ತಮಿಳಿನ `ಮೆಟ್ರೋ’ ಈಗ ಕನ್ನಡದಲ್ಲಿ ‘ಸಿಲಿಕಾನ್ ಸಿಟಿ’

Spread the love

silikan CITY

ಈ ಹಿಂದೆ ತಮಿಳಲ್ಲಿ ನಿರ್ಮಾಣವಾಗಿ ಯಶಸ್ವಿ ಪ್ರದರ್ಶನ ಕಂಡ ಚಿತ್ರ `ಮೆಟ್ರೋ’ ಈಗ ಕನ್ನಡ ಭಾಷೆಯಲ್ಲಿ ರೀಮೇಕ್ ಆಗುತ್ತಿದೆ. ಹೌದು. ಸಿಲಿಕಾನ್ ಸಿಟಿ’ ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮುರಳಿಗುರಪ್ಪ ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಬುಧವಾರ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಹಿರಿಯ ನಟ ಅಶೋಕ್, ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್‍ಹೀರೋ ಶಿವರಾಜ್‍ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.

ಮಂಜುಳಾ ಸೋಮಶೇಖರ್ ಹಾಗೂ ಎಂ.ರವಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀನಿವಾಸರಾಮಯ್ಯ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸಡಗರ ರಾಘವೇಂದ್ರ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿದ್ದು, ಅನೂಪ್ ಸಿಳೀನ್‍ರ ಸಂಗೀತ ಸಂಯೋಜನೆ, ಯೋಗರಾಜ್‍ಭಟ್, ಅರಸು ಅಂತಾರೆ ಅವರಸಾಹಿತ್ಯ ರಚನೆ ಈ ಚಿತ್ರಕ್ಕಿದೆ.ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ ಈ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಂಡಿತು. ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ, ಮೆಟ್ರೋ ಯಾವುದೇ ನೇಟಿವಿಟಿಗೆ ಹೊಂದಿಕೊಳ್ಳುವಂಥ ಕಥೆ, ಬೆಂಗಳೂರಿನಲ್ಲಿ ನಡೆದ ಕಥೆ ಎಂದು ಚಿತ್ರದಲ್ಲಿ ತೋರಿಸಿರುವುದರಿಂದ `ಸಿಲಿಕಾನ್ ಸಿಟಿ’ ಎಂಬ ಹೆಸರಿಡಲಾಗಿದೆ. ನಿರ್ದೇಶಕರು ಎಲ್ಲಾ ಪಾತ್ರಗಳನ್ನು ತುಂಬಾ ಚೆನ್ನಾಗಿ ತೋರಿಸುತ್ತಿದ್ದಾರೆ.

ಲವ್ ಹಾಗೂ ಅಂಡರ್‍ವಲ್ರ್ಡ್ ಹಿನ್ನೆಲೆಯುಳ್ಳ ಸಿನಿಮಾ ಇದು. ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸುವ ಪ್ಲಾನ್ ಇದೆ. ಡಿಸೆಂಬರ್ 10ರೊಳಗೆ ಶೂಟಿಂಗ್ ಮುಗಿಸಿ ಮಾರ್ಚ್‍ನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ. ನಾನು ಈವರೆಗೆ ಮಾಡಿರದಂಥ ಪಾತ್ರ ಅನುಭವಿಸದೇ ಇರುವಂಥ ಪಾತ್ರವಿದು. ಈ ರೀತಿಯ ಪ್ಯಾಮಿಲಿ ಡ್ರಾಮಾ, ಅಣ್ಣ-ತಮ್ಮಂದಿರ ಕಥೆ ಹೊಂದಿದ ಚಿತ್ರ ಮಾಡಿದ್ದಿಲ್ಲ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕ ನಟ ಸೂರಜ್ ಮಾತನಾಡಿ, ಇದು ನಾನು ಅಭಿನಯ ಸುತ್ತಿರುವ 4ನೇ ಚಿತ್ರ. ಇದರಲ್ಲಿ ಬೇರೆಯದ್ದೇ ರೀತಿಯ ಪಾತ್ರವಿದೆ ಎಂದು ಹೇಳಿದರು.ನಾಯಕಿ ಕಾವ್ಯಶೆಟ್ಟಿ ಹಾಗೂ ಮತ್ತೊಬ್ಬ ನಾಯಕಿ ಏಕ್ತಾರಾಥೋಡ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿಕ್ಕಣ್ಣ, ಸಾಧುಕೋಕಿಲ, ಅಶೋಕ್, ತುಳಸಿ, ರಮೇಶ್ ಪಂಡಿತ್ ಹಾಗೂ ದಿಲೀಪ್ ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin