕಾರಿ ಬಸವರಾಜು ನೇತೃತ್ವದಲ್ಲಿ ಬಾಡಿಗೆ ವಸೂಲಿಗಾಗಿ ಪುರಸಭೆಯಿಂದ ವಿನೂತನವಾಗಿ ತಮಟೆ ಬಾರಿಸುವ ಮೂಲಕ ಬಾಕಿದಾರರಿಂದ ಬಾಡಿಗೆ ಹಣ ವಸೂಲಿಗೆ ಮುಂದಾದ ಘಟನೆ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ಬಸವರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುರಸಭೆಯೂ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಆದೇಶದಂತೆ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆ, ಆಸ್ತಿಗಳ ತೆರಿಗೆ ಹಾಗೂ ನೀರಿನ ತೆರಗೆಯಿಂದ ಸುಮಾರು 40 ರಿಂದ 50 ಲಕ್ಷಕ್ಕೂ ಹೆಚ್ಚು ಹಣ ಬಾಕಿ ಬರಬೇಕಿದ್ದು, ಇದನ್ನು ಇನ್ನು ಹದಿನೈದು ದಿನಗಳೊಳಗೆ ವಸೂಲು ಮಾಡಬೇಕಿದೆ.

ಈ ಹಿನ್ನೆಲೆಯಲ್ಲಿ ವಿನೂತನವಾಗಿ ಬಾಕಿದಾರರ ಮಳಿಗೆ ಹಾಗೂ ಮನೆಗಳ ಮುಂದೆ ತಮಟೆ ಬಾರಿಸುವ ಮೂಲಕ ಬಾಡಿಗೆ ಹಾಗೂ ತೆರಿಗೆಯನ್ನೂ ವಸೂಲು ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದರಿಂದ ಈಗಾಗಲೆ 10 ಲಕ್ಷಕ್ಕೂ ಹೆಚ್ಚು ಹಣ ವಸೂಲಾಗಿದೆ ಎಂದರು.ಪುರಸಭೆಗೆ ಬಾಡಿಗೆ ಮತ್ತಿತರ ತೆರಿಗೆ ಕಟ್ಟಬೇಕಿರುವವರು ತಕ್ಷಣವೆ ಹಣವನ್ನು ಕಟ್ಟಿ ಪುರಸಭೆಯ ಅಭಿವೃದ್ದಿಗೆ ಕೈ ಜೋಡಿಸಬೇಕು. ಇಲ್ಲದಿದ್ದಲ್ಲಿ ಪುರಸಭೆಯಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಆರೋಗ್ಯಾಧಿಕಾರಿ ವೆಂಕಟೇಶ್, ಸಿಬ್ಬಂದಿಗಳಾದ ನಾಗರಾಜು, ಪೃಥ್ವಿ ಇನ್ನಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin